ಸಾಲಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ; ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದ ಭಟ್ಕಳ ಶಾಸಕ ಸುನೀಲ್ ನಾಯ್ಕ 

ವರದಿ-ಕುಮಾರ್ ನಾಯ್ಕ.ಭಟ್ಕಳ


ರಾಜ್ಯ ಸುದ್ದಿ

CHETAN KENDULI

ಭಟ್ಕಳ: ಇಲ್ಲಿನ ಮಾರುಕೇರಿಯ ನಿವಾಸಿಯಾಗಿದ್ದ ಕುಳ್ಳಾ ಸೋಮಯ್ಯ ಗೊಂಡ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ಮೃತರು ಪತ್ನಿ ಹಾಗೂ ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ವಿವಿಧ ಬ್ಯಾಂಕುಗಳಲ್ಲಿದ್ದ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಮನೆಗೆ ಭೇಟಿ ನೀಡಿದ ಶಾಸಕ ಸುನೀಲ್‍ನಾಯ್ಕ್ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಅಲ್ಲದೇ ಮೃತರಾದ ಕುಳ್ಳಾ ಸೋಮಯ್ಯ ಗೊಂಡ ಅವರು ಪಕ್ಷದ ಕಾರ್ಯಕರ್ತರೂ ಆಗಿರುವುದರಿಂದ ಅವರ ಒಂದು ಬ್ಯಾಂಕಿನಲ್ಲಿರುವ ಸಾಲದ ಮೊತ್ತವಾದ 75 ಸಾವಿರ ರೂಗಳ ಜವಾಬ್ದಾರಿಯನ್ನು ವೈಯುಕ್ತಿಕವಾಗಿ ವಹಿಸಿಕೊಳ್ಳುವ ವಚನ ನೀಡಿ ಮಾನವೀಯತೆ ಮೆರೆದಿದ್ದಾರೆ. ಹಾಗೂ ಕುಟುಂಬಕ್ಕೆ ತುರ್ತು ಆರ್ಥಿಕ ನೆರವನ್ನೂ ಒದಗಿಸಿದ್ದಾರೆ.ಜೀವ ಅಮೂಲ್ಯವಾದದ್ದು, ಉಳಿದರೆ ಎಂಥಹ ಕಷ್ಟವನ್ನಾದರೂ ಎದುರಿಸಬಹುದು ಬದುಕುವ ಛಲ ಇರಲಿ ಎಂದು ಸಾಮಾಜಿಕವಾಗಿ ವಿನಂತಿಸಿಕೊಂಡರು.

Be the first to comment

Leave a Reply

Your email address will not be published.


*