ಹೊನ್ನಾವರದ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ವಿವಿಧ ಇಲಾಖೆ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆ

ವರದಿ-ಸುಚಿತ್ರಾ ನಾಯ್ಕ.ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಹೊನ್ನಾವರ ತಾಲೂಕಿನ ವಿವಿಧ ಇಲಾಖೆ ಹಾಗೂ ಲಯನ್ಸ ಕ್ಲಬ್ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು, ಈ ಸಂದರ್ಭದಲ್ಲಿ ಸೇವಾ ನಿವೃತ್ತ ಮತ್ತು ವಿವಿಧ ರಂಗದಲ್ಲಿ ಸಾಧನೆ ಮಾಡಿದಶಿಕ್ಷಕರನ್ನುಸನ್ಮಾನಿಸಿಗೌರವಿಸಲಾಯಿತು.ಹೊನ್ನಾವರ ತಾಲೂಕಿನ ವಿವಿಧ ಇಲಾಖೆ ಹಾಗೂ ಲಯನ್ಸ ಕ್ಲಬ್ ಸಹಯೋಗದೊಂದಿಗೆ ಶಿಕ್ಷಕ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ. ಪಂ. ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಗುರುಗಳ ಮಾರ್ಗದರ್ಶನವಿಲ್ಲದೇ ಇದ್ದರೆ ಸೂತ್ರವಿಲ್ಲದ ಗಾಳಿಪಟವಿದ್ದಂತೆ. ಆತನು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಕಾಲ ಮುಗಿದಿದೆ. ಶಿಕ್ಷಕ ಮತ್ತು ವಿದ್ಯಾರ್ಥಿ ನಡುವೆ ಉತ್ತಮ ಒಡನಾಟ ಮೂಡಿದಾಗ ಮಾತ್ರ ಸಮಾಜದಲ್ಲಿ ಚಿರಸ್ಥಾಯಿಯಾಗಲು ಸಾಧ್ಯ ಎಂದರು.

CHETAN KENDULI

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಜೆ.ಕೈರನ್ ಮಾತನಾಡಿ ಶಿಕ್ಷಕರ ದಿನಾಚರಣೆ ಸೆಪ್ಟೆಂಬರ್ ಐದಕ್ಕೆ ಮಾತ್ರ ಸೀಮಿತ ವಾಗಬಾರದು. ನಾನು ಶಿಕ್ಷಕ ಎಂಬ ಭಾವನೆ ನಿರಂತರ ಇರಬೇಕು. ಜನರು ನಮ್ಮನ್ನು ಗಮನಿಸುತ್ತಾರೆ. ನಾವು ಆದಷ್ಟು ಕಾಳಜಿಯಿಂದ ಇರಬೇಕು. ನಾವು ಯಾವತ್ತೂ ಶಿಕ್ಷಕರೇ, ನಿವೃತ್ತರಾದರೂ ಶಿಕ್ಷಕರೇ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ನಾಗರಾಜ ನಾಯ್ಕಡ್ ವಹಿಸಿದ್ದರು.ಮುಖ್ಯ ಅತಿಥಿಗಳಾದ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುರೇಶ ನಾಯ್ಕ, ಲಯನ್ಸ್ ಅಧ್ಯಕ್ಷ ವಿನೋದ ನಾಯ್ಕ ಮಾವಿನಹೊಳೆ ಸಭೆಯನ್ನು ಉದ್ದೇಸಿಸಿ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸವಿತಾ ನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೇವೆಯಿಂದ ನಿವೃತ್ತಿಯಾದ ಶಿಕ್ಷಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಎಸ್. ಎಸ್. ಎಲ್. ಸಿ. ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ನಾಯ್ಕ ಹಾಗೂ ಗೇರುಸೊಪ್ಪಾ ಪ್ರೌಡಶಾಲೆಯ ಮುಖ್ಯೊಪಧ್ಯಾಯರಾದ ನಾಗರಾಜ ಹೆಗಡೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ರಂಗದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ, ಕಾರ್ಯದರ್ಶಿ ಕೆ. ಎಂ. ಹೆಗಡೆ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಜಿಲ್ಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷರಾದ ಸುದೀಶ ನಾಯ್ಕ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಸಾಧನ ಬರ್ಗಿ, ಪ್ರೌಢ ಶಾಲಾ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹೇಶ ಶೆಟ್ಟಿ ಕವಲಕ್ಕಿ, ತಾಲೂಕಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಬು ಎನ್. ನಾಯ್ಕ ಹಾಗೂ ತಾಲೂಕಿನ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*