ಜಿಲ್ಲಾ ಸುದ್ದಿಗಳು
ಹೊನ್ನಾವರ:
ಗ್ರಾಮ ಪಂಚಾಯತ್ ಸದಸ್ಯರಾದ ಗಣಪತಿ ನಾಯ್ಕ ಬಿಟಿಯವರು ತಮ್ಮ ವಾರ್ಡಿನಲ್ಲಿ ಬರುವ ಮೂರು ಶಾಲೆಯ 10 ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.
ಬಳ್ಕೂರ್ ನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಚಂದ್ರಲೇಖ ವೈದ್ಯ, ಮಹಾಲಕ್ಷ್ಮೀ ನಾಯ್ಕ, ಮೋಹನ್ ನಾಯ್ಕ, ಬಿ ಸುನೀತಾ, ಸರಸ್ವತಿ ನಾಯ್ಕ, ಸಿ ಆರ್ ಪಿ ಗಣಪಯ್ಯ ಗೌಡ, ಹೆಗ್ಗಾರ್ ಹಿರಿಯ ಪ್ರಾಥಮಿಕ ಶಾಲೆಯ ಎಮ್ ಎಸ್ ನಾಯ್ಕ, ನಳಿನಾಕ್ಷೀ ನಾಯ್ಕ, ಕೆಳಗಿನಕೇರಿಯ ಕಿರಿಯ ಪ್ರಾಥಮಿಕ ಶಾಲೆಯ ರೀಟಾ ಪರ್ನಾಂಡಿಸ್, ಸುಲೋಚನ ನಾಯ್ಕ, ಇವರನ್ನು ಸನ್ಮಾನಿಸಿ ಗೌರವಿಸಿದರು
.
ಗ್ರಾಮ ಪಂಚಾಯತ್ ಅಧ್ಯಕ್ಷ ಗಣಪತಿ ನಾಯ್ಕ ಬಿಟಿ ಮಾತನಾಡಿ ಶಿಕ್ಷಕರ ದಿನಾಚರಣೆಯ ನಿಮಿತ್ತ ಪ್ರತಿವರ್ಷ ಸಪ್ಟೆಂಬರ್ ತಿಂಗಳಿನಲ್ಲಿ ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಸಿಕೊಳ್ಳುವ ಸಲುವಾಗಿ ಶಿಕ್ಷಕರನ್ನು ಗೌರವಿಸುವ ತೀರ್ಮಾನಕ್ಕೆ ಬಂದಿದ್ದು ಕಳೆದ ವರ್ಷ ಬಳಕೂರ ಶಾಲೆಯ ಶಿಕ್ಷಕರನ್ನು ಗೌರವಿಸಿದ್ದೇವೆ ಈ ವರ್ಷ ಈ ಶಾಲೆಯ ಎಸ್.ಡಿ. ಎಮ್.ಸಿ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸೇರಿ ಕೆಳಗಿನ ಕೇರಿಯ ಹೆಗ್ಗಾರ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿದ್ದೇವೆ. ಮುಂದಿನ ವರ್ಷದಲ್ಲಿ ನಾವೆಲ್ಲರೂ ಸೇರಿ ಕ್ಲಸ್ಟರ್ ಮಟ್ಟದ 13 ಜನ ಶಿಕ್ಷಕರನ್ನು ಗೌರವಿಸುವ ಯೋಜನೆ ಇದೆ ಎಂದು ಹೇಳಿದರು. ಈ ವೇಳೆ ಗ್ರಾಮ ಪಂಚಾಯತ್ ಸದಸ್ಯ ಮಾರುತಿ ನಾಯ್ಕ, ಗೀತಾ ನಾಯ್ಕ, ಎಸ್ ಡಿ ಎಮ್ ಸಿ ಅಧ್ಯಕ್ಷ ಚಂದ್ರಹಾಸ್ ನಾಯ್ಕ, ಶಿವಾನಂದ ನಾಯ್ಕ, ಮಹೇಶ್ ನಾಯ್ಕ, ವಿಠ್ಠಲ ಭಟ್ ಉಪಸ್ತಿತರಿದ್ದರು.
Be the first to comment