ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅವೈಜ್ಞಾನಿಕ ತೆರಿಗೆಯಿಂದ ಜನರಿಗೆ ಶೋಷಣೆ….!!! ರಾಷ್ಟ್ರಪತಿಗಳ ಮಧ್ಯ ಪ್ರವೇಶಕ್ಕೆ ಬಹುಜನ ಸಮಾಜ ಪಕ್ಷ ಆಗ್ರಹ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಕೇಂದ್ರ ಸರಕಾರ ಪೇಟ್ರೊಲ ಮತ್ತು ಡೀಸೆಲ್ ಮೇಲಿನ ಅವೈಜ್ಞಾನಿಕ ತೆರಿಗೆ ರದ್ದುಗೊಳಿಸಿ ಜನಸಾಮಾನ್ಯರ ಮೇಲೆ ಬೀಳುವ ಹೊರೆಯನ್ನು ತಪ್ಪಿಸಲು ಅವುಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿ ಮುದ್ದೇಬಿಹಾಳ ಪಟ್ಟಣದ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಗುರುವಾರ ತಹಸೀಲ್ದಾರ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.


 


ಕೇಂದ್ರ ಸರಕಾರ ಪೆಟ್ರೊಲ್ ಹಾಗೂ ಡಿಸೆಲ್ ಮೇಲೆ ಶೇ.೩೦೦ಕ್ಕೂ ಹೆಚ್ಚು ತೆರಿಗೆ ವಿಧಿಸಿದ ಪರಿಣಾಮ ಪ್ರತಿ ಲೀಟರ್‌ಗೆ ೧೦೦ ರೂಪಾಯಿಗೂ ಹೆಚ್ಚು ಬೆಲೆಯಾಗಿ ಜನಸಾಮಾನ್ಯರಿಗೆ ಬಹಳ ತೊಂದರೆಯಾಗಿದೆ. ಜಗತ್ತಿನ ಯಾವ ದೇಶದಲ್ಲಿಯೂ ಇಷ್ಟೊಂದು ತೆರಿಗೆ ವಿಧಿಸಿ ದೇಶದ ಪ್ರಜೆಗಳನ್ನು ಶೋಷಣೆ ಮಾಡಿದ ಉದಾಹರಣೆಗಳಿಲ್ಲಾ. ಮೊದಲೆ ಕೋವಿಡ್ ಅಲೇಯಲ್ಲಿರುವ ಜನರಿಗೆ ಪೆಟ್ರೊಲ್ ಮತ್ತು ಡಿಸೆಲ್ ಬೆಲೆ ಏರಿಕೆಯಾಗುವುದಾರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅಲ್ಲದೇ ಕೇಂದ್ರ ಸರಕಾರದ ಈ ಆದೇಶ ಮುಂದಿನ ದಿನಗಳಲ್ಲಿ ದಿನಬಳಕೆ ವಸ್ತು ಸೇರಿದಂತೆ ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಮೆಟ್ಟಿಲಾಗಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಜನತೆಯ ಪರವಾಗಿ ನಿಲ್ಲಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವೈಜ್ಞಾನಿಕವಾಗಿ ಬೆಲೆ ಏರಿಕೆ ಮಾಡಿ ಜನರನ್ನು ಶೋಷಣೆ ಮಾಡಿದಂತಾಗುತ್ತಿದೆ. ಆದ್ದರಿಂದ ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಅವೈಜ್ಞಾನಿ ತೆರಿಗೆ ತಡೆಗಟ್ಟಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ತಹಸೀಲ್ದಾರ ವ್ಹಿ.ಎಸ್.ಕಡಕಭಾವಿಯವರು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಬಿ.ದೊಡಮನಿ, ತಾಲೂಕಾಧ್ಯಕ್ಷ ಮುತ್ತುರಾಜ ತಳವಾರ, ಮಾರುತಿ ಸಿದ್ದಾಪೂರೆ, ಮಹಮ್ಮದರಫೀಲ ಢವಳಗಿ, ಶ್ರೀನಿವಾಸ ಐಹೋಳೆ, ಸಿಂಧೂರ ಉಪ್ಪಲದಿನ್ನಿ ಸೇರಿದಂತೆ ಹಲವರು ಇದ್ದರು.

Be the first to comment

Leave a Reply

Your email address will not be published.


*