ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ಪುರಸಭೆಯ ನಾಮನಿರ್ದೇಶಿತ ಸದಸ್ಯರು, ಬಿಜೆಪಿ ದುರೀಣರು, ಶಾಸಕರ ಆಪ್ತರು, ಮಾರುತಿ ನಗರ ಬಡಾವಣೆಯ ಕ್ರಿಯಾಶೀಲ ಮುಖಂಡರು ಆಗಿದ್ದ ಶ್ರೀ ಮನೋಹರ ತುಪ್ಪದ(69) ಗುರುವಾರ ನಿಧನರಾದರು. ಮೃತರರಿಗೆ ಪತ್ನಿ, ಇಬ್ಬರು ಗಂಡು ಓರ್ವ ಹೆಣ್ಣು ಮಕ್ಕಳಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಗುರುವಾರ ಸಂಜೆ 4 ಗಂಟೆಗೆ ಮುದ್ದೇಬಿಹಾಳದಲ್ಲಿ ನೆರವೇರಲಿದೆ.
ಸಂತಾಪ:
ಮುದ್ದೇಬಿಹಾಳ ಪಟ್ಟಣದ ಅಜಾತ ಶತ್ರು ಎಂದೇ ಹೇಳಲಾಗುತಿದ್ದ ಮನೋಹರ ತುಪ್ಪದ ಅಗಲಿಕೆಗೆ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರದೇವರು, ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವ ಸಿ. ಎಸ್. ನಾಡಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ, ನಾಗರಾಭಿರುದ್ಧಿ ಯುವ ಹೋರಾಟ ವೇಧಿಕೆ ಸಂಚಾಲಕ ಬಸವರಾಜ ನಂದಿಕೇಶ್ವರಮಠ, ಆರ್. ಎಂ. ಕೆ. ಟ್ರಸ್ಟ್ ಉಪಾಧ್ಯಕ್ಷ ರಮೇಶ ಕೆಂದೂಳಿ, ಕಾರ್ಯದರ್ಶಿ ಶಿವರಾಜ ಮಳಿಮಠ, ರಾಜಶೇಖರ ಹೊಳಿ, ಪುನೀತಾ ಹಿಪ್ಪರಗಿ ಅನೇಕರು ಸಂತಾಪ ಸೂಚಿಸಿದ್ದಾರೆ.
Be the first to comment