ಜಿಲ್ಲಾ ಸುದ್ದಿಗಳು
ಭಟ್ಕಳ:
ತಾಲೂಕಾ ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಗುಮಾಸ್ತ ಕೃಷ್ಣಪ್ಪ ದುರ್ಗಪ್ಪ ನಾಯ್ಕ ಈತನ ಅವ್ಯವಹಾರ ಮತ್ತು ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಬೇರೊಬ್ಬರನ್ನು ಗೊತ್ತುಪಡಿಸಿ ಅವರ ಬಯೋಮ್ಯಾಟ್ರಿಕ್ ಲಾಗ್ ಇನ್ ಐಡಿ ಮಾಡಲು 2 ಬಾರಿ ಲಿಖಿತ ರೂಪದಲ್ಲಿ ಮನವಿ ನೀಡಿದ್ದರು ಕೂಡಾ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಂಡಳ್ಳಿ ಯುವಕ ಮಂಡಳದ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿ ಮುಂಡಳ್ಳಿ ಗ್ರಾಮದ ಯುವಕ ಮಂಡಳದ ಅಡಿಯಲ್ಲಿ ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿದ್ದು, ಈ ಹಿಂದಿನ ನ್ಯಾಯಬೆಲೆ ಅಂಗಡಿಯ ಗುಮಾಸ್ತನಾದ ಕೃಷ್ಣಪ್ಪ ನಾಯ್ಕ ಈತನ ಮೇಲೆ ಅವ್ಯವಹಾರ ಲೂಟಿ ಮಾಡಿದ ಆರೋಪ ಬಂದ ಕಾರಣ ಈತನನ್ನು ಬದಲಾಯಿಸಿ ಬೇರೊಬ್ಬರಾದ ಶ್ರೀಮತಿ ಹೇಮಾ ಮಾರುತಿ ನಾಯ್ಕ ಇವರನ್ನು ನೇಮಿಸಿದ್ದು, ಇವರ ಬಯೋಮ್ಯಾಟ್ರಿಕ್ ಮತ್ತು ಲಾಗ್ ಇನ್ ಐಡಿಯನ್ನು ಕ್ರಿಯೆಟ್ ಮಾಡಲು 1/09/2021 ಮತ್ತು 4/9/2021 ರಂದು 2 ಬಾರಿ ಲಿಖಿತ ರೂಪದಲ್ಲಿ ಮನವಿಯನ್ನು ತಹಶೀಲ್ದಾರರಿಗೆ ನೀಡಲಾಯಿತು. ಇದರಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಆದ್ದರಿಂದ ತಾವುಗಳು ಇದನ್ನು ಪರಿಶೀಲಿಸಿ ಶ್ರೀಘ್ರ ಕ್ರಮಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ. ಆದ್ದರಿಂದ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಮುಂಡಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜು ನಾಯ್ಕ ಮುಂಡಳ್ಳಿ ಅವರು ಮುಂಡಳ್ಳಿಯ ನ್ಯಾಯಬೆಲೆ ಅಂಗಡಿಯ ಗುಮಾಸ್ತರಾಗಿದ್ದ ಕೃಷ್ಣಪ್ಪ ದುರ್ಗಪ್ಪ ನಾಯ್ಕ ಇವರು ಅನೇಕ ಅವ್ಯವಹಾರವನ್ನು ನಡೆಸಿದ್ದಾರೆ. ಸುಮಾರು 40 ಲಕ್ಷದಷ್ಟು ಭ್ರಷ್ಟಾಚಾರ ನಡೆದಿರುತ್ತದೆ. ಈ ಹಿನ್ನೆಲೆಯಲ್ಲಿ ಕೃಷ್ಣಪ್ಪ ದುರ್ಗಪ್ಪ ನಾಯ್ಕ ಅವರನ್ನು ಗುಮಾಸ್ತ ಹುದ್ದೆಯನ್ನು ತೆಗೆದು ಬೇರೆಯವರನ್ನು ಆಯ್ಕೆ ಮಾಡಿರುತ್ತೇವೆ. ಈ ಹಿನ್ನೆಲೆಯಲ್ಲಿ, ನಾವು ಬಯೋಮ್ಯಾಟ್ರಿಕ್ ಲಾಗ್ ಇನ್ ಐಡಿಯನ್ನು ಬದಲಾವಣೆ ಮಾಡಿಕೊಡಲು ತಹಶಿಲ್ದಾರರಿಗೆ ಮನವಿ ಕೊಟ್ಟಿರುತ್ತೇವೆ. ಆದರೂ ಕೂಡಾ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವಕ ಸಂಘದ ಅಧ್ಯಕ್ಷರಾದ ಅರುಣ್ ನಾಯ್ಕ ಉಪಾಧ್ಯಕ್ಷರಾದ ಗುರುದೀಪ ನಾಯ್ಕ. ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ ದೇವಡಿಗ ಖಜಾಂಜಿ ನಾಗರಾಜ, ಹಾಗೂ ಮುಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ ನಾರಾಯಣ ನಾಯ್ಕ, ಮಾರುತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
Be the first to comment