ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಆಂಕರ್ : ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಹಿನ್ನಲೆ ದೊಡ್ಡಬಳ್ಳಾಪುರ ಕಸಬಾ 2 ರ ರಾಜಸ್ವ ನೀರಿಕ್ಷಕ (ಆರ್ ಐ ) ಲಕ್ಷ್ಮೀನರಸಿಂಹಯ್ಯ ಗೆ ದಾಳಿ ಮಾಡಿ ಶಾಕ್ ಕೊಟ್ಟ ಭ್ರಷ್ಟಾಚಾರ ನಿಗ್ರಹ ದಳ
ವಾ ಓ : ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಲಕ್ಷ್ಮಿನರಸಿಂಹಯ್ಯ ಮೇಲೆ ಎಸಿಬಿ ದಾಳಿ ನೆಡೆಸಿದೆ.
ಬುಧವಾರ ಬೆಳ್ಳಂಬೆಳ್ಳಗೆ ಎಸಿಬಿ ಅಧಿಕಾರಿಗಳ ಪ್ರತ್ಯೇಕ ತಂಡ ಕಸಬಾ ಆರ್ ಐ ಲಕ್ಷ್ಮಿ ನರಸಿಂಹಯ್ಯ ಅವರಿಗೆ ಸೇರಿದ ನಿವಾಸ ಸೇರಿದಂತೆ ನಾಲ್ಕು ಕಡೆ ದಾಳಿ ನೆಡೆಸಿದ್ದು
ಈ ವೇಳೆ ಬಾರಿ ಪ್ರಮಾಣದ ಹಣ ಚಿನ್ನ ಬೆಳ್ಳಿ ಆಸ್ತಿ ಪತ್ರಗಳು ಹಾಗೂ ಕಂದಾಯ ಇಲಾಖೆಗೆ ಸಂಬಂದಿಸಿದ ಹಲವು ಕಡತಗಳು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಆರ್ ಐ ಲಕ್ಷ್ಮೀನರಸಿಂಹಯ್ಯ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಪರಭಾರೆ ಮಾಡಿಕೊಟ್ಟಿದ ಆರೋಪ ಪ್ರಕರಣವು ಇದ್ದು.ಈ ಪ್ರಕರಣ ಸಾಧ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ತನಿಖಾ ಹಂತದಲ್ಲಿದೆ ಎಂದು ತಿಳಿದು ಬಂದಿದೆ.
Be the first to comment