ಜಿಲ್ಲಾ ಸುದ್ದಿಗಳು
ಕುಮಟಾ
ಉತ್ತರಕನ್ನಡ ಜಿಲ್ಲೆಯಲ್ಲೆಯ ಲಾಕ್ಡೌನ್ ವೇಳೆ ಸ್ಥಗಿತಗೊಳಿಸಿದ್ದ ಬಸ್ ಸೇವೆಗಳು ಕೆಲ ಹಳ್ಳಿಗಳಲ್ಲಿ ಈವರೆಗೂ ಪ್ರಾರಂಭವಾಗಿಲ್ಲ. ಅದರಲ್ಲೂ ಕುಮಟಾ ಭಾಗದ ಕಡೆ ಈ ಸಮಸ್ಯೆ ಹೇರಳವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ.ಬಸ್ ವ್ವವಸ್ಥೆ ಕಲ್ಪಿಸುವಂತೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾ ಶಾಖೆಯಿಂದ ಗ್ರಾಮೀಣ ಭಾಗಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಿಭಾಗ ಸಂಚಾಲಕರಾದ ಸಂದೇಶ್ ನಾಯ್ಕ, ಜಿಲ್ಲಾ ಸಂಚಾಲಕ ಗಜೇಂದ್ರ , ಕುಮಟಾ ಜಿಲ್ಲಾ ಸಹ ಸಂಚಾಲಕ ವೀರೇಂದ್ರ ಗುನಗಾ, ಕಾರ್ಯಕರ್ತರಾದ ಸೂಜಲ್ , ಪ್ರಸನ್ನ ಹಾಗೂ ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Be the first to comment