ಜಿಲ್ಲಾ ಸುದ್ದಿಗಳು
ಹೊನ್ನಾವರ
ತನ್ನ ತಾಯಿಯ ಮನೆಗೆ ಬಂದವಳು ಮಗುವಿನ ಜೊತೆಗೆ ಕಾಣೆಯಾಗಿರುವ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬಳು ಎರಡು ವರ್ಷದ ಮಗುವಿನೊಂದಿಗೆ ಹೊರಗೆ ಹೋಗಿದ್ದಳು ಎನ್ನಲಾಗಿದೆ. ಆದರೆ, ಮರಳಿ ಮನೆಗೆ ಮನೆಗೆ ಬಂದಿಲ್ಲವಾಗಿದ್ದು, ಈ ಬಗ್ಗೆ ಮಹಿಳೆ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಕಿಯ ನಾಕುದಾಮೊಹಲ್ಲಾದ ಕೆಪ್ಪನಹಿತ್ತಲದ ಆಫೀಫಾ ಸಲೀಂ ಮುಲ್ಲಾ ಎಂಬಾಕೆಯನ್ನು ಕೆಲ ವರ್ಷಗಳ ಹಿಂದೆ ಶಿರೂರಿಗೆ ಮದುವೆ ಮಾಡಿಕೊಡಲಾಗಿತ್ತು.
ಐದು ಅಡಿ ಎತ್ತರವಿರುವ ಆಫೀಪಾ ಗೋದಿ ಮೈ ಬಣ್ಣದವಳಾಗಿದ್ದು, ಎರಡೂ ಕೈಗಳಿಗೆ ಮೆಹಂದಿ ಹಚ್ಚಿಕೊಂಡಿದ್ದಾಳೆ. ಈಕೆ ಕುರಿತು ಮಾಹಿತಿ ತಿಳಿದುಬಂದಿಲ್ಲಿ, ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
Be the first to comment