ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಸುದ್ದಿಗೋಷ್ಠಿ ಅಂತರ್ ರಾಜ್ಯ ಕಾರು ಕಳ್ಳರ ಬಂಧನ

ವರದಿ: ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು

ದೊಡ್ಡಬಳ್ಳಾಪುರ:

CHETAN KENDULI

ನಗರದ ರೈಲ್ವೆ ನಿಲ್ದಾಣದ ಬಳಿ ಅನುಮಾನಸ್ಪದವಾಗಿ ದಾಖಲೆ ಇಲ್ಲದೆ ಪ್ರಯಾಣಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರು, ವಿಚಾರಣೆ ನಡೆಸಿದಾಗ ಇವರು ಕುಖ್ಯಾತ ಅಂತರರಾಜ್ಯ ಕಾರು ಕಳ್ಳರೆಂಬುದು ಬಯಲಾಗಿದೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಈ‌ ಕುರಿತು ಮಾಹಿತಿ ನೀಡಿದ ಐಜಿಪಿ ಎಂ.ಚಂದ್ರಶೇಖರ್, ಏ.16ರಂದು ನಗರದ ರೈಲ್ವೆ ನಿಲ್ದಾಣದ ಬಳಿ ಗಸ್ತಿನಲ್ಲಿದ್ದ ನಗರ ಪೊಲೈ ಠಾಣೆಯ ಕಾನ್ಸ್‌ಟೇಬಲ್ ಗಳಾದ ಪಾಂಡುರಂಗ ಮತ್ತು ಕುಮಾರ್ ದಾಖಲೆಯಿಲ್ಲದ ಬ್ರಿಜ್ಹಾ ಕಾರನ್ನು ತಡೆದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ತಾಲೂಕಿನ ತೋಗರಿಘಟ್ಟ ಗ್ರಾಮದ ಸುರೇಶ್ (28), ಸುಣ್ಣಘಟ್ಟ ಗ್ರಾಮದ ಲೋಕೇಶ್(28) ಹಾಗೂ ಚನ್ನಾಪುರ ಗ್ರಾಮದ ರೇಣುಕಾ ಪ್ರಸಾದ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ ಎಂದರು.



ಪ್ರಕರಣದಲ್ಲಿ ದೆಹಲಿಯಿಂದ ಐಷಾರಾಮಿ‌ ಕಾರುಗಳನ್ನು ಕಳವು ಮಾಡಿಕೊಂಡು ದೊಡ್ಡಬಳ್ಳಾಪುರಕ್ಕೆ ತಂದು ನಕಲಿ ದಾಖಲೆ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುವುದು, ಅಡವಿಡುವುದು ತಿಳಿದು ಬಂದಿದೆ.

