ರಾಜ್ಯ ಸುದ್ದಿಗಳು
ಅಂಬಿಗ್ ನ್ಯೂಸ್:
ಈಗಾಗಲೇ ಎಸ್.ಟಿ. ಸಮುದಾಯದಲ್ಲಿ 49 ಸೇರ್ಪಟ್ಟಿದ್ದು ಕುರುಬ ಸಮಾಜದ ಜೇನು ಕುರುಬ, ಕಾಡು ಕುರುಬಗೊಂಡ ಮತ್ತು ರಾಜಗೊಂಡ ಎಸ್.ಟಿ. ಮೀಸಲಾತಿಯಲ್ಲಿ ಸೇರಿಸಲಾಗಿದೆ. ಇದನ್ನು ಪರಿಗಣಿಸಿ ಸಂಪೂರ್ಣ ಕುರುಬ ಸಮಾಜವನ್ನು ಎಸ್.ಟಿ. ಗೆ ಸೇರ್ಪಡಿಸಿದರೆ ಇಡೀ ಮರಾಠ ಸಮಾಜವನ್ನೂ ಎಸ್.ಟಿ. ಗೆ ಸೇರ್ಪಡೆ ಮಾಡಬೇಕು ಎಂದು ಸಮಸ್ತ ಲಿಂಗಾಯತ ಹೋರಾಟ ವೇದಿಕೆ ಮುಖ್ಯ ಸಂಘಟಕ ಬಿ.ಎಂ. ಚಿಕ್ಕನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೊಡಗು ಜಿಲ್ಲೆಯ ಮಾರಾಠಾ ಮತ್ತು ದಕ್ಷಿಣ ಕನ್ನಡ ಜಿಲ್ಲಾಯ ಮರಾಠಿ ಎಂಬ ಸಮುದಾಯಗಲೂ ಎಸ್.ಟಿ. ಯಲ್ಲಿ ಸೇರಿದ್ದಾವೆ. ಕುರುಬ ಸಮಾಜದ ಜೇನು ಕುರುಬ, ಕಾಡು ಕುರುಬಗೊಂಡ ಹಾಗೂ ರಾಜಗೊಂಡ ಸಮುದಾಯಗಳಂತೆ ಇಡೀ ಕುರುಬ ಸಮುದಾಯವನ್ನೇ ಎಸ್.ಟಿ. ಗೆ ಸೇರಿಸಿದರೆ ಮಾರಾಠ ಸಮುದಾಯವನ್ನೂ ಎಸ್.ಟಿ. ಗೆ ಸೇರ್ಪಡೆ ಮಾಡಬೇಕು ಎಂದು ಹೇಳಿದ್ದಾರೆ.
ಮರಾಠ ಸಮುದಾಯವನ್ನು ಎಸ್.ಟಿ. ಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಲಿಂಗಾಯತ ಸಮುದಾಯದ ಸಹಕಾರದೊಂದಿಗೆ ಹೋರಾಟ ನಾಯಕತ್ವವನ್ನು ಸಮಸ್ತ ಲಿಂಗಾಯತ ಹೋರಾಟ ವೇದಿಕೆ ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.
Be the first to comment