ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಡಿ.13:
ದೇಶಕ್ಕಾಗಿ ಹಗಳಿರುಲು ಎನ್ನದೇ ತಮ್ಮ ಪ್ರಾನವನ್ನೆ ಪಣಕ್ಕಿಟ್ಟು ಹೋರಾಡುವ ಸೈನಿಕರಿಗೆ ಹಾಗೂ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಸಮರ್ಪಿಸಿದ ವೀರರಿಗೆ ಮತ್ತು ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಣೆ ಮಾಡಲು ಮುದ್ದೇಬಿಹಾಳ ನಗರಾಬೀವೃದ್ಧಿ ಸೇರಿದಂತೆ ವಿವಿಧ ಸಂಘಗಳಿಂದ ಇಂದು ಸಂಜೆ 5.30ಕ್ಕೆ ಸೈನಿಕ ಕಾರ್ತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ದೇಶದ ವೀರರಿಗೆ ಹಾಗೂ ಸ್ವತಂತ್ರ್ಯ ಸಂಗ್ರಾಮಕಾರರಿಗೆ ಕೇವಲ ದೇಶದ ಧ್ವಜಾರೀಹದಂದು ಗೌರವಿರುವ ಕಾರ್ಯಕ್ಕೆ ಮುದ್ದೇಬಿಹಾಳ ಪಟ್ಟಣದ ಯುವಕ ಮಂಡಳಿಯವರು ಕಾರ್ತಿಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಿದೆ.
ಹೃದಯ ಪೂರ್ವಕ ಸ್ವಾಗತ:
ದೇಶದ ವೀರರಿಗೆ ಗೌರವ ಸಮರ್ಪಣೆಯಾಗಿ ಹಮ್ಮಿಕೊಳ್ಳಲಾಗಿರುವ ಸೈನಿಕ ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಬರುವವರಿಗೆ ಮುದ್ದೇಬಿಹಾಳ ಭಗೀರಥ ಎಂದೇ ಖ್ಯಾತಿಯಾಗಿರುವ ಬಸವರಾಜ ನಂದಿಕೇಶ್ವರಮಠ ಅವರು ಹೃದಯ ಪೂರ್ವಕವಾದ ಸ್ವಾಗತವನ್ನು ಬಯಸಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ಹಣತೆ, ಬತ್ತಿ, ಎಣ್ಣೆತೆಗೆದುಕೊಂಡು ಬಂದು ಇಲ್ಲಿನ ಸೈನಿಕ ಮೈದಾನದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಗೌರವ ಸಮರ್ಪಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
Be the first to comment