ಜಿಲ್ಲಾ ಸುದ್ದಿಗಳು
ಬಳ್ಳಾರಿ:
ಜಿಲ್ಲೆಯ ಕೂಡ್ಲಿಗಿ ತಹಶಿಲ್ದಾರರವರ ಕಚೇರಿಯಲ್ಲಿ, ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ,
ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆ ಜರುಗಿತು.ಕೊರೊನಾ ಎರೆಡನೇ ಅಲೆ ಸೋಂಕಿನ ನಿಯತ್ರಿಸುವ ಕಾರ್ಯದಲ್ಲಿ,ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಇತರೆ ನಿಯೋಜಿತ ಇಲಾಖಾಧಿಕಾರಿಗಳು ಕೈಜೋಡಿಸಬೇಕು ಎಂದು ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ತಿಳಿಸಿದರು.
ಸರ್ಕಾರ ಕೋವಿಡ್19 ಎರೆಡನೇ ಅಲೆಯ ನಿಯಂತ್ರಣಕ್ಕಾಗಿ, ಜಿಲ್ಲಾಡಳಿತ ನಿರ್ಧೇಶನದಂತೆ ಸಾಕಷ್ಟು ಕ್ರಮಗಳನ್ನ ಜಾರಿಗೆ ತರಲಾಗಿದೆ.ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು,ಸೋಂಕು ಹರಡುವಿಕೆ ನಿಯಂತ್ರಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದ್ದರು.
ಕೊರೊನಾ ಸೋಂಕಿತರ ಯೋಗಕ್ಷೇಮಕ್ಕಾಗಿ ಹಾಗೂ ಅವರಿಂದಾಗಬಹುದಾದ ಅಚಾತೂರ್ಯಗಳನ್ನ ನಿಯಂತ್ರಿಸಲು ಮತ್ತು ಇತರೆ ಮಾಹಿತಿ ನೆರವಿಗಾಗಿ ಆರೋಗ್ಯ ಇಲಾಖೆಯಿಂದ ಹೊಮ್ ಐಸುಲೇಷನ್ ಆಪ್ ಸೇರಿದಂತೆ. ಇತರೆ ಆಪ್ ಗಳನ್ನು ಅಭಿವೃದ್ಧಿಗೊಳಿಸಿ ಚಾಲ್ತಿಗೆ ತರಲಾಗಿದೆ.ಅವುಗಳಿಂದ ಸೋಂಕಿತರ ಕಾರ್ಯವೈಕರಿ ಹಾಗೂ ಟಾಸ್ಕ್ ಪೋರ್ಸ್ ನ ಕಾರ್ಯವೈಕರಿಯ ಮಾಹಿತಿ ಲಭ್ಯವಾಗಲಿದೆ,ತಾಲೂಕಿನಲ್ಲಿ ಕೋವಿಡ್ 19ಸೋಂಕು ಸಂಪೂರ್ಣ ನಿವಾರಣೆ ಯಾಗುವವರೆಗೆ ಹಾಗೂ ಜಿಲ್ಲಾಢಳಿತದ ಸೂಚನೆ ಮೇರೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ. ಪ್ರತಿದಿನದ ಎಲ್ಲಾ ಸಮಯದಲ್ಲೂ ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆಯೊಂದಿಗೆ,ಟಾಸ್ಕ್ ಪೋರ್ಸ್ ಸಮಿತಿ ಜಾಗೃತಿ ವಹಿಸಿ ಕಾರ್ಯನಿರ್ವಹಿಸಬೇಕಾಗಿದೆ. ಜೊತೆಗೆ ಎಲ್ಲಾ ಸಿಬ್ಬಂದಿಗಳು ವೈಯ್ಯಕ್ತಿಕ ಆರೋಗ್ಯ ಕಡೆ ನಿಗಾ ವಹಿಸಿ ಜಾಗ್ರತೆಯಿಂದ ಇರಲು ಅವರು ತಿಳಿಸಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲೂಕಿನ ಉಪ ಆರೋಗ್ಯ ಕೇಂದ್ರಗಳಲ್ಲಿ,ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ.ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ವೈದ್ಯರ ಹಾಗೂ ಸಿಬ್ಬಂದಿ ಅನಿವಾರ್ಯವಾಗಿದೆ, ಅದಕ್ಕಾಗಿ ತುರ್ತಾಗಿ ಅಗತ್ಯ ವೈದ್ಯರನ್ನ ಸಿಬ್ಬಂದಿಯನ್ನ ನಿಯೋಜಿಸುವಂತೆ ತಾವು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.
ಸಿಪಿಐ ವಸಂತ ಅಸೋದೆ ತಾಲೂಕು ಆರೋಗ್ಯಾಧಿಕಾರಿ ಡಾ,ಷಣ್ಮುಖ ನಾಯ್ಕ,ಅರೋಗ್ಯಾಧಿಕಾರಿ ಡಾ,ವಿನಯ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಧರ್ಮಸ್ಥಳ ಸಂಘದಿಂದ ವಾಹನ ನೆರವು- ಕೋವಿಡ್ ಎರೆಡನೇ ಅಲೆಯ ವಿರುದ್ಧದ ತಾಲೂಕಾಡಳಿತದ ಯುದ್ಧದಲ್ಲಿ, ತಾಲೂಕಾಡಳಿತಕ್ಕೆ ಶ್ರೀಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಸಂಘದ ಕೂಡ್ಲಿಗಿ ತಾಲೂಕ ಸಮಿತಿಯು.ತಮ್ಮ ವಾಹನವನ್ನ ತಾಲೂಕು ಆಡಳಿತದ ಸೇವೆಗೆ ನೆರವಾಗಲೆಂದು ನೀಡಿದೆ.
ಕೋವಿಡ್ 19ಎರೆಡನೇ ಅಲೆ ಸಂಪೂರ್ಣ ನಿವಾರಣೆಯಾಗೋವರೆಗೆ
ಸಂಘದ ವಾಹನ,ತಾತ್ಕಾಲಿಕವಾಗಿ ತಾಲೂಕಾಡಳಿತದ ಸುಪರ್ಧಿಗೆ ನೀಡಲು ನಿರ್ಧರಿಸಿದ್ದು. ಸಂಘದ ಅಧಿಕಾರಿಗಳು ತಮ್ಮ ಸಂಘದ ಉನ್ನತಾಧಿಕಾರಿಗಳ ನಿರ್ಧೇಶನದಂತೆ ತಮ್ಮ ವಾಹನವನ್ನು ಸಂಘದ ಅಧಿಕಾರಿಗಳು,ತಮ್ಮ ವಾಹನವನ್ನು ತಾತ್ಕಾಲಿಕ ನೆರವಿಗೆ ತಹಶಿಲ್ದಾರರವರ ಸುಪರ್ಧಿಗೆ ಒಪ್ಪಿಸಿದರು.ಕೋವಿಡ್ ಅಲೆ ಸಂಪೂರ್ಣ ನಿವಾರಣೆಯಾಗೋ ವರೆಗೂ ಈ ವಾಹನ,ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖಾ ಸುಪರ್ಧಿಯಲ್ಲಿದ್ದು ಕೋರೊನಾ ವಾರಿಯರ್ಸ್ ರ ಸೇವೆಗಾಗಿ ಬಳಸಲಾಗುತ್ತದೆ.
Be the first to comment