ಜಿಲ್ಲಾ ಸುದ್ದಿಗಳು
ತಾಳಿಕೋಟಿ:
ತಾಲೂಕಿನ ಚೋಕಾವಿ ಗ್ರಾಮದಲ್ಲಿ ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವ ವೇದಿಕೆಯ ಪದಾಧಿಕಾರಿಗಳಿಂದ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನದ ಭೋವಿ ಗುರುಪೀಠದ ಪೀಠಾಧಿಪತಿಗಳಾದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು 36ನೇ ಜನ್ಮದಿನೋತ್ಸವವನ್ನು ಕೇಕ್ ಕತ್ತಿರಿಸುವ ಮೂಲಕ ರವಿವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವ ವೇದಿಕೆ-ಕ್ರಾಂತಿ ರಾಜ್ಯ ಕಾರ್ಯದರ್ಶಿ ಹಣಮಂತ ಬೆಳಗಲ್ಲ, ಭೋವಿ ಸಮಾಜ ಅತೀ ಹಿಂದುಳಿದ ಸಮಾಜವಾಗಿದೆ. ಇಂದಿನ ಯುವಪೀಳಿಗೆಗಳು ಮೊದಲು ವಿದ್ಯಾವಂತರಾಗುವುದು ಅವಶ್ಯಕವಾಗಿದೆ. ಭೋವಿ ಸಮಾಜಕ್ಕೆ ಸಾಕಷ್ಟು ಸರಕಾರಿ ಅನುಕೂಳತೆಗಳಿದ್ದರೂ ಅದನ್ನು ಸದುಪಯೋಗ ಪಡೆಯಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಎಲ್ಲರೂ ಎಚ್ಚೆತ್ತುಕೊಂಡು ಸಮಾಜದ ಏಳಿಗೆಗೆ ಶ್ರಮ ಪಡಬೇಕು ಹಾಗೂ ನಮ್ಮ ಸಮಾಜದ ಶ್ರೀಗಳ ಮಾರ್ಗದರ್ಶನದಲ್ಲಿ ಭೋವಿ ಯುವ ಪೀಳಿಗೆಯವರು ನಡೆಯಬೇಕು ಎಂದು ಹೇಳಿದರು.
ಸಂಘಟನೆಯ ಗೌರವಾಧ್ಯಕ್ಷ ಗುಂಡಪ್ಪ ವಡ್ಡರ ಕೇಕ್ ಕತ್ತಿರಸಿ ಸಮಾಜದವರಿಗೆ ಸಿಹಿ ಹಂಚಿ ಶ್ರೀಗಳ ಜನ್ಮದಿನೋತ್ಸವವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾ ಸಂಚಾಲಕ ಆನಂದ ವಡ್ಡರ, ಸದಸ್ಯರಾದ ಭೀಮಣ್ಣ ವಡ್ಡರ, ಪ್ರಕಾಶ ವಡ್ಡರ, ತಿಪ್ಪಣ್ಣ ವಡ್ಡರ, ಶಿವಾನಂದ ವಡ್ಡರ, ನಾಗಪ್ಪ ವಡ್ಡರ, ದೇವಣ್ಣ ವಡ್ಡರ, ಬಸವರಾಜ ವಡ್ಡರ, ರಮೇಶ ವಡ್ಡರ, ಅಂಬರೇಶ ವಡ್ಡರ, ರಾಜು ವಡ್ಡರ, ಮುತ್ತು ವಡ್ಡರ, ಸತೀಶ ವಡ್ಡರ, ಪರಶುರಾಮ ವಡ್ಡರ ಇದ್ದರು.
Be the first to comment