ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಡಿ.10:
ಗ್ರಾಮೀಣ ಮಟ್ಟದಲ್ಲಿ ಡಿ.೨೨ ರಂದು ಶುರುವಾಗುವ ಪಂಚಾಯತಿ ಫೈಟ್‌ಗೆ ಮುದ್ದೇಬಿಹಾಳ ತಾಲೂಕಾ ಚುನಾವಣಾಧಿಕಾರಿಗಳು ಮುದ್ದೇಬಿಹಾಳ ತಾಲೂಕಿನ ೨೧ ಗ್ರಾಪಂಗಳಲ್ಲಿ ೨೦ ಪಂಚಾಯತಿಗಳಿಗೆ ನಡೆಯಲಿರುವ ಚುನಾವಣೆಗೆ ಸಕಲ ಸಿದ್ದತೆಯನ್ನು ಮಾಡಿಕೊಂಡು ಸಜ್ಜಾಗಿದ್ದಾರೆ.
ಹೌದು, ಚುನಾವಣಾ ರಂಗದಲ್ಲಿ ಯಾವುದೇ ಪಕ್ಷವಿಲ್ಲದೇ ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯು ಸಾಕಷ್ಟು ಕುತುಹಲಕಾರಿಯಾಗಿರುತ್ತದೆ. ಅಲ್ಲದೇ ಸಾಕಷ್ಟು ಪಂಚಾಯತಿಗಳನ್ನು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನಾಗಿಸಿ ಅವುಗಳಿಗೆ ಸಕಲ ಭದ್ರತೆಯನ್ನು ನೀಡಬೇಕಾಗುತ್ತದೆ. ಇದಕ್ಕೆ ತಾಲೂಕಾ ಮಟ್ಟದ ಚುನಾವಣಾಧಿಕಾರಿಗಳು ವಿವಿಧ ಕ್ರಮಗಳನ್ನು ಕೈಗೊಂಡಿದ್ದಾರೆ.
ತಾಲೂಕಿನಲ್ಲಿ ಒಟ್ಟೂ ೧೮ ಅತಿಸೂಕ್ಷ್ಮಹಗೂ ೪೨ ಸೂಕ್ಷ್ಮಭೂತಗಳು:
ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ಪಂಚಾಯತಿಯಲ್ಲಿ ೨ ಅತಿಸೂಕ್ಷ್ಮ, ೧ ಸೂಕ್ಷ್ಮ ಹಾಗೂ ೪ ಸಾಧಾರಣಾ ಮತಗಟ್ಟೆಗಳು, ಢವಳಗಿ ಪಂಚಾಯತಿಯಲ್ಲಿ ೧ ಅತಿ ಸೂಕ್ಷ್ಮ, ೪ ಸೂಕ್ಷ್ಮಹಾಗೂ ೧ ಸಾಧಾರಣೆ, ರೂಢಗಿ ಪಂಚಾಯತಿಯಲ್ಲಿ ೨ ಸೂಕ್ಷ್ಮಹಾಗೂ ೩ ಸಾಧಾರಣಾ, ಬಸರಕೋಡ ಪಂಚಾಯತಿಲ್ಲಿ ೧ ಅತಿ ಸೂಕ್ಷ್ಮಹಾಗೂ ೪ ಸಾಧಾರಣಾ, ಬಿದರಕುಂದಿ ಪಂಚಾಯತಿಯಲ್ಲಿ ೩ ಸೂಕ್ಷ್ಮ ಹಾಗೂ ೨ ಸಾಧಾರಣಾ, ಕುಂಟೋಜಿ ಪಂಚಾಯತಿಯಲ್ಲಿ ೨ ಸೂಕ್ಷ್ಮ ಹಾಗೂ ೫ ಸಾಧಾರಣಾ, ಅಡವಿ ಸೋಮನಾಳ ಪಂಚಾಯತಿಯಲ್ಲಿ ೨ ಅತಿ ಸೂಕ್ಷ್ಮ, ೧ ಸೂಕ್ಷ್ಮ ಹಾಗೂ ೩ ಸಾಧಾರಣಾ, ಕವಡಿಮಟ್ಟಿ ಪಂಚಾಯತಿಯಲ್ಲಿ ೧ ಅತಿ ಸೂಕ್ಷ್ಮ, ೧ ಸೂಕ್ಷ್ಮ ಹಾಗೂ ೪ ಸಾಧಾರಣಾ, ಹಡಲಗೇರಿ ಪಂಚಾಯತಿಯಲ್ಲಿ ೧ ಅತಿಸೂಕ್ಷ್ಮ, ೩ ಸೂಕ್ಷ್ಮ ಹಾಗೂ ೨ ಸಾಧಾರಣಾ, ಹುಲ್ಲೂರ ಪಂಚಾಯತಿಯಲ್ಲಿ ೧ ಅತಿಸೂಕ್ಷ್ಮ, ೩ ಸೂಕ್ಷ್ಮಹಾಗೂ ೪ ಸಾಧಾರಣಾ, ಕಾಳಗಿ ಪಂಚಾಯತಿಯಲ್ಲಿ ೧ ಅತಿಸೂಕ್ಷ್ಮ, ೩ ಸೂಕ್ಷ್ಮ ಹಾಗೂ ೧ ಸಾಧಾರಣಾ, ಯರಝರಿ ಪಂಚಾಯತಿಯಲ್ಲಿ ೧ ಅತಿಸೂಕ್ಷ್ಮ, ೧ ಸೂಕ್ಷ್ಮಹಾಗೂ ೫ ಸಾಧಾರಣಾ, ಹಿರೇಮುರಾಳ ಪಂಚಾಯತಿಯಲ್ಲಿ ೨ ಅತಿಸೂಕ್ಷ್ಮ, ೩ ಸೂಕ್ಷ್ಮಹಾಗೂ ೩ ಸಾಧಾರಣಾ, ನಾಗಬೇನಾಳ ಪಂಚಾಯತಿಲ್ಲಿ ೨ ಅತಿಸೂಕ್ಷ್ಮ ಹಾಗೂ ೨ ಸಾಧಾರಣಾ, ಕೋಳೂರ ಪಂಚಾಯತಿಯಲ್ಲಿ ೨ ಅತಿಸೂಕ್ಷ್ಮ, ೩ ಸೂಕ್ಷ್ಮಹಾಗೂ ೩ ಸಾಧಾರಣಾ, ತಂಗಡಗಿ ಪಂಚಾಯತಿಯಲ್ಲಿ ೧ ಅತಿಸೂಕ್ಷ್ಮ, ೨ ಸೂಕ್ಷ್ಮ ಹಾಗೂ ೩ ಸಾಧಾರಣಾ, ಆಲೂರ ಪಂಚಾಯತಿಯಲ್ಲಿ ೩ ಸೂಕ್ಷ್ಮ ಹಾಗೂ ೫ ಸಾಧಾರಣಾ, ಬಿಜ್ಜೂರ ಪಂಚಾಯತಿಯಲ್ಲಿ ೨ ಸೂಕ್ಷ್ಮ ಹಾಗೂ ೩ ಸಾಧಾರಣಾ, ರಕ್ಕಸಗಿ ಪಂಚಾಯತಿಯಲ್ಲಿ ೩ ಸೂಕ್ಷ್ಮ ಹಾಗೂ ೩ ಸಾಧಾರಣಾ, ನಾಗರಬೆಟ್ಟ ಪಂಚಾಯತಿಯಲ್ಲಿ ೨ ಸೂಕ್ಷ್ಮ ಹಾಗೂ ೪ ಸಾಧಾರಣಾ ಸೇರಿ ಒಟ್ಟೂ ೨೦ ಪಂಚಾಯತಿಗಳಿದ್ದು ೧೨೮ ಭೂತಗಳನ್ನು ಮಾಡಲಾಗಿದೆ. ಇದರಲ್ಲಿ ೧೯ ಅತಿಸೂಕ್ಷ್ಮ ಮತಗಟ್ಟೆ, ೪೨ ಸೂಕ್ಷ್ಮ ಮತಗಟ್ಟೆ ಹಾಗೂ ೬೮ ಸಾಧಾರಣಾ ಮತಗಟ್ಟೆಗಳನ್ನಾಗಿ ಚುನಾವಣಾಧಿಕಾರಿಗಳು ವಿಂಗಡಿಸಲಾಗಿದೆ ಎಂದು ಪೊಲೀಸ ಇಲಾಖೆಯ ತಿಳಿಸಿದೆ.
