ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ನಂದಿಕ್ರಾಸ್‌ಗೆ ಹೋಗುವ ರಸ್ತೆಯ ಪಕ್ಕದಲ್ಲಿದ್ದ ಬೃಹತ್ ಒಣ ಮರದ ಕೊಂಬೆಯೊಂದು ರಸ್ತೆಗೆ ಬಿದ್ದಿದೆ. ಇದೇ ಸಂದರ್ಭದಲ್ಲಿ ಹಾದು ಹೋಗುತ್ತಿದ್ದ ಕಾರೊಂದಕ್ಕೆ ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ.
ಮಧ್ಯಾಹ್ನ 1 ಗಂಟೆಯ ಸಂದರ್ಭದಲ್ಲಿ ಒಣ ಮರದಲ್ಲಿ ನೇತಾಡುತ್ತಿದ್ದ ಬಾರಿ ಗಾತ್ರದ ಕೊಂಬೆಯೊಂದು ದಿಡೀರನೆ ರಸ್ತೆಗೆ ಬಿದ್ದಿದೆ. ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಲೇ ಇರುತ್ತದೆ. ಅದೃಷ್ಟಾವಶತ್ ಅನಾಹುತ ತಪ್ಪಿದ್ದು, ಗ್ರಾಮಸ್ಥರ ಸಹಕಾರದೊಂದಿಗೆ ಮುರಿದು ಬಿದ್ದಂತಹ ಮರದಕೊಂಬೆಯನ್ನು ರಸ್ತೆ ಪಕ್ಕಕ್ಕೆ ಎಸೆಯಲಾಗಿದೆ. ಈ ರಸ್ತೆಯಲ್ಲಿ ಹಲಾವರು ಒಣ ಮರಗಳು ತಾಂಡವಾಡುತ್ತಿದ್ದು, ಇತ್ತೀಚೆಗಷ್ಟೇ ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ಕಡಿಯಲಾಗಿತ್ತು. ಕೆಲವು ಮರಗಳು ಕಡಿಯದೆ ಹಾಗೆಯೇ ಉಳಿಸಿಕೊಂಡಿರುವುದರಿಂದ ಯಾವ ಸಂದರ್ಭದಲ್ಲಿ ಮರಗಳ ರೆಂಬೆಗಳು ಬೀಳುತ್ತವೆಯೋ ಎಂಬ ಆತಂಕದಲ್ಲಿ ಸಂಚರಿಸುವಂತೆ ಆಗಿದೆ.
Be the first to comment