ಜಿಲ್ಲಾ ಸುದ್ದಿಗಳು
ಮಂಗಳೂರು
ಮಂಗಳೂರಿನ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನೋರ್ವನ ಮದುವೆ ನಿಗದಿಯಾಗಿದ್ದು, ಲಗ್ನಪತ್ರಿಕೆ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ನಿನ್ನೆ ಹಿಂದೂ ಸಂಘಟನೆಯ ಮುಖಂಡರು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ಆಕೆಯ ಮನವೊಲಿಕೆಗೆ ಪ್ರಯತ್ನ ಮಾಡಿದ್ದಾರೆ.
ನಿನ್ನೆ ಯುವತಿಯ ಮನೆಗೆ ತೆರಳಿರುವ ಸ್ವಾಮೀಜಿ ಹಾಗೂ ಹಿಂದೂ ಸಂಘಟನೆಯ ಮುಖಂಡರು, ಹಿಂದೂ ಯುವತಿ ಹಾಗೂ ಆಕೆಯ ಮನೆಯವರ ಮನವೊಲಿಸಲು ಪ್ರಯತ್ನ ಪಟ್ಟಿದ್ದಾರೆ. ಯುವತಿಯೊಂದಿಗೆ, ಆಕೆಯ ಮನೆಯವರೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಮಾತನಾಡಿದ್ದಾರೆ.
ಈ ಬಗ್ಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಇತ್ತೀಚಿನ ಹತ್ತಾರು ಪ್ರಕರಣದಲ್ಲಿ ಹಿಂದು ಯುವತಿಯರು ಮುಸ್ಲಿಂ ಯುವಕರ ಪ್ರೀತಿಯ ಬಲೆಗೆ ಬಿದ್ದು ವಿವಾಹವಾಗಿ ಸಂಕಷ್ಟಕ್ಕೆ ಒಳಗಾಗಿದ್ದನ್ನು ನಾವು ಮನವರಿಕೆ ಮಾಡಿದ್ದೇವೆ. ಈ ಬಗ್ಗೆ ಆಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾಳೆ. ನಮ್ಮ ಮಾತಿಗೂ ಧನಾತ್ಮಕವಾಗಿ ಸ್ಪಂದಿಸಿದ್ದಾಳೆ. ಆದ್ದರಿಂದ ನಾವು ಈ ಮದುವೆಯನ್ನು ಸ್ವಲ್ಪ ಕಾಲದವರೆಗೆ ಮುಂದೂಡಲು ಸಲಹೆ ನೀಡಿದ್ದು, ಮನೆಯವರೂ, ಯುವತಿಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ಮುಸ್ಲಿಂ ಯುವಕ ಜಾಫರ್ ಹಾಗೂ ಈ ಹಿಂದೂ ಯುವತಿ ನಡುವೆ ಪ್ರೀತಿ ಅಂಕುರವಾಗಿತ್ತು. ಅದರಂತೆ ಇದೀಗ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ಮದುವೆ ನಡೆಸಲು ತಯಾರಿ ನಡೆದಿದೆ. ನ.29ರಂದು ಕಣ್ಣೂರಿನ ಬೀಚ್ ರೆಸಾರ್ಟ್ ಒಂದರಲ್ಲಿ ಮದುವೆ ರಿಸೆಪ್ಶನ್ ನಡೆಯುವ ಬಗ್ಗೆ ಆಮಂತ್ರಣ ಪತ್ರ ವೈರಲ್ ಆಗಿತ್ತು.
Be the first to comment