ಇದರನ್ವಯ ಪ್ರಮುಖ ಆರೋಪಿ ಮಾರಸಂದ್ರದ ಶ್ರೀನಿವಾಸ @ ಲಗ್ಗೆರೆ ಸೀನ (31) ಎನ್ನುವವನ ಬಂಧಿಸಿದ್ದು, ಈತನಿಗೆ ನಕಲಿ ದಾಖಲೆ ತಯಾರಿಸಲು ನೆರವು ನೀಡಿದ ಆರ್ ಟಿಒ ಕಚೇರಿಯಲ್ಲಿ ಏಜೆಂಟ್ ಕೆಲಸ ಮಾಡುತ್ತಿದ್ದ ಸಿದ್ದೇನಾಯಕನಹಳ್ಳಿಯ ರೌಡಿ ಶೀಟರ್ ಹೇಮಂತ ಕುಮಾರ್ (36) ಬಂಧಿಸಿ ಐದು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಈ ಆರೋಪಿಗಳು ದೆಹಲಿ‌ ಮೂಲದ ವ್ಯಕ್ತಿಯ ಒಬ್ಬನನ್ನು ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ಆತನ‌ ಮೂಲಕ, ಐಷಾರಾಮಿ ಕಾರುಗಳ ಕಳುವು ಮಾಡಿಸಿ, ಕರ್ನಾಟಕಕ್ಕೆ ತಂದು ಆರ್ ಟಿಒ ಕಚೇರಿಯಲ್ಲಿ ಏಜೆಂಟ್ ಕೆಲಸ ಮಾಡುತ್ತಿದ್ದ ಸಿದ್ದೇನಾಯಕನಹಳ್ಳಿಯ ರೌಡಿ ಶೀಟರ್ ಹೇಮಂತ ಕುಮಾರ್ ಮೂಲಕ ಆರ್ ಟಿಒ ಕಚೇರಿಯಲ್ಲಿ ಆರ್.ಸಿ.ಕಾರ್ಡ್ ಗಳನ್ನು ತರಿಸಿ, ಕಳ್ಳತನ ಮಾಡಿ ತಂದಿದ್ದ ಕಾರುಗಳ ಇಂಜಿನ್ ನಂಬರ್ ಹಾಗೂ ಚಾರ್ಸಿ ನಂಬರ್ ಹಾಕಿ, ನಂತರ ಓಎಲ್ಎಕ್ಸ್ ಮೂಲಕ ಇದೇ ಮಾಡಲ್ ಕಾರುಗಳ ಸರ್ಚ್ ಮಾಡಿ ಅದರ ನೊಂದಣಿ ಸಂಖ್ಯೆಯನ್ನು ಆರ್ಟಿಒ ಕಚೇರಿಯಿಂದ ಕಳವು‌ ಮಾಡಿ ತಂದಿದ್ದ ಆರ್.ಸಿ.ಸ್ಮಾರ್ಟ್ ಕಾರ್ಡ್ ತಯಾರಿಸಿ ಕೆಲವು ಕಾರುಗಳನ್ನು ಮಾರಾಟ ಮಾಡಿ ಮತ್ತೆ ಕೆಲವನ್ನು ಅಡವಿಟ್ಟಿದ್ದಾರೆ.

ಆರೋಪಿಗಳಿಂದ ಉತ್ತರ ಪ್ರದೇಶ, ದೆಹಲಿ ಅಕ್ಕಪಕ್ಕದ ರಾಜ್ಯಗಳ ಸುಮಾರು 50 ಲಕ್ಷ ಬೆಲೆ ಬಾಳುವ 4 ಬ್ರೇಝಾ, 1 ಬೊಲೆರೂ, 1 ಸ್ವಿಪ್ಟ್, 1 ಎಕ್ಸ್ ಯೂವಿ ಕಾರು, 45 ಆರ್.ಸಿ. ಕಾರ್ಡುಗಳು, ಒಂದು ಕಂಪ್ಯೂಟರ್, ಸ್ಮಾರ್ಟ್ ಕಾರ್ಡ್ ಮುದ್ರಿಸುವ ಪ್ರಿಂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ನಾಲ್ಕನೆ ಆರೋಪಿ ಶ್ರೀನಿವಾಸ ಝೂಮ್ ಕಾರ್ ನಲ್ಲಿ ಕಾರುಗಳನ್ನು ಬಾಡಿಗೆ ಪಡೆದು, ವಾಪಸ್ ನೀಡದೆ ದಾಖಲೆ ಬದಲಿಸಿ ಅಡವಿಟ್ಟಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಆರೋಪಿಗಳು ನಡೆಸಿರುವ ಕಾರುಗಳ್ಳತನದ ಬಗ್ಗೆ ವಿವಿಧೆಡೆ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಹಾಗೂ ಕಳವು ವಾಹನಗಳ ಪತ್ತೆ ಮಾಡಿದ ವಿಶೇಷ ತಂಡದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಹಿರಿಯ ಅಧಿಕಾರಿಗಳು‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದವರು ತಿಳಿಸಿದರು.

 

Be the first to comment

Leave a Reply

Your email address will not be published.


*