ಕೋವಿಡ್ ವ್ಯಾಕ್ಸಿನೇಷನ್ ಮುಕ್ತ ಗ್ರಾಪಂಯನ್ನಾಗಿಸಲು ಪಣ ಗ್ರಾಮಾಂತರ ಟ್ರಸ್ಟ್ (ಎನ್‌ಜಿಒ) ಸಹಕಾರದಲ್ಲಿ ೧ ಸಾವಿರ ಜನರಿಗೆ ವ್ಯಾಕ್ಸಿನೇಷನ್ ಕಾರ್ಯಗಾರ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ತಾಲೂಕಿನ ಕಾರಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಕಾರಹಳ್ಳಿ ಗ್ರಾಪಂ ವತಿಯಿಂದ ಗ್ರಾಮಾಂತರ ಟ್ರಸ್ಟ್ (ಎನ್‌ಜಿಒ) ಸಹಕಾರದಲ್ಲಿ ಒಂದು ಸಾವಿರ ಉಚಿತ ಕೋವಿಡ್ ವ್ಯಾಕ್ಸಿನೇಷನ್ (ಮೊದಲ/ಎರಡನೇ ಡೋಸ್) ಅಭಿಯಾನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಲಸಿಕೆಯನ್ನು ಪಡೆದುಕೊಂಡರು.ಕಾರಹಳ್ಳಿ ಗ್ರಾಪಂ ಅಧ್ಯಕ್ಷೆ ಚಂದ್ರಿಕಾ.ಎನ್.ರವಿ ಮಾತನಾಡಿ, ಕೊರೊನಾ ಮುಕ್ತ ಗ್ರಾಪಂವನ್ನಾಗಿಸಲು ಪ್ರತಿ ಸದಸ್ಯರ ಮತ್ತು ಎನ್‌ಜಿಒ ಸಹಕಾರ ಪಡೆದು ಒಂದು ಸಾವಿರ ಉಚಿತ ಕೋವಿಡ್ ವ್ಯಾಕ್ಸಿನೇಷನ್ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಯ ಜನರಿಗೆ ವ್ಯಾಕ್ಸಿನೇಷನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಗ್ರಾಪಂ ಮಟ್ಟದಲ್ಲಿ ಕೋವಿಡ್ ಮುಕ್ತ ವ್ಯಾಕ್ಸಿನೇಷನ್ ಮಾಡಬೇಕೆಂಬ ಪ್ರಯತ್ನ ಪಟ್ಟು ಕಾರ್ಯಗಾರವನ್ನು ಮಾಡಲಾಗುತ್ತಿದೆ. ಶೇ.೯೫ರಷ್ಟು ಜನರಿಗೆ ವ್ಯಾಕ್ಸಿನೇಷನ್ ಹಾಕಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗವನ್ನು ಬುಡಸಮೇತ ಕಿತ್ತೊಗೆದು ಈ ಮೊದಲಿನಂತೆ ಜನರು ಉತ್ತಮ ಬದುಕು ನಡೆಸಲು ಪ್ರತಿಯೊಬ್ಬರಿಗೂ ಲಸಿಕೆ ಪಡೆಯಲು ಪ್ರೇರೇಪಿಸಲಾಗಿದೆ ಎಂದು ಹೇಳಿದರು.

CHETAN KENDULI

ಗ್ರಾಪಂ ಸದಸ್ಯ ಆರ್.ಜಯರಾಮ್ ಮಾತನಾಡಿ, ಕೊವೀಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಸರಕಾರ ಲಸಿಕೆ ಅಭಿಯಾನ ಪ್ರಾರಂಭಿಸಿದೆ. ಆದರೆ, ಕೆಲವರಿಗೆ ಲಸಿಕೆ ಸಿಗುತ್ತಿರಲಿಲ್ಲ. ಗಂಟೆಗಟ್ಟಲೇ ಕಾದು ಲಸಿಕೆ ಪಡೆಯುವ ಪರಿಸ್ಥಿತಿ ಇತ್ತು. ಆದರೆ, ಎನ್‌ಜಿಒ ಸಂಸ್ಥೆಯ ಸಹಕಾರದಲ್ಲಿ ಇದೀಗ ಇಡೀ ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಯ ಜನರು ಲಸಿಕೆಯನ್ನು ಸ್ಥಳದಲ್ಲಿಯೇ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಈ ವೇಳೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಕೃಷ್ಣವೇಣಿ, ಎನ್.ಚಂದ್ರಶೇಖರ್, ಟಿ.ಎಸ್.ರಾಜಣ್ಣ, ಪದ್ಮಮ್ಮ, ಎನ್.ರಮೇಶ್, ಸರಳ, ಮುನಿರಾಜು, ಎಂ.ಲಕ್ಷ್ಮೀ, ಕೆಂಪಣ್ಣ, ಮಮತ, ಆಂಜಿನಪ್ಪ.ಟಿ, ನಾಗರತ್ನಮ್ಮ, ವೈ.ಕೆ.ರವಿಕುಮಾರ್, ಸುಮ, ಡಿ.ಎಂ.ಕೇಶವಮೂರ್ತಿ, ಮುಖಂಡರಾದ ಎನ್.ರವಿ, ರಾಜೇಂದ್ರ, ಗ್ರಾಪಂ ಪಿಡಿಒ ಎಸ್.ಕವಿತಾ, ಕಾರ್ಯದರ್ಶಿ ಯಶೋದ್‌ಕುಮಾರ್, ಗ್ರಾಪಂ ಸಿಬ್ಬಂದಿ, ಗ್ರಾಮಾಂತರ ಟ್ರಸ್ಟ್ (ಎನ್‌ಜಿಒ) ಸಂಸ್ಥೆಯ ಮುಖ್ಯಸ್ಥೆ ಉಷಾಶೆಟ್ಟಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

Be the first to comment

Leave a Reply

Your email address will not be published.


*