ನಾಮಕಾವಸ್ತೆಗೆ ಬೋರ್ಡ್ ಅನಾವರಣ* *ಸಾರ್ವಜನಿಕರ ಗಮನಕ್ಕೆ ತರದೆ, ಏಕಾಏಕೀ ಬೋರ್ಡ್ ಅಳವಡಿಕೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 


ದೇವನಹಳ್ಳಿ

*ಪುರಸಭೆ ಕಾರ್ಯಾಲಯ ವೈಖರಿ ಬಗ್ಗೆ ಸಾರ್ವಜನಿಕರ ಆಕ್ರೋಶ* ಸಾರ್ವಜನಿಕರ ಗಮನಕ್ಕೆ ತರದೆ, ಸಭೆಯನ್ನು ಆಯೋಜಿಸದೆ, ಪ್ರಕಟಣೆಯನ್ನು ತಿಳಿಯಪಡಿಸದೆ, ಏಕಾಏಕೀ ಸಾರ್ವಜನಿಕ ವಲಯದಲ್ಲಿ ದ್ವಿಚಕ್ರವಾಹನ ನಿಲ್ಲುಸುವುದು ನಿಷೇಧಿಸಿರುವ ಪುರಸಭೆ ಕಾರ್ಯಾಲಯದ ವೈಖರಿ ಬಗ್ಗೆ ಸಾರ್ವಜನಿಕ ವಲಯ ಆಕ್ರೋಶವ್ಯಕ್ತಪಡಿಸುತ್ತಿದೆ.ದೇವನಹಳ್ಳಿ ಪಟ್ಟಣದ ಹೃದಯಭಾಗದಲ್ಲಿರುವ ಗಿಡ್ಡಿಬಾಗಿಲು ರಸ್ತೆಯ ಮೂಲಕ ಗಾಂಧಿ ಬಜಾರ್ ಸೇರಿದಂತೆ, ವಿವಿಧ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸವಾರರು ಇನ್ಮುಂದೆ ಬೋರ್ಡ್‌ಗಳನ್ನು ಗಮಿಸುವುದು ಅತ್ಯವಶ್ಯಕವಾಗಿದೆ. ಇಲ್ಲವಾದರೆ ಯಾವ ಸಮಯದಲ್ಲಾದರೂ ದಂಡ ಬೀಳಬಹುದು. ಕಳೆದ ಮೂರು-ನಾಲ್ಕು ದಿನಗಳ ಹಿಂದೆ, ಸಾರ್ವಜನಿಕರ ಗಮನಕ್ಕೆ ತರದೆ ಏಕಾ ಏಕಿ ಪೊಲೀಸ್ ಠಾಣೆಯ ಪಕ್ಕದಲ್ಲಿ ಹಾದುಹೋಗುವ ರಸ್ತೆಯ ಪಕ್ಕದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

CHETAN KENDUALI

ರಸ್ತೆಯ ಒಂದು ಭಾಗದಲ್ಲಿ ಸುಮಾರು ವರ್ಷಗಳಿಂದ ದ್ವಿಚಕ್ರವಾಹನ ನಿಲುಗಡೆಯನ್ನು ವಾಹನ ಸವಾರರು ಮಾಡಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಪಟ್ಟಣವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪುರಸಭೆಯವರು ಸಂಚಾರಿ ಪೊಲೀಸರ ಸಹಕಾರ ಪಡೆದು ನಿಷೇಧಿತ ಬೋಡ್‌ಗಳನ್ನು ಅಳವಡಿಸಿದ್ದಾರೆ. ಆದರೆ, ಇಲ್ಲಿಗೆ ನೂರಾರು ಜನರು ಏರ್‌ಪೋರ್ಟ್ ಸೇರಿದಂತೆ ವಿವಿಧ ಜಾಗಗಳಿಗೆ ಕೆಲಸಕ್ಕೆ ಮತ್ತು ರೈತರು ಮಾರುಕಟ್ಟೆಗೆ ಹೋಗಲು ಅವರ ವಾಹನಗಳನ್ನು ಪೊಲೀಸ್ ಠಾಣೆಯ ಬಳಿ ರಕ್ಷಣೆ ಸಿಗುತ್ತದೆ ಎಂಬ ಕಾರಣದಿಂದ ನಿಲುಗಡೆ ಮಾಡುತ್ತಿದ್ದಾರೆ. ಈ ವರೆಗೂ ಪೊಲೀಸ್ ಠಾಣೆಯ ಸಿಬ್ಬಂದಿ ಯಾವುದೇ ತರಹದ ತಕಾರರು ಮಾಡಿರಲಿಲ್ಲ. ಇದೀಗ ಪುರಸಭೆಯವರು ವಾಹನ ನಿಲುಗಡೆ ನಿಷೇಧಿತ ಬೋರ್ಡ್ ಅಳವಡಿಸಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಡಿ.ಕೆ.ಮಹೇಂದ್ರಕುಮಾರ್ ಮಾತನಾಡಿ, ಹಲವಾರು ವರ್ಷಗಳಿಂದ ಇಲ್ಲಿ ಪಾರ್ಕಿಂಗ್ ಇದೆ. ಪೊಲೀಸ್ ಠಾಣೆ ಪಕ್ಕದಲ್ಲಿರುವುದರಿಂದ ವಾಹನಕ್ಕೆ ರಕ್ಷಣೆ ಇರುತ್ತದೆ ಎಂಬ ಉದ್ದೇಶದಿಂದ ಇಲ್ಲಿ ನಿಲುಗಡೆ ಮಾಡುತ್ತಾರೆ. ಬೋರ್ಡ್ ಹಾಕುವುದರ ಮುಂಚಿತವಾಗಿ ಮೊದಲು ಸಾರ್ವಜನಿಕರಿಗೆ ಪ್ರಚಾರ ಪಡಿಸಬೇಕು. ಏನೂ ಮಾಡದೇ ಏಕಾಏಕೀ ವಾಹನ ನಿಲುಗಡೆಗೆ ನಿಷೇದಿತ ಪ್ರದೇಶ ಎಂದು ಬೋರ್ಡ್ ಅಳವಡಿಸಿರುವುದು ಸರಿಯೇ?. ಇದನ್ನು ಕಾರ್ಯಗತಗೊಳಿಸುವ ಮುನ್ನಾ ಸಾರ್ವಜನಿಕರಿಗೆ ಪ್ರಕಟಣೆಯ ಮೂಲಕ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾಧ್ಯಕ್ಷೆ ರೇಖಾವೇಣುಗೋಪಾಲ್ ಮಾತನಾಡಿ, ಸಾರ್ವಜನಿಕರ ಗಮನದಲ್ಲಿಲ್ಲ ಎಂಬುವುದು ತಪ್ಪು. ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಬೋರ್ಡ್ ಅಳವಡಿಸಲಾಗಿದೆ. ನಮ್ಮ ನಗರ ಸುಂದರವಾಗಿರುವ ಕಾರಣಕ್ಕೆ ಅಭಿವೃದ್ಧಿಗೊಳಿಸಲು ಸಹಕಾರ ನೀಡಬೇಕು. ಪಾರ್ಕಿಂಗ್ ಸ್ಥಳಕ್ಕಾಗಿ ಸಾರ್ವಜನಿಕ ಶೌಚಾಲಯದ ಮುಂಭಾಗದ ರಸ್ತೆ, ಕೆಇಬಿ ಹಿಂಭಾಗದ ರಸ್ತೆಯಲ್ಲಿ ಪಾರ್ಕಿಂಗ್‌ಗಾಗಿ ಸ್ಥಳಾವಕಾಶ ನೀಡಲಾಗಿದೆ. ಸೋಮವಾರದಿಂದ ಇದನ್ನು ಕಾರ್ಯಗತಕ್ಕೆ ತರಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

Be the first to comment

Leave a Reply

Your email address will not be published.


*