ಬಸರಕೋಡ ತಾಪಂ ಎಸ್.ಸಿ. ಮಹಿಳಾ ಮೀಸಲಾಯಿತಿ ಕ್ಷೇತ್ರಕ್ಕೆ ಶಶಿಕಲಾ ಛಲವಾದಿ ಪ್ರಭಲ ಆಕಾಂಕ್ಷಿ…! ಟಿಕೇಟ್ ನೀಡಲು ಮುಖಂಡರಿಗೆ ಮನವಿ ಮಾಡಿದ ಮಂಜುನಾಥ ಛಲವಾದಿ….!!!

ವರದಿ: ಚೇತನ ಕೆಂದೂಳಿ, ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಮುದ್ದೇಬಿಹಾಳ ಮತಕ್ಷೇತ್ರದ ಬಸರಕೋಡ ಜಿಲ್ಲಾ ಪಂಚಾಯತ ವ್ಯಾಪ್ತಿಯ ಬಸರಕೋಡ ತಾಲೂಕ ಪಮಚಾಯತ ಕ್ಷೇತ್ರವು ಎಸ್.ಸಿ. ಮಹಿಳಾ ಮೀಸಲಾಯಿತಿ ಕ್ಷೇತ್ರವಾಗಿದ್ದು ಬಾರಿ ಕುತುಹಲ ಮೂಡಿಸಿದೆ. ಇದೇ ಕ್ಷೇತ್ರದ ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದ ಮಂಜನಾಥ ಛಲವಾದಿ ಅವರು ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಸ್ಪಂಧಿಸುತ್ತಾ ಬಂದಿದ್ದು ಕ್ಷೇತ್ರದ ಮತದಾರರಿಗೆ ಹತ್ತಿರವಾಗಿದ್ದಾರೆ. ಆದರೆ ಕ್ಷೇತ್ರವು ಎಸ್.ಸಿ. ಮಹಿಳಾ ಮೀಸಲಾದ ಕಾರಣ ಮಂಜುನಾಥ ಅವರ ಪತ್ನಿ ಶಶಿಕಲಾ ಛಲವಾದಿ ಅವರನ್ನು ಚುನಾವಣಾ ಕಣಕ್ಕೆ ಇಳಿಸುವಂತೆ ಕ್ಷೇತ್ರದ ಜನರು ಬೇಡಿಕೆಯಂತೆ ಸದ್ಯಕ್ಕೆ ಶಶಿಕಲಾ ಛಲವಾದಿ ಅವರು ಬಸರಕೋಡ ತಾಪಂ ಕ್ಷೇತ್ರದ ಬಿಜೆಪಿ ಟಿಕೇಟ್ ಪ್ರಭಲ ಆಕಾಂಕ್ಷಿಯಾಗಿದ್ದಾರೆ.


ಶ್ರೀಮತಿ ಶಶಿಕಲಾ ಮಂಜುನಾಥ ಛಲವಾದಿ, ಬಸರಕೋಡ ತಾಪಂ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ.

“ನಾನು ಸತತವಾಗಿ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿ ಹಲವಾರು ವರ್ಷಗಳಿಂದ ದುಡಿದಿದ್ದೇನೆ. ಪಕ್ಷ ಸೂಚನೆಗಳನ್ನು ತಪ್ಪದೇ ಪಾಲಿಸಿದ್ದೇನೆ. ಇನ್ನೂ ಬಸರಕೋಡ ಜನರ ಸಮಸ್ಯೆಗಳನ್ನು ಪಕ್ಷದ ಹಿರಿಯ ಮುಖಂಡರಿಗೆ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದು ಸಾದ್ಯವಾದಷ್ಟು ಬಗೆಹರಿಸಿದ್ದೇನೆ. ಸದ್ಯಕ್ಕೆ ಕ್ಷೇತ್ರವು ಎಸ್.ಸಿ. ಮಹಿಳಾ ಮೀಸಲಾಯಿಯಾಗಿದ್ದು ನನ್ನ ಧರ್ಮ ಪತ್ನಿಯನ್ನು ಚುನಾಚಣೆಗೆ ನಿಲ್ಲಿಸುವಂತೆ ಜನರ ಮನವಿಯಂತೆ ನಾನೂ ಪಕ್ಷದ ಹಿರಿಯರಿಗೆ ಟಿಕೇಟ್ ಒದಗಿಸುವಂತೆ ಮನವಿ ಮಾಡಿದ್ದೇನೆ. ಪಕ್ಷವೂ ನನ್ನ ಪರವಾಗಿ ನನ್ನ ಪತ್ನಿ ಟಿಕೇಟ್ ನೀಡುತ್ತದೆ ಎನ್ನುವ ಭರವಸೆ ಇದೆ.”

