ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಸರಕಾರಿ ಹುದ್ದೆಯಲ್ಲಿ ಅನುಕೂಲತೆಯೊಂದಿಗೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸೇವೆಯಲ್ಲಿ ಸೇವಾ ಅವಧಿ ಪೂರ್ಣಗೊಳಿಸಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ನಿವೃತ್ತರಾಗಿರುವ ಎಸ್.ಎಸ್.ಬಾಣಿಯವರು ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ತಾಲೂಕಾ ಕುರುಬ ಸಮಾಜ ನೌಕರರ ಸಂಘದ ಅಧ್ಯಕ್ಷ ಎಸ್.ಎಚ್.ಜೈನಾಪೂರ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಕನಕದಾಸ ಶಾಲೆಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಂಘದವತಿಯಿಂದ ಮಾಡುತ್ತಾ ಬಂದಿರುವ ನಿವೃತ್ತ ನೌಕರರಿಗೆ ಗೌರವ ಸೇವಾ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದ ಅವರು, ಬಾಣಿಯವರು ತಮ್ಮ ನೌಕರಿ ಸೇವೆಯೊಂದಿಗೆ ಸಮಾಜ ಸಂಘಟಿಸುವ ಕಾರ್ಯದಲ್ಲಿಯೂ ಮುಂಚಣಿಯಲ್ಲಿದ್ದರು. ಅಲ್ಲದೇ ತಮ್ಮ ಸೇವೆಯೊಂದಿಗೆ ಸಮಾಜದ ಯುವಕರಿಗೆ ಸದಾ ಸಮಾಜ ಏಳಿಗೆ ಬಗ್ಗೆ ತಿಳಿಸುತ್ತಾ ಸೇವೆಯೊಂದಿಗೆ ಸಮಾಜದ ಏಳಿಗೆ ಬಗ್ಗೆಯೂ ಚಿಂತನೆ ನಡೆಸಿ ಎಲ್ಲ ಯುವಕರಿಗೂ ಮಾದರಿಯಾಗಿದ್ದಾರೆ. ಇಂತಹ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕು ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎಸ್.ಎಸ್.ಬಾಣಿ ಅವರು, ಸರಕಾರಿ ಸೇವೆ, ಸಮಾಜದ ಸೇವೆಯಲ್ಲಿ ಕೆಲವೊಮ್ಮೆ ಹಿರಿಯರಿಗೆ ಕಹಿ ಮಾತುಗಳು ಕೇಳಿಬರುವುದು ಸಾಮಾನ್ಯ. ಆದರೆ ಸಮಾಜ ಏಳಿಗೆಗೆ ಕಹಿ ಮಾತುಗಳನ್ನು ಮರೆತು ಮುನ್ನೆಡೆದರೆ ಉತ್ತಮ ಸಮಾಜ ಕಟ್ಟಲು ಸಾದ್ಯವಾಗುತ್ತದೆ. ಇಂದಿನ ಯುವಕರು ತಮ್ಮ ಕಾರ್ಯಗಳೊಂದಿಗೆ ಸಮಾಜದ ಏಳಿಗೆಗೂ ಸಮಯವನ್ನು ನೀಡಿ ಶ್ರಮಿಸಬೇಕು ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಎಸ್.ಎನ್.ಲಕ್ಕಣ್ಣವರ, ಎನ್.ಎಸ್.ತುರಡಗಿ, ರವಿ ಜಗಲಿ ಮಾತನಾಡಿದರು.
ಸಲಹಾ ಸಮೀತಿ ಆಯ್ಕೆ:
ಮುದ್ದೇಬಿಹಾಳ ತಾಲೂಕಾ ಕುರುಬ ಸಮಾಜ ನೌಕರರ ಸಂಘದ ಹೆಚ್ಚಿನ ಏಳಿಗೆಗೆ ಅಧ್ಯಕ್ಷ ಎಸ್.ಎಚ್.ಜೈನಾಪೂರ ಅವರ ಅಧ್ಯಕ್ಷತೆಯಲ್ಲಿ ರವಿವಾರ ಸರ್ವ ಸದಸ್ಯರ ಸಭೆಯಲ್ಲಿ ಪಿ.ಬಿ.ಕಮರಿ, ಎನ್.ಎಸ್.ತುರಡಗಿ, ಎಸ್.ಎಸ್.ಬಾಣಿ, ವಾಯ್.ಬಿ.ನಾಯ್ಕೋಡಿ, ಎಸ್.ಎಂ.ಹಾಲ್ಯಾಳ, ಎಚ್.ಜಿ.ಗೌರೋಜಿ, ಎಸ್.ಜಿ.ಹರಿಂದ್ರಾಳ, ಬಿ.ಎಸ್.ಶೇಕಣ್ಣವರ, ವ್ಹಿ.ಎಸ್.ತೆಗ್ಗಿ, ಮಾಗಿ ಸೇರಿದಂತೆ ೧೧ ಜನ ಸಲಹಾ ಸಮೀತಿಯನ್ನು ರಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಚ್.ನಾಡಗರಬೆಟ್ಟ, ಕೋಶಾಧ್ಯಕ್ಷ ಎಂ.ಬಿ.ಹುಲಿಬೆಂಚಿ, ಸಹ ಕಾರ್ಯದರ್ಶಿ ಪಿ.ಸಿ.ಹಡಗಿನಾಳ, ಜಂಟಿ ಕಾರ್ಯದರ್ಶಿ ಎಸ್.ಎಸ್.ಮೇಟಿ, ಜಿ.ಜಿ.ಮುರಾಳ, ಜಿ.ಸಿ.ಜೋಲಗುಡ್ಡ, ಎಸ್.ಕೆ.ಹರನಾಳ, ರೇಖಾ ಗಂಗಣ್ಣವರ, ಎಸ್.ಎಂ.ಹಾಲ್ಯಾಳ, ವ್ಹಿ.ಎಚ್.ಕಿಲಾರಟ್ಟಿ, ಎಚ್.ಎನ್.ನಾಗಾವಿ, ಬಸವರಾಜ ಗೊರಗುಂಡಿ, ಎಮ.ಎಸ್.ಗುರುವಿನ, ಬಿ.ಎನ್.ದೊಡಮನಿ, ಎನ್.ಬಿ.ನಾವದಗಿ ಸೇರಿದಂತೆ ಕುರುಬ ಸಮಾಜದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.
Be the first to comment