ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕುಂದಾಣ ಹೋಬಳಿಯಲ್ಲಿರುವ ಆರು ಗ್ರಾಮ ಪಂಚಾಯಿತಿಗಳಲ್ಲಿ ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಂದ ಬಿರುಸಿನ ಮತದಾನ ನಡೆಯಿತು.ಆಲೂರು ದುದ್ದನಹಳ್ಳಿ ಮತ್ತು ಕೊಯಿರ ಗ್ರಾಪಂಗಳಲ್ಲಿ ಬೆಳಿಗ್ಗೆ 11ರ ನಂತರ ಮತದಾನ ಚುರುಗೊಂಡಿತ್ತು. ಇನ್ನುಳಿದ ಗ್ರಾಮ ಪಂಚಾಯಿತಿಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು. ಕೆಲವು ಕಡೆಗಳಲ್ಲಿ ಮತದಾನಕ್ಕೆ ಚುನಾಯಿತ ಸದಸ್ಯರುಗಳು ಗುಂಪುಗುಂಪಾಗಿ ಒಂದೇ ಬಾರಿಗೆ ಗ್ರಾಪಂ ಮತದಾನ ಕೊಠಡಿಗೆ ಹೋಗಿ ಸಾಲುಸಾಲಾಗಿ ಮತವನ್ನು ಚಲಾಯಿಸಿದರು. ಗ್ರಾಪಂಯಿಂದ ೧೦೦ಮೀಟರ್ ಅಂತರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾಂತಿಯುತ ಮತದಾನವಾಗಿದ್ದು, ಕೆಲವು ಸದಸ್ಯರನ್ನು ಬೆಂಬಲಿಗ ಅಭ್ಯರ್ಥಿಯ ಪರವಾಗಿ ಮುಖಂಡರು ಸದಸ್ಯರಿಗೆ ಮತಹಾಕುವಂತೆ ಮನವಿ ಮಾಡಿದರು. ಕುಂದಾಣ ಹೋಬಳಿಯಾದ್ಯಂತ ಶೇ.೧೦೦ರಷ್ಟು ಮತದಾನ ಪ್ರಕ್ರಿಯೆ ಮಧ್ಯಾಹ್ನ ೩ಗಂಟೆಯೊಳಗೆ ಮುಕ್ತಾಯಗೊಂಡಿತು. ಮತದಾನ ಮಾಡಿದ ನಂತರ ಸದಸ್ಯರು ಆಯಾ ಪಂಚಾಯಿತಿಯಿಂದ ಹೊರಬಂದು ಮುಖಂಡರೊಂದಿಗೆ ಗೆಲುವಿನ ಮೊಗತೋರಿದರು.
Be the first to comment