ರಾಜ್ಯ ಸುದ್ದಿಗಳು
ಬೆಂಗಳೂರು:
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೇಂದ್ರ ಕಛೇರಿ, ನವದೆಹಲಿ ಇವರ ನೆರವಿನಿಂದ ಕರ್ನಾಟಕ ರಾಜ್ಯದಲ್ಲಿನ ಆಕ್ಸಿಜನ್ ಕೊರತೆಯನ್ನು ತಗ್ಗಿಸುವ ಸಲುವಾಗಿ, ರೆಡ್ ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯು ಬಹರೆನ್ ರಾಷ್ಟ್ರದ BDFRMS ಆಸ್ಪತ್ರೆಯಿಂದ ಇಂದು ಮಂಗಳೂರು ಬಂದರಿನಲ್ಲಿ 40 ಮೆಟ್ರಿಕ್ ಟನ್ ನ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ಸ್ ಗಳನ್ನು ಭಾರತದ ನೌಕಾಪಡೆಯ ಐ.ಎನ್.ಎಸ್. ತಲವಾರ್ ಮೂಲಕ ನಿನ್ನೆ ಮಂಗಳೂರು ಬಂದರಿನಲ್ಲಿ ಸ್ವೀಕರಿಸಲಾಯಿತು.
ರೆಡ್ ಕ್ರಾಸ್ ಮಂಗಳೂರ ಜಿಲ್ಲಾ ಶಾಖೆಯು ಕೋವಿಡ್ -19 ತುರ್ತು ಸಂದರ್ಭದಲ್ಲಿ ಬಳಸುವ ನಿಟ್ಟಿನಲ್ಲಿ ಸ್ವೀಕರಿಸಿದ 40 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರ ಮಾಡಲಾಯಿತು. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಭಾರತೀಯ ತೈಲ ನಿಗಮದ ಸಹಾಯದಿಂದ ಒದಗಿಸಲಾಗುವುದು.
Be the first to comment