ರಾಜ್ಯ ಮಾಹಿತಿ ಹಕ್ಕು ಮತ್ತು  ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾಧ್ಯಕ್ಷರಾಗಿ ರಾಜು ನಾಯ್ಕ ಮತ್ತು ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾಗಿ ಅರ್ಜುನ ಮಲ್ಯ ಆಯ್ಕೆ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ

ರಾಜ್ಯ ಮಾಹಿತಿ ಹಕ್ಕು  ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕರ್ನಾಟಕ  ಇದರ  ಉತ್ತರ ಕನ್ನಡ  ಜಿಲ್ಲೆ ಮತ್ತು ಭಟ್ಕಳ‌ ತಾಲೂಕ ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು   ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಹೆಚ್ ಜಿ ರಮೇಶ ಕುಣಿಗಲ್ ಅವರು ಭಟ್ಕಳ ತಾಲೂಕ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲೆ ಮತ್ತು ತಾಲೂಕ ಘಟಕದ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ,  ಸಂಘಟನೆಯ ಜಿಲ್ಲಾ ಅಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರ ರಾಜು ನಾಯ್ಕ ಮುಂಡಲ್ಲಿ   ಹಾಗು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಪತ್ರಕರ್ತ ಅರ್ಜುನ್ ಮಲ್ಯ ಅವರನ್ನು‌ ಆಯ್ಕೆ ಮಾಡಿದರೆ ಭಟ್ಕಳ ತಾಲೂಕ ಅಧ್ಯಕ್ಷರನ್ನಾಗಿ  ಸಾಮಾಜಿಕ ಹೋರಾಟಗಾರ ನಾಗೇಂದ್ರ ನಾಯ್ಕ ಹೇರೂರು , ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ ನಾಯ್ಕ ಹೆಬ್ಳೆ , ಗೌರವ ಅಧ್ಯಕ್ಷರಾಗಿ ಲಕ್ಷ್ಮಣ ಮೊಗೇರ್, ಖಜಾಂಚಿಯಾಗಿ  ವಸಂತ ದೇವಾಡಿಗ ಅವರನ್ನು  ಹಾಗು ಸದಸ್ಯರನ್ನಾಗಿ ಸಿನು ನಾಯ್ಕ ಹಾಗು  ಇನ್ನಿತರರನ್ನು  ಆಯ್ಕೆ ಮಾಡಲಾಯಿತು

CHETAN KENDULI

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆ ಮತ್ತು‌ ಭಟ್ಕಳ ತಾಲೂಕ  ಘಟಕದ ವತಿಯಿಂದ ರಾಜ್ಯಾಧ್ಯಕ್ಷರಾದ  ಹೆಚ್ ಜಿ  ರಮೇಶ ಕುಣಿಗಲ್ ಅವರಿಗೆ ಸನ್ಮಾನ ಮಾಡಲಾಯಿತುಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷರಾದ  ಹೆಚ್ ಜಿ ಕುಣಿಗಲ್  ಮಾತನಾಡಿ ನಮ್ಮ‌ ಉದ್ದೇಶ ದೇಶದಲ್ಲಿನ   ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೆಸೆಯುವುದಾಗಿದೆ. ಕಾರಣ ಜಿಲ್ಲೆ  ತಾಲೂಕ ಘಟಕ ನಿರ್ಭಿತಿಯಿಂದ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ನಿಮ್ಮ ಜೊತೆ ರಾಜ್ಯ ಘಟಕ ಯಾವಾಗಲು ಇರುತ್ತದೆ ನಾವು ನಿರ್ಬಿತಿಯಿಂದ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ ಎಂದು ಹೇಳಿದರು 

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾಯ೯ಕತ೯ರ ವೇದಿಕೆ(ರಿ) ಪ್ರಧಾನ ಕಾಯ೯ದಶಿ೯ಗಳಾದ ಹನುಮಂತರಾಯಪ್ಪ, ಕಾಯ೯ದಶಿ೯ಗಳಾದ ಚಂದ್ರಶೇಖರ್.ಡಿ, ರಾಜ್ಯ ಸಂಘಟನ ಕಾಯ೯ದಶಿ೯ಗಳು ಮತ್ತು ಖಜಾಂಚಿಗಳಾದ ಕುಣಿಹಳ್ಳಿ ಆರ್ ಮಂಜುನಾಥ್,‌ಮೈಸೂರು‌ ವಿಭಾಗದ ಉಪಾಧ್ಯಕ್ಷರಾದ ಅಪ್ಪಾಜಿ ಗೌಡ, ಮತ್ತು‌ ವೆಂಕಟೇಶ್, ಇನ್ನಿತರರು ‌ಉಪಸ್ತಿತರಿದ್ದರು

Be the first to comment

Leave a Reply

Your email address will not be published.


*