ಅರಣ್ಯ ಸಿಬ್ಬಂದಿಗಳ ದೌರ್ಜನ್ಯ: ಹೋರಾಟಗಾರರ ಆಕ್ರೋಶಕ್ಕೆ ಅಧಿಕಾರಿಗಳ ಸಭೆ ಕರೆಯಲು ನಿರ್ಧರಿಸಿದ ಉಪ-ವಿಭಾಗಾಧಿಕಾರಿ…!!!

ವರದಿ: ಕುಮಾರ್ ನಾಯ್ಕ್, ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ:

CHETAN KENDULI

ತಾಲೂಕಿನಾದ್ಯಂತ ಅರಣ್ಯ ಸಿಬ್ಬಂದಿಗಳಿಂದ ಅರಣ್ಯವಾಸಿಗಳ ಮೇಲೆ ಆಗುತ್ತಿರುವ ದೌರ್ಜನ್ಯ, ಅರಣ್ಯವಾಸಿಗಳ ವಿರುದ್ಧ ಆಗುತ್ತಿರುವ ಕಾನೂನು ಬಾಹಿರ ಕೃತ್ಯ ತುರ್ತಾಗಿ ನಿಯಂತ್ರಿಸಿ ಇಲ್ಲದಿದ್ದರೇ, ತೀವ್ರ ಬಹಿರಂಗ ಹೋರಾಟ ಮಾಡುವದು ಅನಿವಾರ್ಯವಾದಿತು ಎಂಬ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಗ್ರಹಕ್ಕೆ ಉಪ-ವಿಭಾಗಾಧಿಕಾರಿ ಮಮತಾ ದೇವಿ ಅವರು ಮುಂದಿನ 15 ದಿನಗಳಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು, ಅರಣ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯಲಾಗುವುದೆಂದು ಉಪ-ವಿಭಾಗಾಧಿಕಾರಿಗಳು ಹೇಳಿದರು.



ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ, ತಾಲೂಕಿನ ಅತಿಕ್ರಮಣದಾರರ ಸಮಸ್ಯೆಗಳ ಕುರಿತು ಇಂದು ಉಪ-ವಿಭಾಗಾಧಿಕಾರಿ ಕಛೇರಿ ಮುಂಭಾಗದಲ್ಲಿ ಹೋರಾಟಗಾರರೊಂದಿಗೆ ಚರ್ಚಿಸಲ್ಪಟ್ಟ ಸಂದರ್ಭದಲ್ಲಿ ಮೇಲಿನಂತೆ ಹೇಳಿದರು.

ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಭಟ್ಕಳ ಅತಿಕ್ರಮಣದಾರರು ದೌರ್ಜನ್ಯಕ್ಕೂ ಒಳಗಾಗಿದ್ದು, ಅರಣ್ಯಾಧಿಕಾರಿಗಳ ಕಾನೂನು ಬಾಹಿರ ಕೃತ್ಯವನ್ನು, ಕಾನೂನು ಅಂಶವನ್ನು ಬಿತ್ತರಿಸಿ ಅವರು ಮಾತನಾಡಿ, ಕಾನೂನು ಬಾಹಿರ ಕೃತ್ಯವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಅತಿಕ್ರಮಣ ಸಮಸ್ಯೆ ಬಡವರ ಸಮಸ್ಯೆ. ಅಧಿಕಾರಿಗಳು ಸಹನೆ ಮತ್ತು ಕಾನೂನು ಪ್ರಕಾರ ಕಾರ್ಯ ನಿರ್ವಹಿಸಬೇಕು. ಘರ್ಷಣೆ ಆಗದ ರೀತಿಯಲ್ಲಿ ಕಾರ್ಯ ನಿರ್ವಹಿಸುವದು ಅರಣ್ಯಾಧಿಕಾರಿಗಳ ಕರ್ತವ್ಯವೆಂದು ಸಾಮಾಜಿಕ ಹೋರಾಟಗಾರ ಮತ್ತು ತಂಜೀಂ ಪ್ರತಿನಿಧಿ ಇನಾಯತ ಸಾಬಂದ್ರಿ ಹೇಳಿದರು.

