ರಾಯಸಂದ್ರ ಗ್ರಾಮದ ಸರಕಾರಿ ಗೋಮಾಳಜಾಗದಲ್ಲಿ ಗ್ರಾಮದ ನಿವೇಶನರಹಿತರಿಗೆ ನಿವೇಶನ ನೀಡುವಂತೆ ಪ್ರತಿಭಟನೆ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ತಾಲೂಕಿನ ಕಸಬಾ ಹೊಬಳಿಯ ರಾಯಸಂದ್ರ ಗ್ರಾಮದ ಸರ್ವೆ ನಂ.೪೪ರಲ್ಲಿ ೧೫೭ ಎಕರೆ ಸರಕಾರಿ ಗೋಮಾಳ ಜಮೀನಿದ್ದು ಆ ಪೈಕಿ ಈಗಾಗಲೆ ಕೆಲವರಿಗೆ ಭೂ ಮಂಜೂರಾತಿಯಾಗಿದ್ದು ಉಳಿಕೆ ಜಾಗವನ್ನು ಸರ್ವೆ ಮಾಡಿಸಿ ರಾಯಸಂದ್ರ ಗ್ರಾಮದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಅಂಬೇಡ್ಕರ್ ಸೇನೆ ರಾಜ್ಯ ಕಾರ್ಯದರ್ಶಿ ಶಂಕರ್‌ರಾಮಲಿAಗಾರೆಡ್ಡಿ ಒತ್ತಾಯಿಸಿದ್ದಾರೆ. ಪಟ್ಟದ ತಾಲೂಕು ಕಚೇರಿ ಮುಂದೆ ರಾಯಸಂದ್ರ ಗ್ರಾಮಸ್ಥರು ಹಾಗು ಅಂಬೇಡ್ಕರ್ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು ರಾಯಸಂದ್ರ ಗ್ರಾಮದಲ್ಲಿ ೧೫೭ ಎಕರೆ ಸರಕಾರಿ ಗೋಮಾಳ ಜಾಗದಲ್ಲಿ ಈಗಾಲೇ ಸರಕಾರ ಕೆಲಸವರಿಗೆ ಭೂಮಿ ಹಂಚಿಕೆಮಾಡಿದ್ದಾರೆ.

ಉಳಿದ ಜಾಗದಲ್ಲಿ ರಾಯಸಂದ್ರ ಗ್ರಾಮದಲ್ಲಿ ಅನೇಕ ವರ್ಷಗಳಿಂದ ನಿವೇಶನ ಇಲ್ಲದೆ ಇರುವವರನ್ನು ಗುರುತಿಸಿ ಅವರಿಗೆ ನಿವೇಶನ ನೀಡಿ ಉಳಿಕೆ ಜಮೀನನ್ನು ಭೂಕಬಳಿಕೆದಾರರಿಂದ ವಾಪಸ್ ಪಡೆದು ಸರಕಾರಿ ಜಮೀನು ಎಂದು ನಾಮಪಲಕ ಅಳವಡಿಸಬೇಕು. ಈ ಸಂಬAಧ ಗ್ರಾಮಪಂಚಾಯತಿ, ಜಿಲ್ಲಾಪಂಚಾಯತಿ, ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ಇದೆ ವೇಳೆ ಅಂಬೇಡ್ಕರ್ ಸೇನೆ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಪಿಳ್ಳಆಂಜಿನಪ್ಪ, ಗ್ರಾಮಾಂತರ ಜಿಲ್ಲಾಧ್ಯಕ್ಷ ಡಿ.ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಸೋಮಣ್ಣೆ ಸಂಘಟನೆಯ ಪದಾಧಿಕಾರಿಗಳು ರಾಯಸಂದ್ರ ಗ್ರಾಮಸ್ಥರು ಇದ್ದರುರಾಯಸಂದ್ರ ಗ್ರಾಮಸ್ಥರಿಗೆ ಸರಕಾರಿ ಗೋಮಾಳಜಾಗದಲ್ಲಿ ನಿವೇಶನ ಮಂಜೂರು ಮಾಡುವಂತೆ ಅಂಬೇಡ್ಕರ್ ಸೇನೆ ಹಾಗು ರಾಯಸಂದ್ರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Be the first to comment

Leave a Reply

Your email address will not be published.


*