ಜಿಲ್ಲಾ ಸುದ್ದಿಗಳು
ಹೊನ್ನಾವರ
ಪ್ರತಿಭೆ ಎಂಬುದರಲ್ಲಿ ತೊಂಬತ್ತೊಂಬತ್ತು ಪಾಲು ಬೆವರು,ಒಂದು ಪಾಲು ಸ್ಪೂರ್ತಿ* ಎಂಬ ಮಾತಿನಂತೆ ಬಡ ಕುಟುಂಬದಲ್ಲಿ ಜನಿಸಿದ ಭೂಮಿಕಾ ಕೃಷ್ಣ ನಾಯ್ಕ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚಿ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625/625-ಅಂಕ ಪಡೆದು *ರಾಜ್ಯಕ್ಕೆ ಪ್ರಥಮ ಸ್ಥಾನ* ಪಡೆದಿರುವುದು ಜಿಲ್ಲೆಗೆ ಹೆಮ್ಮೆಯೆನಿಸಿದೆ. ತಂದೆ ಕೃಷ್ಣ ನಾರಾಯಣ ನಾಯ್ಕ,ತಾಯಿ ಗೌರಿ ನಾಯ್ಕರ ಮುದ್ದಿನ ಮಗಳಾದ ಭೂಮಿಕಾ ಬೊಮ್ಮನಕೊಡ್ಲು ಮಜರೆಯಿಂದ ಕಾಡುದಾರಿಯಲ್ಲಿ ನಿತ್ಯ ಐದು ಕಿಲೋಮೀಟರ್ ದೂರದ ಗೇರುಸೊಪ್ಪಾದ ಸರ್ಕಾರಿ ಪ್ರೌಢಶಾಲೆಗೆ ಬರಬೇಕಾದ ಸ್ಥಿತಿ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬ ಅತಿಕ್ರಮಣ ಮಾಡಿಕೊಂಡ ಚಿಕ್ಕ ಜಾಗದಲ್ಲಿ ,ಚಿಕ್ಕ ಮನೆಯಲ್ಲಿ ವಾಸಿಸುವಾಗ ವಿದ್ಯುತ್ ಸಂಪರ್ಕ ನಿರಂತರವಾಗಿ ಅವಳನ್ನು ಕಾಡಿದರೂ, ಆರ್ಥಿಕವಾಗಿ ಸೋಲನ ನುಭವಿಸಿದರೂ, ಪಾಲಕರು ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರೂ ಭೂಮಿಕಾಳ ಸತತ ಓದು ಮತ್ತು ಪರಿಶ್ರಮದಿಂದ ಪರೀಕ್ಷೆಯಲ್ಲಿ ಗೆಲುವು ತಂದು ಕೊಟ್ಟಿದೆ.ಓದಿನ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತುಂಬಾ ಚುರುಕಾದ ಭೂಮಿಕಾಳಿಗೆ ಎಂಟನೇ ತರಗತಿಯಲ್ಲಿ ಮಾತ್ರ ಪ್ರತಿಭಾಕಾರಂಜಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಉಳಿದ ವಷ೯ ಕೋರೋನಾ ಕಾರಣದಿಂದ ಕಾರಂಜಿಯೇ ಚಿಮ್ಮಲಿಲ್ಲ. ಹಾಡು,ಕ್ವಿಜ್, ಪ್ರಬಂಧ ಸ್ಪರ್ಧೆಯಲ್ಲಿ ಭೂಮಿಕಾಳೇ ಪ್ರಥಮ. *ಬಹುಮುಖ* *ವ್ಯಕ್ತಿತ್ವದ ಪ್ರತಿಭೆಯೊಂದು* *ತನ್ನ ಸ್ವಸಾಮರ್ಥ್ಯದ ಮೂಲಕ** *ಗೇರುಸೊಪ್ಪೆಯ* *ಸರಕಾರಿ ಪ್ರೌಢಶಾಲೆಯಲ್ಲಿ ಇತಿಹಾಸ* *ನಿರ್ಮಿಸಿರುತ್ತಾರೆ**ಬಡತನವನ್ನೇ ಹಾಸಿ, ಹೊದ್ದು ಮಲಗಿದ ಈ ಕುಟುಂಬಕ್ಕೆ ಆರ್ಥಿಕ ಸಹಾಯದ ಅಗತ್ಯತೆ ತುಂಬಾ ಇದೆ. ನೆಟ್ವರ್ಕ್ ಇಲ್ಲದ ಸಂದರ್ಭದಲ್ಲಿ ಮನೆಯ ಪಕ್ಕದಲ್ಲಿರುವ ಗುಡ್ಡವನ್ನೇರಿ ಕುಳಿತು ಗೂಗಲ್ ಮೀಟ್ ಮೂಲಕ ಗುರುಗಳ ಮಾರ್ಗದರ್ಶನವನ್ನು ಪಡೆದು ಪರೀಕ್ಷೆ ಎದುರಿಸಲು ತಯಾರಿ ನಡೆಸಿದ್ದಳು.
