ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಶ್ರೀ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್, ಪೊಲೀಸ್ ಇಲಾಖೆ, ಕಲಾ ಸಿಂಚನ ತಂಡ ಹಾಗೂ ತಾಲೂಕಾ ಪತ್ರಕರ್ತರಿಂದ ಪಟ್ಟಣದಲ್ಲಿ ಯಮ, ಚಿತ್ರಗುಪ್ತರ ವೇಷಧಾರಿಗಳಿಂದ ಕೊರೊನಾ ನಿಯಂತ್ರಣಾ ಕುರಿತು ಬೀದಿ ನಾಟಕವಾಡುತ್ತಾ ವಿನೂತನ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಬೀದಿ ನಾಟಕವಾಡುವ ಸಂದರ್ಭದಲ್ಲಿಯೂ ಕೂಡಾ ನಾಟಕದಾರರಾದ ಯಮನ ಪಾತ್ರದಲ್ಲಿ ನಟಿಸಿದ ಹಾಸ್ಯ ಕಲಾವಿದ ಸಿಂಚನಾ ಕಲಾ ತಂಡದ ಗೋಪಾಲ ಹೂಗಾರ, ರಂಗಭೂಮಿ ಕಲಾವಿದ ದಾದಾಪೀರ ಚಿತ್ರಗುಪ್ತನ ಪಾತ್ರದಲ್ಲಿ ನಾಟಕ ಪ್ರದರ್ಶನದಲ್ಲಿ ಸಾಮಾಜಿಕ ಅಂತರದ ಬಗ್ಗೆ ನಿಗವಿಟ್ಟು ಮಾಡಿದ್ದು ಎಲ್ಲರ ಗಮನ ಸೇಳೆಯಿತು. ಜನ ಜಾಗೃತಿಯ ಮುಖ್ಯಸ್ಥೆಯನ್ನು ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು ಮಾತನಾಡಿ, ಕೇವಲ 10 ರೂಪಾಯಿಯ ಮಾಸ್ಕ ಧರಿಸದ ವ್ಯಕ್ತಿಯು ಕೊರೊನಾ ದೃಢಪಟ್ಟಾಗ ಆಸ್ಪತ್ರೆಯಲ್ಲಿ ಅಂದಾಜು 1 ಲಕ್ಷದ ವರೆಗೂ ಹಣ ನೀಡಬೇಕಾಗುತ್ತದೆ. ಇದರೊಂದಿಗೆ ಕೊರೊನಾ ದೃಢಪಟ್ಟ ವ್ಯಕ್ತಿಯಿಂದ ಅನೇಕ ಜನರು ಸಂಪರ್ಕದಲ್ಲಿದ್ದರೇ ಅವರೂ ಕೂಡಾ ಕೊರೊನಾ ಸಂಕಷ್ಟಕ್ಕೆ ಒಳಗಾಗುವ ದುಸ್ಥಿತಿ ಎದುರಾಗಬಹುರು. ಆದ್ದರಿಂದ 10 ರೂಪಾಯಿ ಮಾಸ್ಕ ಧರಿಸಿ ನಿವೂ ಆರೋಗ್ಯದಿಂದಿರಿ ಮತ್ತು ನಿಮ್ಮೊಂದಿಗಿರುವವರನ್ನೂ ಆರೋಗ್ಯದಿಂದ ಬಾಳಲು ಅವಕಾಶ ಮಾಡಿಕೊಡಿ ಎಂದು ತಿಳಿಹೇಳಿದರು.
ಮುದ್ದೇಬಿಹಾಳ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಚಾಲನೆಗೊಂಡ ಮಾಸ್ಕ ಅಭಿಯಾನವು ಇಂದಿರಾ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಾಸ್ಕ ಹಾಗೂ ಸಾನಿಟೈಜರ್ ಬಳಕೆ ಮಾಡುವ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು. ಜಾಗೃತಿ ಅಭಿಯಾನದಲ್ಲಿ ಸಿಪಿಐ ಆನಂದ ವಾಘ್ಮೋಡೆ, ಪಿಎಸ್ಐ ಎಂ.ಬಿ.ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಡಿ.ಬಿ.ವಡವಡಗಿ, ಗುರುನಾಥ ಕತ್ತಿ, ಶಿವಕುಮಾರ ಶಾರದಳ್ಳಿ, ಲಾಡ್ಲೇಮಶಾಕ ನದಾಫ, ಮುತ್ತು ವಡವಡಗಿ, ಸಿದ್ದು ಚಲವಾದಿ, ಅಮೀನ ಮುಲ್ಲಾ, ಪರಶುರಾಮ ಕೊಣ್ಣೂರ ಸೇರಿದಂತೆ ಇತರರಿದ್ದರು.
Be the first to comment