ಕಾಳಸಂತೆಯಲ್ಲಿ‌ ರೆಮ್​ಡೆಸಿವಿರ್ ಮಾರಾಟಕ್ಕೆ ಯತ್ನ: 11 ಆರೋಪಿಗಳ ಬಂಧನ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

ಬಾಗಲಕೋಟೆ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಳೆ ಐಬಿ ಹತ್ತಿರ ಬಾಗಲಕೋಟ ಜಿಲ್ಲಾ ಸರಕಾರಿ ಆಸ್ಪತ್ರೆಯ ವಾಡ್೯ ಬಾಯ್ ನಗರದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯವರಿಗೆ ಕೋವಿಡ್-19 ರೋಗಿಗಳಿಗೆ ಕೊಡುವ ರೆಮ್ ಡಿಸಿವರ್ ಇಂಜೆಕ್ಷನ್ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 11 ಜನ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.

ಒಂದು ಇಂಜೆಕ್ಷನ್ ಗೆ 18000 ರೂಪಾಯಿಗಳಂತೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿ ಬಂದ ತಕ್ಷಣ ಕೂಡಲೇ ಪರಶುರಾಮ್.ಆರ್ ಸಹಾಯಕ ಔಷಧ ನಿಯಂತ್ರಕರು ಬಾಗಲಕೋಟ ಹಾಗೂ ಮಲ್ಲಯ್ಯ ಮಠಪತಿ ಪಿಎಸ್ಐ ಸಿಇಎನ್ ಕ್ರೈಂ ಠಾಣೆ ಮತ್ತು ಇಬ್ಬರು ಸರ್ಕಾರಿ ಪಂಚ ಜನರನ್ನು ಕರೆದುಕೊಂಡು ದಾಳಿ ಮಾಡಲಾಗಿ 11 ಜನ ಆರೋಪಿಗಳು ಸಿಕ್ಕಿದ್ದು ಅವರ ಹತ್ತಿರ ಇದ್ದ 14 ತುಂಬಿದ ರೆಮ್ ಡಿಸೀವರ್ ಇಂಜೆಕ್ಷನ್ ಹಾಗೂ 2 ಖಾಲಿ ರೆಮ್ ಡಿಸೀವರ್ ಇಂಜೆಕ್ಷನ್ ಮತ್ತು 30 ಸಾವಿರ ರೂಪಾಯಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿತರ ಮೇಲೆ ಬಾಗಲಕೋಟೆ ಸಿಇಎನ್ ಕ್ರೈಂ ಪೊಲೀಸ್ ಠಾಣೆ ಗುನ್ನ ನಂಬರ್ 8/ 2021 ಕಲಂ:7 ಇ.ಸಿ.ಆ್ಯಕ್ಟ್ 409, 420 ಮತ್ತು 34 ಐಪಿಸಿ, 4,5,6,13 ಡ್ರಗ್ಸ ಕಂಟ್ರೋಲ್ ಆ್ಯಕ್ಟ್-1950 ,4 ಮತ್ತು 5 ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ- 2020ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸದರಿ ದಾಳಿಯನ್ನು ಬಾಗಲಕೋಟೆಯ ಎಸ್.ಪಿ ಲೋಕೇಶ್ ಜಗಲಾಸರ ಇವರ ಮಾರ್ಗದರ್ಶನದಲ್ಲಿ ವಿಜಯ್ ಮುರಗುಂಡಿ ಪಿಎಸ್ಐ ಬಾಗಲಕೋಟ ಶಹರ್ ಠಾಣೆ, ಮಲ್ಲಯ್ಯ ಮಠಪತಿ ಪಿಎಸ್ಐ ಸಿಇಎನ್ ಕ್ರೈಂ, ಮಣಿಕಂಠ ಪೂಜಾರಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ಆರೋಪಿತರಿಗೆ ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಬಾಗಲಕೋಟೆ ಎಸ್.ಪಿ ಲೋಕೇಶ್ ಜಗಲಾಸರ ಇವರು ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

Be the first to comment

Leave a Reply

Your email address will not be published.


*