ಮುದ್ದೇಬಿಹಾಳ ತಾಲೂಕಿನ ಯರಝರಿ ಪಂಚಾಯತಿಯಲ್ಲಿ ಅವಿರೋಧ ಆಯ್ಕೆ ವಿರೋಧಿಸಿದ ಯುವಕರ ಪಡೆ: 10ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರೇವಣಸಿದ್ದಪ್ಪ ಸಾಬಣ್ಣ ಗುರಿಕಾರ

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ ಡಿ.10:

ಕಳೆದ 15 ವರ್ಷಗಳಿಂದಲೂ ಅವಿರೋಧವಾಗಿ ಆಯ್ಕೆಯಾಗುತ್ತಾ ಬಂದಿದ್ದ ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮ ಪಂಚಾಯತಿಯ ಯರಝರಿ ಕ್ಷೇತ್ರಕ್ಕೆ ಯುವಕರ ಬೆಂಬಲದಿಂದ ನಾಮಪತ್ರ ನೀಡುವಂತಾಗಿದೆ.
ಯರಝರಿ ಗ್ರಾಮ ಪಂಚಾಯತಿಯ ಯರಝರಿ ಕ್ಷೇತ್ರದಲ್ಲಿ ಗ್ರಾಮ ಹಿರಿಯ ಮುಖಂಡರು ಸರ್ವ ಸಭೆಯನ್ನು ಕರೆದು ಚುನಾವಣೆಯಾಗುವುದನ್ನು ನಿಲ್ಲಿಸಿ ಓರ್ವ ವ್ಯಕ್ತಿಯನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಾ ಬಂದಿದ್ದರು. ಆದರೆ ಆಯ್ಕೆಯಾದಂತಹ ವ್ಯಕ್ತಿಯು ತನ್ನ ಸದಸ್ಯತ್ವದ ಅವಧಿಯಲ್ಲಿ ಗ್ರಾಮದ ಗುರು ಹಿರಿಯರಲ್ಲಿ ನೀಡಿದ ಗ್ರಾಮ ಅಭಿವೃದ್ಧಿ ಭರವಸೆಗಳನ್ನು ಕೈಬಿಟ್ಟ ಹಿನ್ನೆಲೆ 2020ರ ಚುನಾವಣೆಯಲ್ಲಿ ಗ್ರಾಮದ ಯುವಕರು ಅವಿರೋಧ ಆಯ್ಕೆಯನ್ನು ವಿರೋಧಿಸಿ ಚುನಾವಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು.

ಪ್ರಥಮ ನಾಮಪತ್ರ ಸಲ್ಲಿಸಿದ ಗುರಿಕಾರ:
೨೦೧೫ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ರೇವಣಸಿದ್ದಪ್ಪ ಸಾಬಣ್ಣ ಗುರಿಕಾರ ಅವರು ಈಗಾಗಲೇ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಅವರನ್ನೇ ಸದಸ್ಯರನ್ನಾಗಿಸಲು ಗ್ರಾಮದ ಯುವಕ ಪಡೆ ಮುಂದಾಗಿದ್ದು. ಕಳೆದ ೧೫ ವರ್ಷದಿಂದ ಯರಝರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ರೇವಣಸಿದ್ದಪ್ಪ ಗುರಿಕಾರ ಅವರು ಪ್ರಥಮ ನಾಮಪತ್ರವನ್ನು ಸಲ್ಲಿಸಿದ್ದಾರೆ.


                           ರೇವಣಸಿದ್ದಪ್ಪ ಸಾಬಣ್ಣ ಗುರಿಕಾರ

 

 

 

 

 

ಒಟ್ಟು ೧೫ ನಾಮಪತ್ರಿಗಳು ಸಲ್ಲಿಕೆ:
ಯರಝರಿ ಗ್ರಾಮಪಂಚಾಯತಿ ವ್ಯಾಪ್ತಿಯ ಯರಝರಿ ಕ್ಷೇತ್ರದ ಸಾಮಾನ್ಯ ಮೀಸಲಾಯಿತಿಯಲ್ಲಿ ೩, ಎಸ್‌ಸಿ ಮೀಸಲಾಯಿತಿಯಲ್ಲಿ ೧, ಹಂಡರಗಲ್ಲ ಕ್ಷೇತ್ರದಲ್ಲಿ ೫, ಚಿರ್ಚಿನಕಲ್ಲ ಕ್ಷೇತ್ರದಲ್ಲಿ ೧, ಮುದೂರ ಕ್ಷೇತ್ರದಲ್ಲಿ ೩ ನಾಮಪತ್ರಗಳು ಸಲ್ಲಿಕೆಯಾಗಿದ್ದು ಡಿ.೧೧ ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಎಂದು ಚುನಾವಣಾಧಿಕಾರಿ ಎ.ಆರ್.ಪಾತ್ರೋಟ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*