ರಾಜ್ಯ ಸುದ್ದಿ
ನವದೆಹಲಿ: ದೇಶದ ಎಲ್ಲಾ ಹೊಸ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ತಮ್ಮದೇ ಆದ ಪ್ರೆಶರ್ ಸ್ವಿಂಗ್ ಆಡ್ಸಪ್ರ್ಶನ್ (ಪಿಎಸ್‍ಎ) ಅಥವಾ ವ್ಯಾಕ್ಯೂಮ್ ಸ್ವಿಂಗ್ ಆಡ್ಸಪ್ರ್ಷನ್ (ವಿಎಸ್‍ಎ) ತಂತ್ರಜ್ಞಾನದ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರು ತಿಂಗಳ ಅವಧಿಯೊಳಗೆ ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) 2020 ರ ವಾರ್ಷಿಕ ಎಂಬಿಬಿಎಸ್ ಪ್ರವೇಶ ನಿಯಮಗಳ ಕನಿಷ್ಠ ಅವಶ್ಯಕತೆಗಳಲ್ಲಿ ತಿದ್ದುಪಡಿಗಳನ್ನು ಮಾಡಲು ಸೂಚಿಸಲಾಗಿದೆ. ತಿದ್ದುಪಡಿ ನಿಯಮದಂತೆ ಆಮ್ಲಜನಕ ಘಟಕ ಸ್ಥಾಪನೆ ಕಡ್ಡಾಯಗೊಳ್ಳಲಿದೆ.
ತಿದ್ದುಪಡಿಯಲ್ಲಿ, “ಗಂಭೀರ ಸ್ಥಿತಿಯಲ್ಲಿರುವ ಅಥವಾ ಆಮ್ಲಜನಕದ ಅವಶ್ಯಕತೆ ಇರುವ ರೋಗಿಗಳ ಹಾಸಿಗೆಗಳಿಗೆ ಸಮರ್ಪಕವಾದ ರೀತಿಯಲ್ಲಿ ದ್ರವ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುವುದನ್ನು ಖಚಿತಪಡಿಸಲು ಕೇಂದ್ರೀಯ ಆಮ್ಲಜನಕ ಮತ್ತು ಸಕ್ಷನ್ ಪಾಯಿಂಟ್‍ಗಳನ್ನು ಆಸ್ಪತ್ರೆಗಳು ಹೊಂದಿರಬೇಕು” ಎಂದು ಸೂಚಿಸಲಾಗಿದೆ.ಇದಲ್ಲದೆ, ಎಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮೀಸಲಾದ ಪಿಎಸ್‍ಎ (ಪ್ರೆಶರ್ ಸ್ವಿಂಗ್ ಆಡ್ಸಪ್ರ್ಷನ್) ಅಥವಾ ವಿಎಸ್‍ಎ (ವ್ಯಾಕ್ಯೂಮ್ ಸ್ವಿಂಗ್ ಆಡ್ಸಪ್ರ್ಷನ್) ತಂತ್ರಜ್ಞಾನವನ್ನು ಹೊಂದಿರಬೇಕು, ಪೈಪ್ಡ್ ಆಮ್ಲಜನಕ ಪೂರೈಕೆಯ ಜೊತೆಗೆ ಆಮ್ಲಜನಕ ಉತ್ಪಾದಿನೆ ಮಾಡಬೇಕು, ಇದನ್ನು ಆರು ತಿಂಗಳಲ್ಲಿ ಸ್ಥಾಪಿಸಿ ಕಾರ್ಯಗತಗೊಳಿಸಬೇಕು” ಎಂದು ತಿದ್ದುಪಡಿಯಲ್ಲಿ ಸೂಚಿಸಲಾಗಿದೆ.
Be the first to comment