*ಪುಸ್ತಕಗಳ ಅದ್ಭುತಗಳನ್ನು ಮಕ್ಕಳಿಗೆ ಕಲಿಸಿ. ಆದರೆ ಆಕಾಶದ ಹಕ್ಕಿಗಳನ್ನು, ಹಾರಾಡುವ ದುಂಬಿಗಳನ್ನು ಮತ್ತು ಹಸಿರು ಮಲೆಯ ಹೂಗಳ ಕುರಿತು ಧ್ಯಾನಿಸಲು ಅವರಿಗೆ ಬಿಡುವು ಮಾಡಿಕೊಡಿ”* ಎಂಬ ಅಬ್ರಾಹಿಂ ಲಿಂಕನ್ ಅವರ ಆಶಯದಂತೆ ಸರಕಾರಿ ಪ್ರೌಢಶಾಲೆಯ ಶಿಕ್ಷಕರ ತಂಡಕ್ಕೆ ಇವಳ ಪ್ರತಿಭೆಯ ಮಿಂಚು ತಿಳಿದಿತ್ತು. ಮುಖ್ಯಾಧ್ಯಾಪಕ ಶ್ರೀ ನಾಗರಾಜ ಹೆಗಡೆಯವರು ಮತ್ತು ಸಹಶಿಕ್ಷಕರ ತಂಡ ನಿರಂತರವಾಗಿ ಮಕ್ಕಳ ಅಧ್ಯಯನಕ್ಕೆ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ಮಾಡಿದವರು. ಈ ವರ್ಷ ನಮ್ಮ ಶಾಲೆಯಲ್ಲಿ ಮೂರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಬರುವ ನಿರೀಕ್ಷೆಯಲ್ಲಿದ್ದೆವು ಎಂದು ಶಾಲೆಯ ವಿಜ್ಞಾನ ಶಿಕ್ಷಕ ಶ್ರೀ ಬಾಬು ಎಲ್. ನಾಯ್ಕ ಹೇಳುತ್ತಾರೆ .ನಮ್ಮ ನಿರೀಕ್ಷೆಗೆ ಸ್ವಲ್ಪ ಹಿನ್ನಡೆಯಾಗಿದೆ.ಈ ಶಾಲೆಯ *ಕುಮಾರಿ ದೀಕ್ಷಿತ ಮಂಜುನಾಥ ನಾಯ್ಕ ೬೨೧ ಅಂಕ ಗಳಿಸಿದರೆ, ಕಾವ್ಯ ನಾಗರಾಜ ನಾಯ್ಕ ೬೧೫* ಅಂಕಗಳಿಸಿ ನಮ್ಮ ಇಡೀ ತಂಡಕ್ಕೆ ತಕ್ಕ ಪ್ರತಿಫಲ ನೀಡಿರುತ್ತಾರೆ.ಗೇರುಸೊಪ್ಪ ಸರ್ಕಾರಿ ಪ್ರೌಢಶಾಲೆಯ ಓರ್ವ ಪ್ರತಿಭೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ತಂದುಕೊಟ್ಟು ಇತಿಹಾಸ ನಿರ್ಮಿಸಿರುತ್ತಾರೆ. ಅವಳ ಭವಿಷ್ಯತ್ತಿನ ವಿದ್ಯಾರ್ಥಿ ಜೀವನಕ್ಕೆ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿ ಬಡಕುಟುಂಬಕ್ಕೆ ಆಸರೆಯಾಗಬೇಕಾಗಿದೆ. ಯಾವುದೇ ಹಳ್ಳಿಯ ಪ್ರತಿಭೆಯೊಂದು ತನ್ನ ಸ್ವಸಾಮರ್ಥ್ಯ, ಗುರುಹಿರಿಯರ ಮಾಗ೯ದರ್ಶನದ ಮೂಲಕ ಸಾಧನೆಯ ಶಿಖರವೇರಿದಾಗ ಎಲ್ಲರೂ ಸಹಾಯ-ಸಹಕಾರ ಮಾಡುತ್ತಾರೆ ಎಂಬ ಭರವಸೆಯ ಬೀಜವನ್ನು ಪಾಲಕರಲ್ಲಿ ಬಿತ್ತೋಣ. ಈ ಸಾಧನೆಗೆ ಕಾರಣರಾದ ಸರಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕರನ್ನು , ಸಹ ಶಿಕ್ಷಕರನ್ನು ಹಾಗೂ ಬಹುಮುಖ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸೋಣ.
Be the first to comment