ರಾಜ್ಯ ಸುದ್ದಿ
ಉತ್ತರ ಕನ್ನಡ- ಸಮಾಜವಾದಿ ಪಕ್ಷದ ರಾಷ್ಟೀಯ ಅಧ್ಯಕ್ಷರಾದ ಅಖಿಲೇಶ್ ಯಾಧವ್ ಜೀ ರವರ ಆಶೀರ್ವಾದದೊಂದಿಗೆ, ರಾಜ್ಯ ಅಧ್ಯಕ್ಷರಾದ ರಾಬಿನ್ ಮ್ಯಾಥ್ಯೂಸ್ ಜೀ ರವರ ಒಪ್ಪಿಗೆಯ ಮೇರೆಗೆ, ಪಕ್ಷದ ಎಲ್ಲಾ ರಾಜ್ಯ ನಾಯಕರು ಹಾಗೂ ಜಿಲ್ಲೆಯ ಎಲ್ಲಾ ನಾಯಕರ ಒಮ್ಮತದ ಅಭಿಪ್ರಾಯದೊಂದಿಗೆ ಕುಮಟಾ ತಾಲೂಕಿನ ಯುವ ಹೋರಾಟಗಾರರು, ಸಂಘಟಕರು ಆದಂತ ನೇರ ನಡೆ ನುಡಿಯ ಯುವ ನಾಯಕ ರಾಜು ಮಸ್ತಿಹಳ್ಳ, ತಾ. ಕುಮಟಾ ರವರನ್ನು ಸಮಾಜವಾದಿ ಪಕ್ಷದ ಯುವ ಘಟಕದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸಮಾಜವಾದಿ ಪಕ್ಷದ ಉತ್ತಕನ್ನಡ ಜಿಲ್ಲಾ ಅಧ್ಯಕ್ಷರಾದ ನಾಗರಾಜ ನಾಯ್ಕ ಸಿದ್ದಾಪುರ ಅವರು ಆದೇಶ ಹೊರಡಿಸಿದ್ದಾರೆ. ಅವರು ರಾಜು ಮಾಸ್ತಿ ಹಳ್ಳ ಅವರಿಗೆ
ಪಕ್ಷದ ನಿಯಮಗಳಿಗೆ ಒಳಪಟ್ಟು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಪಕ್ಷದ ಸಂಘಟನೆಯನ್ನು ಮಾಡಲು, ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಜನಪರ ಹೋರಾಟಗಳನ್ನು ಹಮ್ಮಿಕೊಳ್ಳಲು ಈ ಮೂಲಕ ಅಧಿಕಾರವನ್ನು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
Be the first to comment