ಜಿಲ್ಲಾ ಸುದ್ದಿಗಳು
ಮಸ್ಕಿ
ಸತತ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈತರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ಬೆಳೆಗಳಾದ ಭತ್ತ, ತೊಗರಿ, ಹತ್ತಿ, ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ನೀರು ಮತ್ತು ನೆಲದ ಪಾಲಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬುದ್ದಿನ್ನಿ.ಎಸ್ ಗ್ರಾಮ ಸೇರಿ ತಾಲೂಕಿನಾದ್ಯಂತ ರೈತರು ತೋಟದಲ್ಲಿ ಬೆಳೆದ ಮೆಣಸಿನಕಾಯಿ ಸೇರಿ ಉಳಿದೆಲ್ಲಾ ಬೆಳೆಗಳು ಒಣಗಿಸುವ ತಯಾರಿಯ ಸಮಯದಲ್ಲಿಯೇ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಿಸಿಲಿಲ್ಲದೇ ಒಣಗಿಸಲು ಸಾಧ್ಯವಾಗದ ಪರಿಣಾಮ ಕೊಳೆತುಹೋಗಿವೆ ಹಾಗೂ ಉಳಿದ ಮೆಣಸಿನಕಾಯಿಗಳನ್ನು ಉಳಿಸಿಕೊಳ್ಳಲು ರೈತರು ಮನೆಗಳಲ್ಲಿ ಫ್ಯಾನ್ ಗಳನ್ನು ಹಚ್ಚಿದ್ದರೂ ಕೂಡ ಕಪ್ಪಾಗಿ ಹೋಗಿವೆ.
ತೋಟದಲ್ಲಿನ ಈರುಳ್ಳಿ ಬೆಳೆಗಳು, ಕೊಳೆತಿವೆ ಮತ್ತು ಭತ್ತ,ತೊಗರಿಗಳು ಗಿಡದಲ್ಲಿಯೇ ಮೊಳಕೆಯೊಡದಿದ್ದು,ಬೆಳೆದು ನಿಂತಿದ್ದ ಪೈರುಗಳು ರೈತರಿಗೆ ಖಾರವಾಗಿ ಪರಿಣಮಿಸಿದ್ದು ಸರ್ಕಾರ, ಜಿಲ್ಲಾಡಳಿತ, ತಾಲೂಕಾಡಳಿತ, ಮತ್ತು ಜನಪ್ರತಿನಿಧಿಗಳು ರೈತರ ನೆರವಿಗೆ ನೆರವಿಗೆ ಬರಬೇಕೆಂದು ನಾಗರಡ್ಡೆಪ್ಪ ದೇವರಮನಿ, ಹನುಮಂತ ಈಳಿಗೇರ, ಕಲ್ಲಪ್ಪ ಪೂಜಾರಿ, ಹನುಮಂತ ದೇವರಮನಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.
Be the first to comment