-ಮಂಜುನಾಥ ಛಲವಾದಿ, ತಾಲೂಕಾಧ್ಯಕ್ಷರು, ಬಿಜೆಪಿ ಎಸ್.ಸಿ. ಮೋರ್ಚಾ, ಮುದ್ದೇಬಿಹಾಳ.

ಮುದ್ದೇಬಿಹಾಳ ತಾಲೂಕಾ ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿರುವ ಮಂಜುನಾಥ ಛಲವಾದಿ ಅವರು ಕಳೆದ 15 ವರ್ಷಗಳಿಂದ ಬಿಜೆಪಿ ಪಕ್ಷದ ಪದಾಧಿಕಾರಿಗಳಾಗಿ ವಿವಿಧ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕಳೆದ ವಿಧಾನಸಭಾ, ಲೋಕಸಭಾ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷದ ಯೋಜನೆಗಳ ಬಗ್ಗೆ ಪ್ರತಿ ಮನೆಗೂ ಮನವರಿಕೆ ಮಾಡಿ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ಒದಗಿಸುವಲ್ಲಿ ಸಫಲರಾಗಿದ್ದಾರೆ. ಅಲ್ಲದೇ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಬಸರಕೋಡ ಶಕ್ತಿ ಕೇಂದ್ರದ ಸಹ ಸಂಚಾಲಕರಾಗಿ ಅಭಿಯಾನವನ್ನು ಯಶಸ್ವಿಯತ್ತ ಸಾಗುವಂತೆ ಮಾಡಿದ ಹಿರಿಮೆ ಸಲ್ಲುತ್ತದೆ. ಇಂತಹ ಆದರ್ಶ ವ್ಯಕ್ತಿತ್ವ ಹೊಂದಿದದವರು ಕ್ಷೇತ್ರದ ಚುಕ್ಕಾಣಿ ಹಿಡಿದರೆ ಅಭಿವೃದ್ಧಿ ಕಟ್ಟಿಟ್ಟ ಬುತ್ತಿಯಾಗುತ್ತದೆ ಎನ್ನುವುದು ಬಸರಕೋಡ ಕ್ಷೇತ್ರದ ಜನರು ಅಭಿಪ್ರಾಯವಾಗಿದೆ.

 

ಬಸರಕೋಡ ತಾಲೂಕ ಪಂಚಾಯತ ಕ್ಷೇತ್ರದ ಜನ ಒತ್ತಾಯಕ್ಕಾಗಿ ಮಂಜುನಾಥ ಛಲವಾದಿ ಅವರು ಈಗಾಗಲೇ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಪರಶುರಾಮ ಪವಾರ ಅವರಿಗೆ ಕ್ಷೇತ್ರ ತಾಪಂ ಟಿಕೇಟ್ ನೀಡುವಂತೆ ಬೆಂಬಲಿಗರೊಂದಿಗೆ ತೆರಲಿ ಮನವಿ ಮಾಡಿದ್ದು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನಿಗೆ ಬಿಜೆಪಿ ಪಕ್ಷದ ಹಿರಿಯರು ಟಿಕೇಟ್ ವಂಚಿತರನ್ನಾಗಿಸುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Be the first to comment

Leave a Reply

Your email address will not be published.


*