ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಪ್ರತಿ ವರ್ಷವೂ ಆಲಮಟ್ಟಿ ಜಲಾಶಯದಿಂದ ರೈತರು ಬಿತ್ತನೆ ಮಾಡಿದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದು ಮುದ್ದೇಬಿಹಾಳ ಮತಕ್ಷೇತ್ರದ ಮುಳುಗಡೆ ಪ್ರದೇಶದ ರೈತರಿಗೆ ಸೂಕ್ತ ಬೆಳೆ ಪರಿಹಾರ ಒದಗಿಸಬೇಕೆಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ನಡಹಳ್ಳಿ ಧ್ವನಿ ಎತ್ತಿದ್ದಾರೆ.
ಲಮಟ್ಟಿ ಜಲಾಶಯದ ಎಡಭಾಗದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಸುಮಾರು ೩೮೦೦ ಹೆಕ್ಟರ್ ಪ್ರದೇಶ ಮುಳುಗಡೆಯಾಗುತ್ತಾ ಬಂದಿದೆ. ಇದರ ಬಗ್ಗೆ ಸರಕಾರದ ಎಲ್ಲ ಸಭೆಯಲ್ಲಿಯೂ ಪ್ರಸ್ತಾವಣೆ ಮಾಡಿದ್ದೇನೆ ಹಾಗೂ ಇದರ ಬಗ್ಗೆ ಸಾಕಷ್ಟು ಬಾರಿ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಸಮಸ್ಯೆಗೆ ಪರಿಹಾರ ನೀಡದಿದ್ದರೆ ನಮ್ಮ ಭಾಗದ ಜನರೊಂದಿಗೆ ನಾನು ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಡಹಳ್ಳಿ ಅವರು ಗುಡಿಗಿದ್ದಾರೆ.
ಈಗಾಗಲೇ ಕೇಂದ್ರ ಸರಕಾರದಿಂದ ಡ್ರೀಪ್ ಯೋಜನೆಯಡಿಯಲ್ಲಿ ಹಣ ಬಿಡುಗಡೆಯಾಗುತ್ತಿದ್ದು ಅದರ ಸದ್ಭಳಕೆ ಮಾಡಿಕೊಂಡು ನಮ್ಮ ಕ್ಷೇತ್ರದ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೇ ಆಲಮಟ್ಟಿ ಜಲಾಶಯದಿಂದ ಕ್ಷೇತ್ರದ ಒಟ್ಟು ೪೮ ಹಳ್ಳಿಗಳು ಮುಳುಗಡೆಯಾಗುತ್ತವೆ. ೧೧೭ ಹಳ್ಳಿಗಳಲ್ಲಿ ವರ್ಷದ ೮ ತಿಂಗಳು ನೀರು ನಿಲ್ಲುತ್ತದೆ. ಇದರಿಂದ ಅಲ್ಲಿನ ಜನರಿಗೆ ಸಾಂಕ್ರಾಮಿಕ ಹರಡುತ್ತಿದೆ. ಆದ್ದರಿಂದ ಕ್ಷೇತ್ರದ ಮುಳುಗಡೆ ಪ್ರದೇಶದ ಮಧ್ಯಭಾಗದಲ್ಲಿ ಆಸ್ಪತ್ರೆಯನ್ನೂ ನಿರ್ಮಾಣ ಮಾಡಬೇಕು ಎಂದು ಶಾಸಕರು ತಿಳಿಸಿದರು.
೧೫ ದಿನದಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ: ಸಚಿವ ಉಮೇಶ ಕತ್ತಿ
ಇತ್ತಿಚಿಗಷ್ಟೇ ಕೃಷ್ಣ ಭಾಗ್ಯಜಲ ನಿಗಮ ನೀರಾವರಿ ಸಲಹಾ ಸಮೀತಿ ಅಧ್ಯಕ್ಷನಾಗಿದ್ದು ಮುದ್ದೇಬಿಹಾಳ ಕ್ಷೇತ್ರದ ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ಸೇರಿದಂತೆ ಇನ್ನಿತರ ಸಮಸ್ಯೆ ಬಗೆಹರಿಸಲು ಮುಂದಿನ ೧೫ ದಿನಗಳಲ್ಲಿ ಸಭೆ ಕರೆಯುತ್ತೇನೆ. ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾ ಇಲಾಖೆ ಸಚಿವ ಹಾಗೂ ಕೃಷ್ಣ ಭಾಗ್ಯಜಲ ನಿಗಮ ನೀರಾವರಿ ಸಲಹಾ ಸಮೀತಿ ಅಧ್ಯಕ ಉಮೇಶ ಕತ್ತಿ ಭರವಸೆ ನೀಡಿದ್ದಾರೆ.
Be the first to comment