ಭಾರತ ವಶಪಡಿಸಿಕೊಂಡ ಕೊನೆಯ ದ್ವೀಪ ಕಾರವಾರದ ಅಂಜುದೀವ್‌ ದ್ವೀಪದಲ್ಲಿ ನೌಕಾಪಡೆಯಿಂದ ಧ್ವಜಾರೋಹಣ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು 

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಳಿ ಅರಬ್ಬೀ ಸಮುದ್ರದ ದ್ವೀಪ ಅಂಜುದೀವ್. ಈ ದ್ವೀಪವನ್ನು 1961ರಲ್ಲಿ ಭಾರತ ಪೋರ್ಚುಗೀಸ್‌‌ರಿಂದ ವಶಪಡಿಸಿ ಕೊಂಡಿತ್ತು. ದ್ವೀಪದ ವಿಸ್ತಾರ 1.5 ಚದರ ಕಿ.ಮೀ. ಇದೆ. 1998ರ ಬಳಿಕ ಇದು ಭಾರತೀಯ ನೌಕಾಪಡೆಯ ಸೊತ್ತಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿದೆ.

CHETAN KENDULI

ಕಾರವಾರ ಸನಿಹದ ನೌಕಾನೆಲೆಯ ಪ್ರಮುಖ ದ್ವೀಪ ಅಂಜುದೀವ್‌ನಲ್ಲಿ ದೇಶದ 75ನೇ ವರ್ಷದ ಸ್ವಾತಂತ್ರ್ಯೋತ್ಸದ ನಿಮಿತ್ತ “ಆಜಾದಿ ಕಾ ಅಮೃತ್‌ ಮಹೋತ್ಸವ’ದ ಭಾಗವಾಗಿ ಭಾರತೀಯ ನೌಕಾಪಡೆ ದೇಶದ 75 ದ್ವೀಪಗಳಲ್ಲಿ ಧ್ವಜಾರೋಹಣ ನೆರವೇರಿಸುತ್ತಿದೆ. ಶುಕ್ರವಾರ ಅಂಜುದೀವ್‌ನಲ್ಲಿ ಸಹ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.

ರಕ್ಷಣ ಸಚಿವ ರಾಜನಾಥ ಸಿಂಗ್‌ ನೌಕಾಸೇನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ರಾಜ್ಯ ನೌಕಾ ವಲಯದ ಫ್ಲಾಗ್ ಆಫೀಸರ್‌ ಮಹೇಶ್‌ ಸಿಂಗ್‌ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿ ಆಜಾದಿ ಕಾ ಅಮೃತ್‌ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.ಅಂಜುದೀವ್‌ ದ್ವೀಪವು ಭಾರತೀಯ ನೌಕಾಪಡೆಗೆ ರಕ್ಷಣೆ ದೃಷ್ಟಿಯಲ್ಲಿ ಪ್ರಮುಖವಾಗಿದೆ. ಇದೇ ವೇಳೆ ನೌಕಾಪಡೆಯ ಬ್ಯಾಂಡ್‌ನಿಂದ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು.

Be the first to comment

Leave a Reply

Your email address will not be published.


*