ಜಿಲ್ಲಾ ಸುದ್ದಿಗಳು
ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ತಹಶಿಲ್ದಾರರಾದ ಬಸವರಾಜ ಮೆಳವಂಕಿ ರವರು,ಸರ್ಕಾರಿ ನೌಕರರು ಇಂತಹ ಕೋವಿಡ್ ಸಂಧಿಗ್ದ ಕಾಲದಲ್ಲಿ ಕಾರ್ಯದಕ್ಷತೆಯಿಂದ ಕಾರ್ಯ ನಿರ್ವಹಣೆ ಮಾಡುವುದು ಅತೀ ಅವಶ್ಯವಾಗಿದ್ದು ಇಂತಹ ಸೃಜನಾತ್ಮಕ ಕಾರ್ಯ ಮಾಡುತ್ತ ಸಾಗುತ್ತಿರುವ ಸರ್ಕಾರಿ ನೌಕರರ ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಬಾಗಲಕೋಟೆ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,ತಾಲ್ಲೂಕು ಶಾಖೆ ಇಳಕಲ್ ವತಿಯಿಂದ 2022 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ತಹಶಿಲ್ದಾರರ ಕಾರ್ಯಾಲಯದ ಸಭಾ ಭವನ ಇಳಕಲ್ ದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಇಳಕಲ್ ತಾಲ್ಲೂಕಿನ ಸಮಸ್ತ ಸರ್ಕಾರಿ ನೌಕರರ ಪರವಾಗಿ ನೂತನ ತಹಶಿಲ್ದಾರರಾಗಿ ಆಗಮಿಸಿರುವ ಮಾನ್ಯ ಬಸವರಾಜ ಮೆಳವಂಕಿ ರವರಿಗೆ ಗೌರವ ಸನ್ಮಾನ ಹಾಗೂ ಕ್ಯಾಲೆಂಡರ್ ದೇಣಿಗೆ ನೀಡಿದ ಈಶ್ವರ ಗಡ್ಡಿ ಶಿರಸ್ತೇದಾರರಿಗೆ ಸಂಘದ ವತಿಯಿಂದ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಪಮ್ಮಾರ ರವರು ,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೇವಲ ತಮ್ಮ ಬೇಕು ಬೇಡಿಕೆಗಳ ಬಗ್ಗೆ ಮಾತ್ರ ಹೋರಾಟ ಮಾಡದೇ,ನೌಕರರ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದು; ಸಂಘದ ಕಾರ್ಯ ಚಟುವಟಿಕೆಗಳಿಗೆ ಸಹಕರಿಸುತ್ತಿರುವ ಸಮಸ್ತ ಪದಾಧಿಕಾರಿಗಳಿಗೆ ಹಾಗೂ ಸರಕಾರಿ ನೌಕರರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶಿಲ್ದಾರಾದ ಶ್ರೀಮತಿ ರತ್ನಮ್ಮ ಎ,ಶಿರಸ್ತೇದಾರರಾದ ಎಸ್ ಬಿ ಗೌಡರ,ಎ ಜಿ ಸಜ್ಜನ, ಸಂಘದ ಖಜಾಂಚಿ ಎಂ ಎಚ್ ಗೌಡರ, ಉಪಾಧ್ಯಕ್ಷರಾದ ಪ್ರವೀಣ ಮ್ಯಾಗೇರಿ,ವಿಜಯಲಕ್ಷ್ಮಿ ಹಿರೇಮಠ, ಪದಾಧಿಕಾರಿಗಳಾದ ಟಿ ವೈ ಗೊಲ್ಲರ, ನಯನಾ ಕಾಟವಾ,ಕೆ ಬಿ ಕಟ್ಟಿಮನಿ,ಆರ್ ವಿ ಬೋರಣ್ಣವರ,ಎಸ್ ವಿ ಹಿರೇಮಠ, ಎಸ್ ಎಸ್ ಪಟ್ಟಣಶೆಟ್ಟಿ, ಎಸ್ ಎಸ್ ಪತ್ತಾರ,ಬಸೀರ ಮುಜಾವರ,ಎಂ ಪಿ ಗೋಟೂರ, ಶ್ರೀಕಾಂತ ಆವಿನ,ಶೋಭಾ ಸಂಕದಾಳ,ಎಸ್ ಎಸ್ ರೇಶ್ಮಿ, ಭೀಮಣ್ಣ ಹೊಸಮನಿ,ಎಸ್ ಬಿ ಬಿಜಾಪುರ, ಪಿ ಎಚ್ ತಳವಾರ,ಎಲ್ ಎಸ್ ಲೆಕ್ಕದ,ಬಿ ಕೆ ಕುಂಟೋಜಿ, ಗೋರಖನಾಥ ರಾಠೋಡ,ಎಂ ಜಿ ಕಲಾದಗಿ,ಕುಬೇರ ಹೊಂಗಲ್,ಶ್ರೀಶೈಲ ಕಡ್ಲಿಮಟ್ಟಿ, ವಿಜಯ ಗುಡಿಹಿಂದಿನ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು,ಸರ್ಕಾರಿ ನೌಕರರು ಹಾಜರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಕಾರ್ಯದರ್ಶಿ ಗುಂಡಪ್ಪ ಕುರಿ,ಸ್ವಾಗತವನ್ನು ಗೌರವಾಧ್ಯಕ್ಷರಾದ ಎಸ್ ಎನ್ ಗಡೇದ ಹಾಗೂ ವಂದನಾರ್ಪಣೆಯನ್ನು ಜಂಟಿ ಕಾರ್ಯದರ್ಶಿ ಆರ್ ಎಂ ಮಾಸರಡ್ಡಿ ಮಾಡಿದರು.
Be the first to comment