ತಾಲೂಕಿನಾದ್ಯಂತ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಅಮರಶಿಲ್ಪಿ ಜಕಣಾಚಾರಿ ಅವರು ಶಿಲ್ಪ ಕಲೆಗೆ ಅಪಾರ ಕೊಡುಗೆ ನೀಡಿದ್ದು,ಸೂರ್ಯ,ಚಂದ್ರ ಇರುವರೆಗೂ ಇವರ ಹೆಸರು ಅಮರವಾಗಿ ಇರುತ್ತದೆ ಎಂದು ಮಸ್ಕಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಉದಯಕುಮಾರ ಪತ್ತಾರ ಹೇಳಿದರು.ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರಿ ಅವರು ಸಂಸ್ಮರಣಾ ದಿನಾರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಕನ್ನಡ ನಾಡಿನ ಇತಿಹಾಸದಲ್ಲಿ ಹೊಯ್ಸಳರು ತಮ್ಮದೇ ಆದ ಕೊಡುಗೆಯನ್ನು ಶಿಲ್ಪ ಕಲೆಗೆ ನೀಡಿದ್ದಾರೆ. ಇವರಲ್ಲಿ ವಿಷ್ಣುವರ್ಧನ ಅರಸನಕಾಲದಲ್ಲಿ ಕಲೆಯು ಉತ್ತುಂಗ ಶಿಖರದಲ್ಲಿತ್ತು. ವಿಷ್ಣುವರ್ಧನನ ಹೆಂಡತಿ ಶಾಂತಲೆ ನಾಟ್ಯ ರಾಣಿ ಎಂದು ಪ್ರಸಿದ್ಧಿಯಾಗಿದ್ದಳು. ಈ ಕಾಲದಲ್ಲಿದ್ದ ಅಮರಶಿಲ್ಪಿ ಜಕಣಾಚಾರಿ ಬೇಲೂರು ಹಳೆಬೀಡಿನ ಚನ್ನಕೇಶವ ದೇವಾಲಯದಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದಾರೆ ಎಂದರು.

CHETAN KENDULI

ಅದ್ಬುತ ಕಲಾಕೃತಿ: ಜಕಣಾಚಾರಿ ಅವರು ತಮ್ಮ ಇಡೀ ಜೀವನವನ್ನು ಶಿಲ್ಪ ಕಲೆಯ ಕೆತ್ತನೆಯಲ್ಲಿತೊಡಗಿಸಿಕೊಂಡಿದ್ದರು. ಜಕಣಾಚಾರಿ ಅವರ ಮಗ ಡಕಣಾಚಾರಿ ಅವರು ಸಹಶಿಲ್ಪಿಯಾಗಿದ್ದು, ಇವರು ಕಪ್ಪೆಚನ್ನಿಗರಾಯದೇವಸ್ಥಾನವನ್ನು ಅದ್ಭುತ ಕಲಾಕೃತಿಯಿಂದನಿರ್ಮಿಸಿದ್ದಾರೆ ಎಂದು ಮಾಹಿತಿ ನೀಡಿದರು.ಕಸುಬು ಉಳಿಸಿ: ವಿಶ್ವಕರ್ಮ ಮಸ್ಕಿ ತಾಲೂಕು ಅಧ್ಯಕ್ಷ ಕಾಳಪ್ಪ ಕಣ್ಣೂರ ಮಾತನಾಡಿ,ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಸೇವೆಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತೇವೆ. ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರಬೇಕು. ವಿಶ್ವ ಕರ್ಮಸಮುದಾಯವು ಪಂಚ ಕಸುಬುಗಳನ್ನು ಅವಲಂಬಿಸಿದ್ದು, ಇವುಗಳನ್ನು ಜೀವಂತವಾಗಿ ಉಳಿಸಿಕೊಂಡುಹೋಗಬೇಕು ಎಂದರು.

 

ಮಸ್ಕಿ ಪಟ್ಟಣದ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿಯೂ ಕೂಡ ಅಮರಶಿಲ್ಪಿ ಜಕಣಾಚಾರಿ ಜಯಂತಿ ವಿಶ್ವಕರ್ಮ ಸಮಾಜದ ವತಿಯಿಂದ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಸ್ಕಿ ತಾಲೂಕು ಉಪ ತಹಶೀಲ್ದಾರ್ ಪ್ರಭಾಕರ್ ಭಟ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿಶ್ವಕರ್ಮ ಸಮಾಜದ ರಾಜ್ಯ ಯುವ ಮುಖಂಡರಾದ ಗುರು ವಿಶ್ವಕರ್ಮ, ಮೌನೇಶ್ ಕೌತಾಳ, ವೈಜನಾಥ್ ಪತ್ತಾರ

ಕವಿತಾಳ, ನಾಗರಾಜ ಸಿಂಧನೂರು ಉದಯಕುಮಾರ ಪತ್ತಾರ, ಜನಾರ್ಧನ ಪತ್ತಾರ, ಕಾಳಪ್ಪ ಕಣ್ಣೂರು, ವಿಜಯ ಬಡಿಗೇರ, ಮಲ್ಲಿಕಾರ್ಜುನ ಹಸಮಕಲ್, ದೇವರಾಜ ಕಂಬಾರ, ಶರಣಬಸವ ಕಂಬಾರ ಬಳಗಾನೂರ, ಶಿವಪುತ್ರಪ್ಪ ಬಳಗಾನೂರು, ಮೌನೇಶ ಜಂಬಲದಿನ್ನಿ, ಗುರುನಾಥಪ್ಪ, ದೇವೇಂದ್ರಪ್ಪ ನಿವೃತ್ತ ಶಿಕ್ಷಕರು, ಮೌನೇಶ್ ಜಾಲವಾಡಗಿ, ಮಸ್ಕಿ ತಾಲೂಕು ಸಮಾಜದ ಮುಖಂಡರು ಹಾಗೂ ಸಮಾಜದ ಬಾಂಧವರು ಸೇರಿದಂತೆ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*