ಸರಕಾರಿ ಗೋಮಾಳಗಳಲ್ಲಿ ಮತ್ತು ಸ್ವಂತ ಜಮೀನುಗಳಲ್ಲಿ ಸರಕಾರದಿಂದಲೇ ಕುರಿಗಳಿಗೆ ಶೆಡ್ ನಿರ್ಮಾಣಿಸುವಂತಾಗಲಿ: ರಕ್ಷಣಾ ವೇಧಿಕೆ ಆಗ್ರಹ…!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ ಏಪ್ರೀಲ್ 7:

CHETAN KENDULI

ಕುರಿ ಸಾಕಾಣಿಕೆ ಮಾಡುವವರಿಗೆ ಶೆಡ್ ಮಾಡಿಕೊಳ್ಳಲು ಸರಕಾರದಿಂದ ನೀಡಲಾಗುತ್ತಿರುವ ಸಹಾಯಧನದಿಂದ ಯಾವುದೇ ಪ್ರಯೋಜನೆವಾಗದ ಕಾರಣ ಸರಕಾರಿ ಗೋಮಾಳ ಜಾಗದಲ್ಲಿ ಮತ್ತು ಸ್ವಂತ ಜಮೀನುಗಳಲ್ಲಿ ಸರಕಾರದಿಂದಲೇ ಕುರಿಗಳಗೆ ಶೆಡ್ ನಿರ್ಮಿಸಿಕೊಡಬೇಕು ಎಂದು ನಮ್ಮ ಕರ್ನಾಟಕ ರಕ್ಷಣಾ ವೇಧಿಕೆ(ಪ್ರವೀಣ ಶೆಟ್ಟಿ ಬಣ)ದ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಮಳೆಗಾಲ ಪ್ರಾರಂಭದ ದಿನಗಳಲ್ಲಿ ಸಿಡಿಲು ಮತ್ತು ಭೀಕರ ಗಾಳಿ ಆವರಿಸುತ್ತದೆ. ಇದರಿಂದ ಪ್ರತಿವರ್ಷವೂ ರಾಜ್ಯದಲ್ಲಿ ಸಾಕಷ್ಟು ಕುರಿಗಳೊಂದಿಗೆ ಕುರಿಗಾಯಿಗರೂ ಬಲಿಯಾಗುತ್ತಿದ್ದಾರೆ. ಇದರಿಂದ ಕುರಿ ಸಾಕಾಣಿಕೆ ಮಾಡುತ್ತಿರುವ ಸಾಕಷ್ಟು ಕುಟುಂಬಗಳು ಬೀದಿಗೆ ಬಂದಿವೆ.



ಅಲ್ಲದೇ ಕರಿಗಳಿಗೆ ಶೆಡ್ ನಿರ್ಮಿಸಿಕೊಳ್ಳಲು ಈಗಾಗಲೇ ಸರಕಾರ ಸಾಮಾನ್ಯ ವರ್ಗದವರಿಗೆ 16000, ಪರಿಶಿಷ್ಟದವರಿಗೆ 40000 ರೂಪಾಯಿಗಳ ಸಹಾಯಧನ ನೀಡುತ್ತಿದ್ದು ಈ ಮೊತ್ತವೂ ಯಾವುದಕ್ಕೂ ಸಾಲುವುದಿಲ್ಲ. ಕುರಿಗಳಿಗೆ ವಿಶಾಲವಾದ ಅನುಕೂಲಕರ ಶೆಡ್ ನಿರ್ಮಿಸಬೇಕೆಂದರೆ ಕನಿಷ್ಠಪಕ್ಷ 5 ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಆದ್ದರಿಂದ ಸರಕಾರದಿಂದ ನೀಡಲಾಗುತ್ತಿರುವ ಸಹಾಯಧನ ಕುರಿಗಾಯಿಗರಿಗೆ ಯಾವುದಕ್ಕೂ ಸಾಲುತ್ತಿಲ್ಲ. ಇದರಿಂದ ಪ್ರತಿವರ್ಷವೂ ಸಾಕಷ್ಟು

ಕುರಿಗಳು ಹಾಗೂ ಕುರಿಗಾಯಿಗಳು ಬಲಿಯಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ರಾಜ್ಯ ಸರಕಾರ ಕುರಿ ಸಾಕಾಣಿಕೆಗಾಗಿ ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಬೇಕು ಹಾಗು ರಾಜ್ಯದ ಆಯಾ ಗ್ರಾಮಗಳಲ್ಲಿರುವ ಗೋಮಾಲ ಜಾಗದಲ್ಲಿ ಮತ್ತು ಕುರಿಗಾಯಿಗರ ಸ್ವಂತ ಜಾಗದಲ್ಲಿ ಸರಕಾರದಿಂದಲೇ ಕುರಿಗಳಿಗೆ ಶೆಡ್ ನಿರ್ಮಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ತಾಲುಕಾ ಗೌರವಾಧ್ಯಕ್ಷ ಗಂಗಾಧರ ಸಾಲಿಮಠ, ನಗರ ಘಟಕ ಅಧ್ಯಕ್ಷ ಬಸನಗೌಡ ಗೌಡರ, ಉಪಾಧ್ಯಕ್ಷ ಚಿದಾನಂದ ಬಡಿಗೇರ, ಕಾರ್ಯದರ್ಶಿ ಶಂಕರಗೌಡ ಪಾಟೀಲ, ಸಂಚಾಲಕ ಸಂಗಮೇಶ ಅಡ್ಡಿ, ಬಸವರಾಜ ಹುಲಗಣ್ಣಿ ಇದ್ದರು.

Be the first to comment

Leave a Reply

Your email address will not be published.


*