ಪೊಲೀಸ್ ಇಲಾಖೆಯಿಂದ ಸೂಕ್ರ ಕ್ರಮಗಳು:
ಮುದ್ದೇಬಿಹಾಳ ತಾಲೂಕಿಗೆ ಒಳಪಡುವ ಪಂಚಾಯತಿಗಳಲ್ಲಿ ಮಹತ್ವದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ವಿಷಯಗಳಿಲ್ಲ. ಆದರೆ ಮುದ್ದೇಬಿಹಾಳ ಠಾಣಾ ವ್ಯಾಪ್ತಿಯಲ್ಲಿ ಒಟ್ಟೂ ೨೪ ನಾನ್ ಬೇಲೆಬ್ ವಾರಂಟಗಳು ಹಿಂದೆಯೇ ದಾಖಲಾಗಿವೆ. ಇನ್ನೂ ಮುದ್ದೇಬಿಹಾಳ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ೪೩ ಆಯುಧ ಪರವಾನಿಗೆದಾರರಿದ್ದು ೧೨ ಆಯುಧ ಪರವಾನಿಗೆ ನವೀಕರಣ ಮಾಡಿಸದ ಕಾರಣ ಅವುಗಳನ್ನು ಜಪ್ತಿ ಮಾಡಿ ಜಿಲ್ಲಾ ಆಯುಧಾಗಾರಕ್ಕೆ ಒಪ್ಪಿಸಲಾಗಿದೆ. ಇನ್ನೂಳಿದ ೪೪ ಆಯುಧಗಳ ಪರವಾಣಿಗೆ ಚಾಲ್ತಿಯಲ್ಲಿದ್ದು ತಾಲೂಕಿನಲ್ಲಿ ಅಕ್ರಮ ಆಯುಧಗಳಿಲ್ಲ. ಇನ್ನೂ ಸಾಮಾನ್ಯ ಅಪರಾಧಿಗಳ ಪಟ್ಟಿಯನ್ನು ಮಾಡಿದ್ದು ಅವರ ಮೇಲೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿಪಿಐ ಆನಂದ ವಾಘ್ಮೋಡೆ ತಿಳಿಸಿದ್ದಾರೆ.
2 ಗಡಿಜಿಲ್ಲಾ ಚೆಕ್‌ಪೋಸ್ಟ್ಗಳು:
ಮುದ್ದೇಬಿಹಾಳ ತಾಲೂಕಿನ ತಂಗಡಗಿ ಹಾಗೂ ನಾರಾಯಣಪೂರ ಹತ್ತಿರ ಕನಕದಾಸ ವೃತ್ತಗಳು ಗಡಿ ಜಿಲ್ಲಾ ಸ್ಥಳಗಳಾಗಿದ್ದು ಎರಡೂ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ಮಾಡಿ ಸೂಕ್ತ ಭದ್ರತೆ ಒದಗಿಸಲಾಗಿದೆ. ಚೆಕ್‌ಪೋಸ್ಟ್ ಮೂಲಕ ಹಾಯ್ದು ಹೋಗುವ ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಚುನವಣಾ ಆಯೋಗದ ಮಾದರಿ ನೀತಿ ಸಂಹಿತೆ ಹಾಗೂ ಅವುಗಳ ಅನುಸರಣೆ ಬಗ್ಗೆ ಮೇಲಾಧಿಕಾರಿಗಳಿಂದ ಬಂದೂಬಸ್ತಿ ಸ್ಕೀಂ ಅನುಮತಿ ಪಡೆದುಕೊಂಡು ಚುನಾವಣಾ ಬಂದೂಬಸ್ತಿ ಕರ್ತವ್ಯ ನಿರ್ವಹಣೆ ಮಾಡಲಾಗುವುದು. ಅಕ್ರಮ ವಸ್ತುಗಳ ಸಾಗಾಟಕ್ಕೆ ಒಳಗಾದ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಪೊಲೀಸ ಮೂಲಗಳು ತಿಳಿಸಿವೆ.
Be the first to comment