ರಾಜ್ಯ ಸುದ್ದಿಗಳು
ದೇವನಹಳ್ಳಿ
:ವಿಶ್ವ ಆರೋಗ್ಯ ದಿನದ ಅಂಗವಾಗಿ ಆಕಾಶ್ ಆಸ್ಪತ್ರೆಯಿಂದ ತಾಲೂಕಿನ ಜನತೆಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಕಾಸ್ ಆಸ್ಪತ್ರೆಯ ಆರ್.ಎಂ.ಓ ಡಾ.ಸುನಿಲ್ ಹೆಗ್ಡೆ ತಿಳಿಸಿದರು. ಪಟ್ಟಣದ ಪ್ರಸನ್ನಹಳ್ಳಿ ಬಳಿ ಇರುವ ಆಕಾಶ್ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆಗೆ ಚಾಲನೆ ನೀಡಿ ಮಾತನಾಡಿದ ಅವರು ಮನುಷ್ಯ ಜೀವಂತವಾಗಿರಬೇಕಾದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮುಖ್ಯವಾದುದು ಅದನ್ನು ನಮ್ಮ ಆಸ್ಪತ್ರೆಯಲ್ಲಿ ತಾಲೂಕಿನ ಜನತೆಗೆ ಒದಗಿಸಲಾಗುತ್ತಿದೆ. ಹಿಂದೆ ತುರ್ತು ಸೇವೆಗಳಿಗಾಗಿ ಬೆಂಗಳೂರಿಗೆ ಹೋಗಬೇಕಿತ್ತು ಆದರೆ ಇಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ದೊರೆಯುತ್ತಿದೆ ದಿನದ 24 ಗಂಟೆಯು ಉತ್ತಮ ಸೌಲಭ್ಯ ನೀಡಲಾಗುತ್ತಿದೆ. ಉಚಿತ ಆರೋಗ್ಯ ಅತಪಾಸಣೆಯನ್ನು ಪಟ್ಟಣದ ಪ್ರತಿ ವಾರ್ಡುಗಳಿಗೆ ಪರೀಕ್ಷಿಸಲಾಗುವುದು. ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಅಕಾಶ್ ಆಸ್ಪತ್ರೆಯ ವೈಸ್ ಚೇರ್ಮನ್ ಅಮರ್ ಗೌಡ ಮಾತನಾಡಿ ವಿಶ್ವ ಆರೋಗ್ಯ ದಿನದ ಅಂಗವಾಗಿ ನಮ್ಮ ಸಿಬ್ಬಂದಿ ಪಟ್ಟಣದ 23 ವಾರ್ಡುಗಳಿಗೆ ತೆರಳಿ ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಕಂಡುಬಂದಂರೆ ಅವರನ್ನು ಆಸ್ಪತ್ರೆಗೆ ಕರೆತಂದು ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು. ಇದೆ ವೆಳೆ ಆಕಾಶ್ ಆಸ್ಪತ್ರೆ ಮೆಡಿಕಲ್ ಸೂಪರಿಂಡಿಂಟ್ ಡಾ.ಬ್ರಿಜೇಜ್, ಕ್ಯಾಂಪ್ ವ್ಯವಸ್ಥಾಪಕ ಶ್ರೀಕಾಂತ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿವರ್ಗದವರು ಇದ್ದರು. ಆಕಾಶ್ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆಗೆ ಚಾಲನೆ ನೀಡಿದರು.
Be the first to comment