ರಾಜ್ಯ ಸುದ್ದಿ
ದೇವನಹಳ್ಳಿ: ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿಯಲ್ಲಿ ಕಳೆದ ೨೦೧೮ ರಿಂದ ಈವರೆಗೆ ಕಂಪ್ಯೂಟರ್ ಆಪರೇಟರ್ ಅನುರಾಧ ರಸೀದಿ ಹಾಕುವಾಗ ಕರ್ತವ್ಯ ಲೋಪ ಎಸಗಿರುವುದು ಬೆಳಕಿಗೆ ಬಂದಿದೆ.
ರಸೀದಿ ನಕಲು ಒಂದು, ಒರಿಜಿನಲ್ ಮತ್ತೋಂದು. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಅನುರಾಧ ಪ್ರೆಸ್ಮೀಟ್ ಕರೆದು ಅನುರಾಧ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಲ್ಲದೇ, ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಹಾಗೂ ಅಧ್ಯಕ್ಷ ಕೆ.ಆರ್.ನಾಗೇಶ್ ಅವರ ತಂದೆ ಕೆ.ರಾಜಣ್ಣ ಸೇರಿದಂತೆ, ಎಸ್ ಡಿ ಎ ಆಶಾ ಮತ್ತು ಪಿಡಿಒ ಶ್ರೀನಿವಾಸ್ ಅವರುಗಳನ್ನು ಉದ್ದೇಶ ಪೂರಕವಾಗಿ ಹೆಸರು ಬಯಲು ಮಾಡುವ ಮೂಲಕ ಆಪಾದಿಸಿರುವುದು ಗ್ರಾಪಂ ಸದಸ್ಯರು, ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯಿತಿಯಲ್ಲಿ ಸದಸ್ಯರೊಬ್ಬರು ಅನುರಾಧ ಮಾಡಿರುವ ಕೃತ್ಯದ ವಿರುದ್ಧ ಧ್ವನಿ ಎತ್ತಿದಾಗ ಮಾರನೇಯ ದಿನವೇ ಪ್ರೆಸ್ಮೀಟ್ ಮಾಡಿರುವುದು ಮತ್ತಷ್ಟು ಅಕ್ರಮಗಳು ಬೆಳಕಿಗೆ ಬರಲಾಗಿದ್ದು, ಈಗಾಗಲೇ ತಾಲೂಕು ಪಂಚಾಯಿತಿ ಇಒ ವಸಂತ್ ಕುಮಾರ್ ಹಾಗೂ ಜಿಲ್ಲಾ ಪರಿಷತ್ ರಮೇಶ್ ರೆಡ್ಡಿ ಹಾಗೂ ಜಿಲ್ಲಾ ಡಿಪಿಎಂಯು ಪದ್ಮಶ್ರೀ, ತಾಪಂ ಎಸ್‌ಡಿಎಎ ಚಂದ್ರಶೇಖರ್ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು. ಪಂಚಾಯಿತಿ ಯಲ್ಲಿ ಈ ಹಿಂದೆ ಸಾಕಷ್ಟು ಕರ್ಮಕಾಂಡಗಳು ಅನುರಾಧ ಕಚೇರಿಯಲ್ಲಿ ಮಾಡಿರುವುದು ಬೆಳಕಿಗೆ ಬರಬೇಕಿದೆ. ಹಂತ ಹಂತವಾಗಿ ಎಲ್ಲವನ್ನೂ ಸಹ ತನಿಖೆ ನಡೆಸಲಾಗುತ್ತದೆ. ಕನ್ನಮಂಗಲ ಗ್ರಾಪಂನಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿರುವುದು.
Be the first to comment