ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ: ಡಾ.ಶಿವಶರಣಪ್ಪ ಇತ್ಲಿ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಉತ್ಕೃಷ್ಟ ಶಿಕ್ಷಣ ಪಡೆದು ದೇಶಕ್ಕೆ ಆಸ್ತಿಯಾಗಬೇಕು ಎಂದು ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಶಿವಶರಣಪ್ಪ ಇತ್ಲಿ ಕರೆ ನೀಡಿದರು.ಸ್ಥಳೀಯ ವೀರರಾಣಿ ಕಿತ್ತೂರು ಚನ್ನಮ್ಮ ಪಿಯು ಕಾಲೇಜ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿಶೈಕ್ಷಣಿಕ ಕ್ಷೇತ್ರದಲ್ಲಿ ಪರಿಶ್ರಮ ಇರುವಲ್ಲಿ ಸರಸ್ವತಿ ನೆಲೆಸುತ್ತಾಳೆ. ಶಿಕ್ಷಣ ನೀಡುವ ಹಾಗೂ ಪಡೆಯುವ ಉತ್ಸಾಹದ ಜೊತೆ ಅನುಭವವಿರಬೇಕು. ಜ್ಞಾನಕ್ಕೆ ಪೇಟೆಂಟ್ ಎನ್ನುವುದಿಲ್ಲ. ಶಿಕ್ಷಣ ನೀಡಲು ಸಜ್ಜಾಗಿ ನಿಂತಿರುವ ಕಟ್ಟದ ಹೂರಣ ಅದ್ಭುತವಾಗಿದೆ. ಇಲ್ಲಿನ ಪರಿಸರ ಎಲ್ಲ ಹಂತದಲ್ಲಿ ಪರಿಶುದ್ಧವಾಗಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗೆ ಸರಸ್ವತಿ ಒಲಿಯಲಿದ್ದಾಳೆ ಎಂದು ಅವರು ಹೇಳಿದರು.
ಖ್ಯಾತ ವರ್ತಕರಾದ ಪಂಪಣ್ಣ ಗುಂಡಳ್ಳಿ ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಮತ್ತು ಜೀವನಕ್ಕೆ ಬೇಕಾದ ನೀತಿಯನ್ನು ಉಪನ್ಯಾಸಕರು ಬೋಧಿಸಬೇಕು. ಈ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಕಾಲೇಜಿಗೆ ಕೀರ್ತಿ ತರುವಂತಹವರು ನಿವಾಗಬೇಕು ಎಂದು ಹೇಳಿದರು.

CHETAN KENDULI

ನೂತನ ಕಾಲೇಜು ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮುಖಂಡರಾದ ಮಹಾದೇವಪ್ಪ ಗೌಡ ಪೋಲಿಸ್ ಪಾಟೀಲ್, ಯಲ್ಲೋಜಿರಾವ್ ಕೊರೆಕರ್,ಮಲ್ಲಪ್ಪ ಕುಡತಿನಿ,ಸಂಸ್ಥೆಯ ಅಧ್ಯಕ್ಷರಾದ ಸುಭಾಷ್ ಕೊರೆಕರ್,ಖಜಾಂಚಿ ಪಿ. ರಾಮು,ಕಾಲೇಜಿನ ಪ್ರಾಚಾರ್ಯ ಲಕ್ಷ್ಮಣ ಕರ್ಲಿ,ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇನ್ನತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*