ಜಿಲ್ಲಾ ಸುದ್ದಿಗಳು
ಹೊನ್ನಾವರ:
ಗೇರುಸೊಪ್ಪದ ಬೆಳ್ಳಿಮಕ್ಕಿ ಶ್ರೀ ಪಂಚಮುಖಿ ಮುಖ್ಯಪ್ರಾಣ ದೇವರಿಗೆ ಸೋಮವಾರ ಬಾಳೆಹಣ್ಣಿನ ಅಲಂಕಾರ ಮಾಡಿ , ವಿಶೇಷ ಪೂಜೆ ನಡೆಯಿತು. ಶ್ರೀ ದೇವರಲ್ಲಿ ವಿಶೇಷವಾಗಿ ಧಾರ್ಮಿಕ ಕಾರ್ಯಕ್ರಮಗಳು , ವಿಶೇಷ ಅಲಂಕಾರಗಳು, ಅಭಿಷೇಕಗಳು , ಪಾರಾಯಣಗಳು , ಜಪದ ವಿಧಿ ವಿಧಾನಗಳು ಶ್ರೀ ಕ್ಷೇತ್ರದಲ್ಲಿ ಒಂದು ತಿಂಗಳುಗಳ ಕಾಲ ನಡೆದು ಭಕ್ತಾದಿಗಳ ಹಾಗೂ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಿ ಸಂಪನ್ನಗೊಂಡಿತು.
ಹೊನ್ನಾವರ ತಾಲೂಕಿನ ಪ್ರಮುಖ ಕ್ಷೇತ್ರವಾದ ಬೆಳ್ಳಿಮಕ್ಕಿ ತನ್ನನ್ನು ನಂಬಿ ಬಂದ ಭಕ್ತರನ್ನು ಅವರ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಲು ನೆಲಿಸಿರುವನು. ಶ್ರೀ ಪಂಚಮುಖಿ ಮುಖ್ಯಪ್ರಾಣ ದೇವಾಲಯ ದರ್ಶನಕ್ಕೆ ಬೇರೆ ಬೇರೆ ತಾಲೂಕು, ಜಿಲ್ಲೆ, ರಾಜ್ಯದ ಅನೇಕ ಕಡೆಗಳಿಂದ ಭಕ್ತರು ಬಂದು ಸೇವೆಯನ್ನು ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಗೇರುಸೊಪ್ಪ ಸೀಮೆಯಲ್ಲಿಯೇ ಪ್ರಪ್ರಥಮವಾಗಿ ಬ್ರಹ್ಮರತೋತ್ಸವವಾಗುವ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕ್ಷೇತ್ರದಲ್ಲಿ ಮುಖ್ಯವಾಗಿ ಮುಖ್ಯಪ್ರಾಣ ದೇವರ ಜೊತೆಗೆ ಪಂಚಮುಖದ ಹನುಮಂತ ದೇವರನ್ನು ಕಾಣಬಹುದಾಗಿದೆ.
Be the first to comment