ಸಿಎಂ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಮಾಸ್ಕ್‌, ಗ್ಲೌಸ್‌ ಖರೀದಿಗೆ 16 ಲಕ್ಷ ನೀಡಿದ ದ.ಕ ಜಿಲ್ಲಾಧಿಕಾರಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಸ್ಕ್‌ ಮತ್ತು ಗ್ಲೌಸ್‌ ಕೊರೆತ ವಿಚಾರ ಗುರುವಾರ ಮುಖ್ಯಮಂತ್ರಿಗಳ ಕೋವಿಡ್‌ ನಿರ್ವಹಣಾ ಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ದ.ಕ.ಜಿಲ್ಲಾಧಿಕಾರಿ ತಮ್ಮ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ(ಎಸ್‌ಡಿಆರ್‌ಎಫ್‌)ಯಿಂದ ಜಿಲ್ಲೆಗೆ 16 ಲಕ್ಷ ರೂ.ಬಿಡುಗಡೆ ಮಾಡುವ ಮೂಲಕ ತಾಲೂಕುಗಳಲ್ಲಿ ತುರ್ತಾಗಿ ಅಗತ್ಯ ಇರುವ ಮಾಸ್ಕ್‌, ಗ್ಲೌಸ್‌ಗಳನ್ನು ಖರೀದಿ ಮಾಡಲು ಸೂಚನೆ ನೀಡಿದ್ದಾರೆ.

CHETAN KENDULI

ಇದರಲ್ಲಿ ಮಂಗಳೂರು, ಮೂಡುಬಿದಿರೆ, ಉಳ್ಳಾಲಕ್ಕೆ ಸೇರಿದಂತೆ ಒಟ್ಟು 6ಲಕ್ಷ ರೂ., ಪುತ್ತೂರು, ಕಡಬಕ್ಕೆ ಸೇರಿದಂತೆ 4 ಲಕ್ಷ ರೂ ಹಾಗೂ ಬಂಟ್ವಾಳ ಎರಡು, ಬೆಳ್ತಂಗಡಿ ಎರಡು, ಸುಳ್ಯಕ್ಕೆ ಎರಡು ಲಕ್ಷ ರೂ. ಸೇರಿದಂತೆ ಒಟ್ಟು ಜಿಲ್ಲೆಗೆ 16 ಲಕ್ಷ ರೂ. ಎಸ್‌ಡಿಆರ್‌ಎಫ್‌ ನಿಧಿಯನ್ನು ಗುರುವಾರ ಸಂಜೆ ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳು ತಮಗೆ ಬೇಕಾದ ಅಗತ್ಯ ಮಾಸ್ಕ್‌, ಗ್ಲೌಸ್‌ಗಳನ್ನು ತಕ್ಷಣವೇ ಖರೀದಿ ಮಾಡಿ ಆರೋಗ್ಯ ಕಾರ‍್ಯಕರ್ತೆಯರಿಗೆ, ದಾದಿಯರಿಗೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ದಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ ಕುಮಾರ್‌ ಎಂ ಅವರು ಹೇಳುವಂತೆ, ಈಗಾಗಲೇ ಜಿಲ್ಲಾಧಿಕಾರಿಯವರು 16 ಲಕ್ಷ ರೂ.ಗಳನ್ನು ತಮ್ಮ ಎಸ್‌ಡಿಆರ್‌ಎಫ್‌ ನಿಧಿಯಿಂದ ತಾಲೂಕುಗಳಿಗೆ ನೀಡಿದ್ದಾರೆ. ಸ್ಥಳೀಯ ಜನರಿಕ್‌ ಔಷಧಿ ಅಂಗಡಿಯಿಂದ ಎನ್‌-95 ಮಾಸ್ಕ್‌ ಹಾಗೂ ಗ್ಲೌಸ್‌ಗಳನ್ನು ಖರೀದಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಇತ್ತೀಚೆಗೆ ಮಂಗಳೂರಿನಲ್ಲಿ ಕೋವಿಡ್‌ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದರು. ಆರೋಗ್ಯ ಸಿಬ್ಬಂದಿಗೆ ಮಾಸ್ಕ್‌, ಗ್ಲೌಸ್‌ ಇಲ್ಲದಿರುವ ವಿಷಯ ತಿಳಿದ ಸಿಎಂ ಬಸವರಾಜ ಬೊಮ್ಮಾಯಿ, ಮಾಸ್ಕ್, ಗ್ಲೌಸ್ ಇಲ್ಲದೇ ಏನ್ ಆಡಳಿತ ಮಾಡ್ತೀರಾ ಇಲ್ಲಿ? ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ಕೊಡೋಕೆ ನಿಮ್ಮಿಂದ ಆಗಲ್ವಾ, ಕಾಮನ್‌ಸೆನ್ಸ್ ಇಲ್ವಾ ಎಂದೆಲ್ಲ ಜರೆದಿದ್ದರು.

Be the first to comment

Leave a Reply

Your email address will not be published.


*