24 ಗಂಟೆ ಒಳಗೆ ಇಬ್ಬರು ಅಂತರ ಜಿಲ್ಲಾ ಸರಗಳ್ಳರನ್ನು ಬಂದಿಸಿದ ಶಿರಸಿಯ ಪೊಲೀಸರು

ವರದಿ-ಕುಮಾರ ನಾಯ್ಕ.ಉಪಸಂಪಾದಕರು

ಜಿಲ್ಲಾ ಸುದ್ದಿಗಳು 

ಶಿರಸಿ

ನಗರದ ಭತ್ತದ ಓಣಿಯಲ್ಲಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಮಾಂಗಲ್ಯ ಸರ ಕದ್ದೊಯ್ದ ಪ್ರಕರಣದ ಖದೀಮರನ್ನು ಕೇವಲ 24 ಗಂಟೆಯಲ್ಲಿ ಶಿರಸಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

CHETAN KENDULI

ಕಳ್ಳರ ಶೋಧನೆಗೆ ವಿಶೇಷ ತಂಡ ರಚಿಸಿದ ಪೊಲೀಸರು ಹುಬ್ಬಳ್ಳಿಯ ಈರ್ವರು ಅಂತರ್ ಜಿಲ್ಲಾ ಸರಗಳ್ಳರನ್ನು ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಉಷಾ ದಾಮೋದರ ಪೈ ಎನ್ನುವ ವಯೋವೃದ್ದೆಯ ಬಳಿ ಕುಮಟಾಕ್ಕೆ ತೆರಳುವ ಮಾರ್ಗ ಕೇಳುವ ನೆಪ ಮಾಡಿಕೊಂಡು ಕುತ್ತಿಗೆಯಲ್ಲಿದ್ದ ಸರ ಹರಿದು ಪರಾರಿಯಾಗಿದ್ದರು. ಈ ಬಂಗಾರದ ಸರದ ಅಂದಾಜು ಮೌಲ್ಯ 1 ಲಕ್ಷಕ್ಕೂ ಅಧಿಕ ಎನ್ನಲಾಗಿತ್ತು. ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ವಿಶೇಷ ತಂಡ ರಚಿಸಿದ ಪೊಲೀಸರು, ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಪಿಎಸ್‍ಐ ರಾಜಕುಮಾರ ಕಾರ್ಯಾಚರಣೆ ಸುಲಿಗೆ ಮಾಡಿದ ಚಿನ್ನದ ಸರಕ್ಕೆ ತೀವ್ರ ಶೋಧ ನಡೆಸಿ ಕಳ್ಳರನ್ನು ಬಂಧಿಸಿದ್ದು, ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*