ಕೇಂದ್ರದ ವಸತಿ ಹಾಗೂ ನಗರ ವ್ಯವಹಾರ ಸಚಿವಾಲಯದಿಂದ ಸ್ವಚ್ಛ ಸರ್ವೇಕ್ಷಣ ರಾಷ್ಟ್ರ ಪ್ರಶಸ್ತಿ ಪಡೆದ ಕುಮಟಾ ..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು 

ಕುಮಟಾ

ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕುಮಟಾ ಪುರಸಭೆಗೆ ಕೇಂದ್ರದ ವಸತಿ ಹಾಗೂ ನಗರ ವ್ಯವಹಾರ ಸಚಿವಾಲಯವು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ.ನ. ೨೦ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟçಪತಿ ರಾಮನಾಥ ಕೊವಿಂದ ಅವರು ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕುಮಟಾ ಪುರಸಭೆಯ ಮುಖ್ಯಾಧಿಕಾರಿ ಸುರೇಶ ಎಂ.ಕೆ ಹಾಗೂ ಅಧ್ಯಕ್ಷೆ ಮೋಹಿನಿ ಗೌಡ ಅವರಿಗೆ ರಾಷ್ಟç ಪ್ರಶಸ್ತಿಯನ್ನು ಪ್ರದಾನ ಮಾಡಿದರು. ರಾಜ್ಯದ ಒಟ್ಟು ೩೧೦ ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ೮ಕ್ಕೆ ಮಾತ್ರ ಈ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು, ಅವುಗಳ ಪೈಕಿ ಕುಮಟಾ ಪುರಸಭೆಯು ಕೂಡ ಒಂದಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. 

CHETAN KENDULI

ಈ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಪುರಸಭೆ ಸದಸ್ಯರಾದ ಸಂತೋಷ ನಾಯ್ಕ, ಮಹೇಶ್ ನಾಯ್ಕ, ಶೈಲಾ ಗೌಡ, ಪಲ್ಲವಿ ಮಡಿವಾಳ, ಡಿಯುಡಿಸಿ ಎಇಇ ವಿಠಲ್ ತಡಸಲುರ್, ಜೂನಿಯರ್ ಪ್ರೊಗ್ರಾಮರ್ ಗೋವಿಂದ ಆಚಾರಿ ಉಪಸ್ಥಿತರಿದ್ದರು. ೨೦೧೬ರಿಂದ ಕುಮಟಾ ಪುರಸಭೆಯು ಮನೆಗಳಿಂದ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಬಗ್ಗೆ ಪರಿಣಾಮಕಾರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯ ಕೂಡ ಪುರಸಭೆ ಮಾಡಿತ್ತು. ಅಲ್ಲದೇ ಪುರಸಭೆಯ ಸಹಾಯಧನದ ಮೂಲಕ ಪಟ್ಟಣದಲ್ಲಿ ಸಾವಿರ ಶೌಚಾಲಯ ನಿರ್ಮಿಸಿ, ಬಳಕೆ ಮಾಡುವ ಬಗ್ಗೆ ಮನವೊಲಿಸುವ ಕಾರ್ಯ ಮಾಡಿತ್ತು. ಇದಕ್ಕೆ ಪೂರಕವಾಗಿ ಪುರಸಭೆ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕೂಡ ಶ್ರಮಿಸಿತ್ತು. ಅಲ್ಲದೇ ಹಿಂದಿನ ಅವಧಿಯ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಕೂಡ ಈ ಬಗ್ಗೆ ಸಂಪೂರ್ಣ ಸಹಕಾರ ನೀಡಿದ್ದರು. ಸ್ವಚ್ಛ ಭಾರತ್ ಮಿಶನ್ ಪರಿಶೀಲನಾ ತಂಡ ಇವೆಲ್ಲ ಅಂಶಗಳನ್ನು ಪರಿಗಣಿಸಿ, ಕುಮಟಾ ಪುರಸಭೆಗೆ ಸ್ವಚ್ಛ ಸರ್ವೇಕ್ಷಣ ರಾಷ್ಟç ಪ್ರಶಸ್ತಿ ನೀಡಿದೆ. 

ಈ ಕಾರ್ಯಕ್ರಮದಡಿ ಅಂದಿನ ಪರಿಸರ ಅಭಿಯಂತರ ನಾಗೇಂದ್ರ ಗಾಂವ್ಕರ್, ಆರೋಗ್ಯ ನಿರೀಕ್ಷರಾದ ಸೋಮಶೇಖರ ಅಕ್ಕಿ, ವೀಣಾ ಎಂ ಅವರು ಕೂಡ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದರು. ಅದರಲ್ಲೂ ಪೌರ ಕಾರ್ಮಿಕರ ಶ್ರಮ ಪ್ರಮುಖ ಕಾರಣವಾಗಿದೆ. ಇವರೆಲ್ಲರ ಶ್ರಮದ ಪ್ರತಿಫಲವಾಗಿ ಈ ರಾಷ್ಟç ಪ್ರಶಸ್ತಿ ದೊರೆತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ ಅವರು ತಿಳಿಸಿದ್ದಾರೆ. 

ಇನ್ನು ಕೆಲ ತಿಂಗಳ ಹಿಂದೆ ಈ ಸಾಧನೆಗಾಗಿಯೇ ರಾಜ್ಯ ಪ್ರಶಸ್ತಿ ಕೂಡ ಕುಮಟಾ ಪುರಸಭೆಗೆ ಲಭಿಸಿರುವುದನ್ನು ಸ್ಮರಿಸಬಹುದು. ಈಗ ರಾಷ್ಟç ಪ್ರಶಸ್ತಿ ದೊರೆತಿರುವುದು ಕುಮಟಾ ಜನತೆಗಷ್ಟೆ ಅಲ್ಲ ಇಡೀ ಜಿಲ್ಲೆಗೂ ಹೆಮ್ಮೆಯ ಸಂಗತಿಯಾಗಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶಾಸಕ ದಿನಕರ ಶೆಟ್ಟಿ ಅವರು ನನ್ನ ಅವಧಿಯಲ್ಲಿ ಕುಮಟಾ ಪುರಸಭೆಗೆ ರಾಜ್ಯ ಮತ್ತು ರಾಷ್ಟç ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಸ್ವಚ್ಛತೆಯ ಕಾರ್ಯಕ್ಕೆ ಕುಮಟಾ ಜನತೆ ಇನ್ಮುಂದೆಯೂ ಪುರಸಭೆಗೆ ಸಹಕಾರ ನೀಡುವ ಮೂಲಕ ಕುಮಟಾವನ್ನು ಮಾದರಿ ಪಟ್ಟಣವಾಗಿಸಬೇಕೆಂದು ಮನವಿ ಮಾಡಿದರು.

Be the first to comment

Leave a Reply

Your email address will not be published.


*