ಜಿಲ್ಲಾ ಸುದ್ದಿಗಳು
ಭಟ್ಕಳ:
ಅ.28ರಂದು ಭಟ್ಕಳ ತಾಲ್ಲೂಕಿನ ಜಾಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ತಗ್ಗರಗೋಡನಲ್ಲಿ ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬುಧವಾರ ನಗರ ಠಾಣಾ ಪೊಲೀಸರು ಪತ್ತೆಹಚ್ಚಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಜಾಲಿ ಪಟ್ಟಣ ತಗ್ಗರಗೋಡ ನಿವಾಸಿ ಖಾಜಾ ಅಬ್ದುಲ್ ಸತ್ತಾರ (೨೯) ಬಂಧಿತ ಆರೋಪಿ. ಈತನು ವೃತ್ತಿಯಲ್ಲಿ ಗೌಂಡಿಯಾಗಿದ್ದನು. ಇವನು ಅ.೨೮ರಂದು ತಗ್ಗರಗೋಡ ಬೆಂಡೆಕಾನ ವ್ಯಾಪ್ತಿಯ ಹಮ್ಜಾ ಮಸೀದಿ ಹಿಂದುಗಡೆ ಬಾಗಿಲು ಹಾಕಿದ ಮನೆಗೆ ಹಗಲಿನಲ್ಲಿಯೇ ಕನ್ನ ಹಾಕಿ ಬಾಗಲು ಮುರಿದು ಒಳಹೊಕ್ಕಿದ್ದನು. ಬೆಡ ರೂಮಿನಲ್ಲಿದ್ದ ಅಲೈರಾ ಮುರಿದು ಅದರಲ್ಲಿದ್ದ ೩ಜೊತೆ ಕಿವಿ ಓಲೆ , ೨ ಉಂಗುರ, ೧ ನಕ್ಲೇಸ್,೧ ಬ್ರಾಸ ಲೈಟ್, ೧ ಬಂಗಾರದ ಬಳೆ ಒಟ್ಟೂ ೧೦೪ ಗ್ರಾಂ ತೂಕದ ಚಿನ್ನಾಭರಣ ಹಾಗೂ ಸಾಮಸಂಗ ಕಂಪನಿಯ ಮೊಬೈಲ್ ಸೇರಿದಂತೆ ಅಂದಾಜು ೫ ಲಕ್ಷ ೨೦ ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದ.
ಮನೆ ಮಾಲಿಕರ ದೂರನ್ನು ಆಧರಿಸಿ ಎಸ್.ಪಿ. ಶಿವಪ್ರಕಾಶ ದೇವರಾಜ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಎಸ್ ಬದ್ರೀನಾಥ್ ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಅವರ ಮಾರ್ಗದರ್ಶನದಲ್ಲಿ ಸಿಪಿಐ ದಿವಾಕರ, ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ಗಳಾದ ಸುಮಾ ಬಿ, ಮತ್ತು ಹನುಮಂತಪ್ಪ ಕುಡಗುಂಟಿ ಹಾಗೂ ಗ್ರಾಮೀಣ ಠಾಣೆ ಪಿ.ಎಸ್.ಐಗಳಾದ ಭರತಕುಮಾರ ವಿ, ರತ್ನಾ ಕುರಿ,ಭಟ್ಕಳ ಶಹರ ಠಾಣೆ ಎ.ಎಸ್.ಐ ಗಳಾದ ನವೀನ ಬೋರ್ಕರ್, ರಾಮಚಂದ್ರ ವೈದ್ಯ, ಸಿಬ್ಬಂದಿಯವರಾದ ದಿನೇಶ ನಾಯಕ, ಲೊಕೇಶ ಕತ್ತಿ, ಈರಣ್ಣ ಪೂಜಾರಿ, ವಿನಾಯಕ ಪಾಟೀಲ್, ನಾಗರಾಜ ಮೊಗೇರ, ನಾರಾಯಣ ನಾಯ್ಡ. ಮದರಸಾಬ ಚಿಕ್ಕೇರಿ, ಮಲ್ಲಿಕಾರ್ಜುನ ಉಟಗಿ, ಚಾಲಕರಾದ ದೇವರಾಜ ಮೊಗೇರ, ಸುರೇಶ ಕಾಂಟಾಕ್ಟರ್ ಸಿ.ಡಿ.ಆರ್ ವಿಭಾಗದ ಸಿಬ್ಬಂದಿಯವರಾದ ಸುಧೀರ ಮಡಿವಾಳ, ರಮೇಶ ನಾಯ್ಕ, ಉದಯ ಗುನಗಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಕಳುವು ಮಾಡಿ ತಲೆ ಮರೆಸಿಕೊಂಡ ಆರೋಪಿಯನ್ನು ಪತ್ತೆ ಮಾಡಿ ಅವನಿಂದ ಕಳುವು ಮಾಡಿದ ಅಂದಾಜು ೫ ಲಕ್ಷ ೨೦ ಸಾವಿರ ಮೌಲ್ಯದ ೧೦೪ ಗ್ರಾಂ ಚಿನ್ನ ಹಾಗೂ ೦೧ ಮೊಬೈಲ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Be the first to comment