ಜಿಲ್ಲಾ ಸುದ್ದಿಗಳು
ಮಸ್ಕಿ ಏ.08:
ಭೂಹೀನರಿಗೆ ಜಮೀನು ಮಂಜೂರು ಸೇರಿ ನಾನಾ ಬೇಡಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘದ (ಕೆಆರ್‌ಎಸ್) ಕಾರ್ಯಕರ್ತರು ಮಸ್ಕಿ ಪಟ್ಟಣದ ಶಾಸಕರ ಕಚೇರಿ ಬಳಿ ಅಹೋರಾತ್ರಿ ಧರಣಿ ಮಂಗಳವಾರ ಆರಂಭಿಸಿದ್ದರು.
ಹೋರಾಟದದಲ್ಲಿ ಭಾಗವಹಿದ್ದ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿಎಚ್. ಪೂಜಾರ್ ಮಾತನಾಡಿ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಅಂದಾಜು 25 ಲಕ್ಷ ಎಕರೆ ಸರಕಾರದ ಗೈರಾಣಿ, ಗೋಮಾಳ ಜಮೀನು ಬಡ ಜನರು ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಬಡವರ ಜಮೀನು ಕಸಿದು ಕೊಳ್ಳಲು ಸರಕಾರ ಮಸಲತ್ತು ನಡೆಸಿದೆ. ಭೂ ಹೀನರಿಗೆ ಭೂಮಿ ಮಂಜೂರು ಮಾಡಬೇಕು ಪಟ್ಟಣದಲ್ಲಿ ನಡೆದಿರುವ ನಾನಾ ಕಾಮಗಾರಿಗಳ ತನಿಖೆ ನಡೆಸಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು ಇನ್ನಿತರ ಬೇಡಿಕೆಗಳ ಈಡೇರಿಸುವ ಭರವಸೆ ನೀಡುವ ತನಕ ಅಹೋ ರಾತ್ರಿ ಧರಣಿ ಮುಂದು ವರೆಯಲಿದೆ ಎಂದರು.
ಸಂಧಾನ ವಿಫಲ:
ಭೂಹೀನರಿಗೆ ಜಮೀನು ಮಂಜೂರು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘದ (ಕೆಆರ್‌ಎಸ್) ಕಾರ್ಯಕರ್ತರು ಮಸ್ಕಿ ಪಟ್ಟಣದ ಶಾಸಕರ ಕಚೇರಿ ಬಳಿ ಅಹೋರಾತ್ರಿ ಧರಣಿ ಮಂಗಳವಾರ ಆರಂಭಿಸಿದ್ದಾರೆ.ಧರಣಿ ಸ್ಥಳಕ್ಕೆ ಶಾಸಕ ಬಸನಗೌಡ ತುರ್ವಿಹಾಳ, ತಹಸೀಲ್ದಾರ್ ಕವಿತಾ. ಆರ್ ಧರಣಿ ನಿರತ ಮುಖಂಡರ ಜತೆ ಮಾತುಕತೆ ನಡೆಸಿ ಧರಣಿ ಹಿಂಪಡೆಯಲು ಮನವಿ ಮಾಡಿದರು. ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುವ ತನಕ ಧರಣಿ ಮುಂದುವರೆಯಲಿದೆ ಎಂದು ಕೆಆರ್ ಎಸ್ ಮುಖಂಡರು ಸ್ಪಷ್ಟ ಪಡಿಸಿದ್ದರು.
ಗುರುವಾರ ಧರಣಿ ಸ್ಥಳಕ್ಕೆ ತಹಶೀಲ್ದಾರರು ಹಾಗೂ ಶರಣೇಗೌಡ ಶಾಸಕರ ಆಪ್ತ ಸಹಾಯಕರು ಬಂದು ಸಮಿತಿ ರಚನೆಯಾಗಿದೆ 28ನೇ ತಾರೀಖಿಗೆ ಸಭೆ ಕರೆದು ನಿಮ್ಮ ಅರ್ಜಿಗಳನ್ನು ಪರಿಶೀಲಿಸಿ ಪಂಚನಾಮ ಮಾಡಿಸಿ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದೆಂಬ ಲಿಖಿತ ರೂಪದ ಭರವಸೆ ನೀಡಿದ ನಂತರವೇ ಹೋರಾಟಗಾರರು ಭೂ ಹೀನರು ತಹಶೀಲ್ದಾರರಿಗೆ ಮನವಿ ಪತ್ರ ನೀಡಿ ಪ್ರತಿಭಟನಾ ಧರಣಿಯನ್ನು ಹಿಂಪಡೆದರು.
ಕೆಆರ್‌ಎಸ್ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್, ತಾಲೂಕು ಅಧ್ಯಕ್ಷ ಸಂತೋಷ ದಿನ್ನಿ, ಮುಖಂಡರಾದ ಮಾರುತಿ ಜಿನ್ನಾಪೂರ, ತಿರುಪತಿ ಮಸ್ಕಿ, ರಮೇಶ ಪಾಟೀಲ್ ಬೇರಗಿ, ರಮೇಶ ಚಿಲ್ಕಾರಾಗಿ, ಮೌನೇಶ ತುಗ್ಗಲ ದಿನ್ನಿ, ಬಿ.ಎಸ್. ಯರದಿಹಾಳ ನಿರುಪಾದಿ ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು.
Be the first to comment