ಶಾಸಕ ನಡಹಳ್ಳಿಗೆ ಸಚಿವ ಸ್ಥಾನ…? ಮುದ್ದೇಬಿಹಾಳ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ನಾಯಕನಿಗೆ ಸಚಿವಸ್ಥಾನಕ್ಕೆ ಒತ್ತಾಯ…!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಸೋಮವಾರ ಸಿಎಂ ಯಡಿಯೂರಪ್ಪನವರ ರಾಜಿನಾಮೆ ಅಂಗಿಕಾರವಾಗುತ್ತಿದ್ದಂತೆ ರಾಜ್ಯದಲ್ಲಿ ನೂತನ ಸಚಿವ ಸಂಪುಟ ದರ್ಜೆಯೂ ಮಾಡಲಾಗುತ್ತಿದ್ದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಸಚಿವ ಸ್ಥಾನ ಒದಗಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.
ಈಗಾಗಲೇ ಶಾಸಕ ನಡಹಳ್ಳಿ ಅವರು ಮುದ್ದೇಬಿಹಾಳ ಹಾಗೂ ದೇ.ಹಿಪ್ಪರಗಿ ಕ್ಷೇತ್ರಗಳ ರೈತರ ಪರ ನೀರಾವರಿಗೆ ಹೋರಾಟಕ್ಕೆ ಇಳಿದು ಯಶಸ್ವಿಯಾಗಿದ್ದಾರೆ. ಅಲ್ಲದೇ ಮುದ್ದೇಬಿಹಾಳ ಕ್ಷೇತ್ರದ ಹತ್ತಿರ ಆಲಮಟ್ಟಿ-ನಾರಾಯಣಪೂರ ಜಲಾಶಯಗಳಿದ್ದು ನಿರಾವರಿಯ ಬಗ್ಗೆ ಶಾಸಕ ನಡಹಳ್ಳಿ ಅವರಿಗೆ ಸಾಕಷ್ಟು ಅನುಭವಗಳಿವೆ. ನಡಹಳ್ಳಿ ಅವರಿಗೆ ಜಲ ಸಂಪನ್ಮೂಲ ಸಚಿವ ಖಾತೆ ಸಿಕ್ಕರೆ ಬರಗಾಲದ ಬೀಡು ಎಂದು ಹೆಸರುವಾಸಿಯಾಗಿರುವ ವಿಜಯಪುರ ಸಮಗ್ರ ನೀರಾವರಿ ಪ್ರದೇಶಯಾಗುವಲ್ಲಿ ಎರಡು ಮಾತಿಲ್ಲ ಎಂದು ಹೇಳಲಾಗುತ್ತಿದೆ.
ಕೆ.ಎಫ್.ಎಸ್.ಸಿ.ಎಸ್. ನಿಗಮ ಅಧ್ಯಕ್ಷರಾಗಿ ಯಶಸ್ವಿಯಾಗಿರುವ ಶಾಸಕ ನಡಹಳ್ಳಿ:
ಈಗಾಗಲೇ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷರಾಗಿ ಆಯ್ಕೆಯಾಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ರಾಜ್ಯದಲ್ಲಿ ಸಾಕಷ್ಟು ಜನ ಸೇವಾ ಕಾರ್ಯಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಅದರಂತೆ ರಾಜ್ಯದಲ್ಲಿ ಮಾಡಲಾಗುವ ನೂತನ ಸಚಿವ ಸಂಪುಟ ದರ್ಜೆಯಲ್ಲಿ ನಡಹಳ್ಳಿ ಅವರಿಗೆ ಸಚಿವ ಸ್ಥಾನ ಸಿಕ್ಕ ಸಮರ್ಥವಾಗಿ ನಿಭಾಯಿಸಿ ಯಶಸ್ವಿಯಾಗುತ್ತಾರೆ ಹಾಗೂ ಜಿಲ್ಲೆಯ ಅಭಿವೃದ್ಧಿಯಲ್ಲಿಯೂ ಹೆಚ್ಚಿನ ಪ್ರಗತಿಯಾಗುತ್ತದೆ.
ವಿಜಯಪುರಕ್ಕೆ ಬೇಕಿದೆ ಎರಡು ಸಚಿವಸ್ಥಾನಗಳು:
ಹಿಂದಿನ ಸರಕಾರದ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳುತ್ತಾ ಬರಲಾಗುತ್ತಿದೆ. ಮೊದಲೇ ಬರಗಾಳ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಗೆ ಕನಿಷ್ಠ ಎರಡು ಸಚಿವ ಸ್ಥಾನಗಳು ಸಿಕ್ಕರೆ ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೂ ಹೆಚ್ಚಿನ ಅನುಕೂಲವಾಗಲಿದೆ ಎನ್ನುವುದು ತಜ್ಞರ ಮಾತು.
ಸಾಮಾಜಿಕ ಜಾಲತಾಣದಲ್ಲಿ ಬುಗಿಲೆದ್ದ ಬೇಡಿಕೆ:
ಯಡಿಯೂರಪ್ಪನವರು ಸಿಎಂ ಸ್ಥಾನದ ರಾಜಿನಾಮೆ ಅಂಗಿಕಾರವಾಗುತ್ತಿದ್ದಂತೆ ಮುದ್ದೇಬಿಹಾಳ ಕ್ಷೇತ್ರದ ಎ.ಎಸ್.ಪಾಟೀಲ ನಡಹಳ್ಳಿ ಅಭಿಮಾನಿಗಳ ಬಳಗದಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡಹಳ್ಳಿ ಅವರು ಸಚಿವ ಸ್ಥಾನ ನೀಡುವಂತೆ ಸಾಕಷ್ಟು ಚರ್ಚೆಗಳು ನಡೆತ್ತಿದೆ.

Be the first to comment

Leave a Reply

Your email address will not be published.


*