ಆಟೋ ರಿಕ್ಷಾ ಸಂಘದಿಂದ ಉಚಿತ ವಾಹನ ಸೌಲಭ್ಯ ಪಡೆದ 211 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು

ಶಿರಸಿ

CHETAN KENDULI

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿರುವ ಬಡ, ಅಂಗವಿಕಲ, ಬಸ್ ಸೇವೆ ಇಲ್ಲದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶಿರಸಿ ಆಟೋಚಾಲಕರ ಹಾಗೂ ಮಾಲಕರ ಸಹಾಯ ಸಹಕಾರದಿಂದ ಉಚಿತ ಆಟೋ ಸೇವೆ ವ್ಯವಸ್ಥೆ ಕಲ್ಪಿಸಿದ್ದು, ವಿದ್ಯಾರ್ಥಿಗಳು 211 ಇದರ ಪ್ರಯೋಜನ ಪಡೆದುಕೊಂಡರು. ಉಚಿತವಾಗಿ 25 ಆಟೋರಿಕ್ಷಾಗಳು ಹಾಗೂ 3 ವ್ಯಾನ್ ಗಳು ಪರೀಕ್ಷೆ ಕೇಂದ್ರಗಳಿಗೆ ಹೋಗಿ ಬರಲು ವ್ಯವಸ್ಥೆ ಮಾಡಲಾಗಿದ್ದು, ಜು.19 ಸೋಮವಾರ 102 ವಿದ್ಯಾರ್ಥಿ ಗಳು ಹಾಗೂ ಗುರುವಾರ 109 ವಿದ್ಯಾರ್ಥಿ ಗಳು ಓಟ್ಟು ಎರಡು ದಿನಗಳಲ್ಲಿ 211 ವಿದ್ಯಾರ್ಥಿ ಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

ಈ ಸೇವೆಗೆ ಉದ್ಯಮಿಗಳಾದ ಜೀವನ ಪೈ ಚಿಪಗಿ 2 ವರ್ಷಗಳಿಂದ ಉಚಿತ ಸೇವೆಯಲ್ಲಿ ಕೈ ಜೋಡಿಸಿದ್ದಾರೆ. ಮತ್ತು ಈ ಯೋಜನೆಯು ಸುಗಮವಾಗಿ ನಡೆಯಲು ಸಹಕಾರ ನೀಡಿದ ಡಿಡಿಪಿಐ ಅವರಿಗೆ, ಮನೆ ಮನೆಗೆ ಮಾಹಿತಿ ತಲುಪಲು ನೇರವಾದ ಮಾಧ್ಯಮಗಳ ಮಿತ್ರರಿಗೆ, ಗಣ್ಯರಿಗೆ, ಪೆÇೀಲಿಸ್ ಇಲಾಖೆಗೆ ಪಾಲಕರಿಗೆ, ಪರೀಕ್ಷಾ ವಿದ್ಯಾರ್ಥಿ ಗಳಿಗೆ ಶಿರಸಿಯ ಎಲ್ಲಾ ಆಟೋಚಾಲಕ-ಮಾಲಕರಿಗೆ ಶ್ರೀ ಮಾರಿಕಾಂಬಾ ಆಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಆಟೋ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ ಅಭಿನಂದಿಸಿದ್ದಾರೆ. ಮತ್ತು ಮುಂದಿನ ವರ್ಷವೂ ನಮ್ಮ ಸೇವೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*