15 ದಿನಗಳ ಗಡುವು: ಅರಣ್ಯಾಧಿಕಾರಿಯೊಂದಿಗೆ ಭಟ್ಕಳ ತಾಲೂಕಿನಲ್ಲಿ ಜರಗುತ್ತಿರುವ ಸಮಸ್ಯೆಗಳ ಸ್ವಂದನೆಗೆ ಚರ್ಚಿಸಲು ಅವಕಾಶ ನೀಡಿ ಎಂದು ಇಲಾಖೆಗೆ ಐದು ಪತ್ರ ಬರೆದರೂ, ಇಂದಿನವರೆಗೆ ಸ್ಪಂದನೆ ಇಲ್ಲ. ಮುಂದಿನ 15 ದಿನಗಳಲ್ಲಿ ಅರಣ್ಯಾಧಿಕಾರಿಗಳೊಂದಿಗೆ ಸಮಸ್ಯೆಗಳ ಸ್ಪಂದನೆಗೆ ಚರ್ಚೆ ಏರ್ಪಡಿಸದಿದ್ದರೇ, ಉಪ-ವಿಭಾಗ ಕಛೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಜರುಗಿಸಲಾಗುವುದೆಂದು ಹೋರಾಟಗಾರರ ಪ್ರಮುಖರು ಈ ಸಂದರ್ಭದಲ್ಲಿ ಅಗ್ರಹಿಸಿದ್ದರು.

ತೀವ್ರ ಆಕ್ರೋಶ: ಅರಣ್ಯ ಸಿಬ್ಬಂದಿಗಳಿಂದ ಅರಣ್ಯವಾಸಿಗಳಿಗೆ ಕಾನೂನು ಬಾಹಿರವಾಗಿ ಕಿರುಕುಳ, ದೌರ್ಜನ್ಯದ ಕುರಿತು ಹೋರಾಟಗಾರರು ಉಪ-ವಿಭಾಗಾಧಿಕಾರಿಗಳಿಗೆ ವಿವರಿಸಿ, ಇತ್ತೀಚಿಗೆ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯಕ್ಕೆ ಒಳಗಾದ ಹೆಬಳೆ ಗ್ರಾಮದ ನಾಗಮ್ಮ ಶನಿಯಾರ ನಾಯ್ಕ ಅವರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡಲು ನಿಯೋಗವು ಮನವಿ ನೀಡಿತು. ಅಲ್ಲದೇ, ದೌರ್ಜನ್ಯದ ವಿವಿಧ ಘಟನೆಗಳನ್ನು ವಿವರಿಸುತ್ತ ಜಾಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಪರಿದಾಬಾನು, ಸಾಮಾಜಿಕ ಕಾರ್ಯಕರ್ತೆ ಭವಾನಿ ಶಂಕರ ನಾಯ್ಕ, ಗೀತಾ ಹನುಮಂತ ನಾಯ್ಕ, ಮಾಸ್ತ್ಯಮ್ಮ ನಾಯ್ಕ, ಜ್ಯೋತಿ ಮೋಗೇರ, ಸಂಕಮ್ಮ ಮೋಗೆರ, ಸಾವಿತ್ರಿ ನಾಯ್ಕ, ಪೂರ್ಣಿಮಾ ನಾಯ್ಕ, ಫಾತಿಮಾ ಮೆಹಬೂಬ, ಮಾಲತಿ ಮೋಗೆರ ಮುಂತಾದವರು ತೀವ್ರ ಆಕ್ರೋಶವನ್ನು ಹೊರಹಾಕಿದ್ದರು.

ಸಭೆಯಲ್ಲಿ ದೇವರಾಜ ಗೊಂಡ, ಕಯಮಸಾಬ, ಪಾಡುರಂಗ ನಾಯ್ಕ ಬೆಳಕೆ, ರಿಜವಾನ್ ಭಟ್ಕಳ, ತಾಲೂಕ ಪಂಚಾಯತ ಸದಸ್ಯ ವಿಷ್ಣು ದೇವಾಡಿಗ, ರಾಮಚಂದ್ರ ಆಚಾರಿ, ದೇವಿದಾಸ ನಾಯ್ಕ, ಷರತ್ ಪೂಜಾರಿ, ಮಂಜುನಾಥ ದೇವಾಡಿಗ, ಮನೋಹರ ನಾಯ್ಕ, ವೆಂಕಟೇಶ ನಾಯ್ಕ, ವಿನಾಯತುಲ್ಲಾ ಸಾಬಂದ್ರಿ, ಶಬ್ಬೀರ್ ಸಾಬ, ದೇವಿದಾಸ ಬೆಳಕೆ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*