ರಾಜ್ಯ ಸುದ್ದಿಗಳು
ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಶ್ರೀನಿವಾಸ ಸಮುದಾಯ ಭವನದಲ್ಲಿ ಕರ್ನಾಟಕ ಚಾಲಕರ ಒಕ್ಕೂಟದ ವತಿಯಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾರಂಭಿಸುವ ಮುನ್ನ ಎಲ್ಲಾ ಚಾಲಕರು ಗೊರಗುಂಟೆ ಪಾಳ್ಯ ಸಿಗ್ನಲ್ ನಿಂದ ಸಮುದಾಯ ಭವನವರೆಗೆ 1700-1900 ವಾಹನ ಚಾಲನೆ ಮಾಡುವ ಮೂಲಕ ಜಾಥಾ ನಡೆಸಲಾಯಿತು.ನಂತರ ಸಭಾ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಸಂಘದ ವಾರ್ಷಿಕ ಸಭಾ ನಡವಳಿಗಳು ನಡೆಸಲಾಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ಟ್ರಾವೆಲ್ಸ್ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ
ಮಾತನಾಡಿ, ಚಾಲಕರ ಒಕ್ಕೂಟ ಸಮಿತಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಈ ವೇದಿಕೆಯಲ್ಲಿ ಎಲ್ಲಾ ಚಾಲಕರಿಗೆ ಅಭಿನಂದಿಸುತ್ತೇನೆ. ಚಾಲಕರಿಗೆ ಈ ಕಾರ್ಯಕ್ರಮದಲ್ಲಿ ತಲಾ ಒಂದೊಂದು ಜೊತೆ ಬಟ್ಟೆ ವಿತರಿಸುವ ಕಾರ್ಯವನ್ನು ಮಾಡಲಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರಗಳು ಕಣ್ಣಿದ್ದು ಕುರುಡರಂತೆ ಕಿವಿಯಿದ್ದೂ ಕಿವುಡನಂತೆ ವರ್ತಿಸುತ್ತಿದೆ.
ಇದಕ್ಕೆಲ್ಲಾ ಕಾರಣವೆಂದರೆ ಎಲ್ಲೋ ಒಂದು ಕಡೆ ಪ್ರಜೆಗಳಾದ ನಾವುಗಳು ಎಡವಿದ್ದೇವೆ ಎಂಬಂತಾಗಿದೆ. ನಾವು ಸುಳ್ಳು ಸುಳ್ಳು ಕೇಳುತ್ತಾ ಬಂದಿದ್ದರಿಂದ ಈ ಪರಿಸ್ಥಿತಿ ಎದುರಿಸುವಂತಾಗಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಚಾಲಕರು ಕೆಲಸವಿಲ್ಲದೇ ಬೀದಿಗೆ ಬಂದಿದ್ದಾರೆ. ಕುಟುಂಬ ನಿರ್ವಹಿಸಲಾಗುತ್ತಿಲ್ಲ. ಹೀಗಿರುವಾಗ ಅರ್ಹ ಫಲಾನುಭವಿಗಳ ಕರಿಗೆ ಸಂಕಷ್ಟವನ್ನು ಅರಿತು, ಅವರಿಗೆ ಕೊಡಬೇಕಾದ ಸರ್ಕಾರಿ ಸೌಲಭ್ಯಗಳು ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಹೇಳಿದರು.
ರಾಜ್ಯ ಅಧ್ಯಕ್ಷರಾದ ನಾರಾಯಣಸ್ವಾಮಿ ಅವರು ಮಾತನಾಡಿ ಇಂದು ನಡೆದ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಚಾಲಕರ ಬಲವನ್ನು ಪ್ರದರ್ಶನ ಮಾಡುವ ಕಾರ್ಯ ನಡೆದಿದೆ ಮುಂದಿನ ದಿನಗಳಲ್ಲಿ ಚಾಲಕರಿಗೆ ಅವಶ್ಯಕತೆ ಇರುವ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಒದಗಿಸದೇ ಇದ್ದಲ್ಲಿ ಉಗ್ರ ಹೋರಾಟ ಖಂಡಿತ ಎಂದು ಎಚ್ಚರಿಸಿದರು
ಕೆಪಿಸಿಸಿ ಸದಸ್ಯರಾದ ಕೃಷ್ಣಮೂರ್ತಿರವರು ಮಾತನಾಡಿ ಚಾಲಕರ ಕಷ್ಟಕ್ಕೆ ಸ್ಪಂದಿಸದೆ ಬಿಜೆಪಿ ಸರ್ಕಾರವು ಸೋತಿದೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಚಾಲಕರ ಕಷ್ಟಗಳಿಗೆ ಸ್ಪಂದಿಸುವಂತಹ ಆಗಲಿ ಎಂದು ಆಶಿಸಿದರುಇದೇ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್ ರವರು ಈ ವೇದಿಕೆ ಮುಖಾಂತರ ರಾಜ್ಯ ಅಧ್ಯಕ್ಷರಾದ ನಾರಾಯಣಸ್ವಾಮಿ ರವರಿಗೆ ಹಾಗೂ ಎಲ್ಲಾ ಚಾಲಕರಿಗೆ ಅಭಿವೃದ್ಧಿ ಸುತ್ತೇನೆ ಕಾರಣ ಎಲ್ಲರೂ ಒಗ್ಗೂಡಿ ತಾಲೂಕಿನಲ್ಲಿ ಮಾಡಿರುವುದು ಸಂತೋಷ ತಂದುಕೊಟ್ಟಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಭಾಗಗಳಿಂದ ಬಂದಂತಹ ಚಾಲಕರು ಮತ್ತು ಜಿಲ್ಲಾಧ್ಯಕ್ಷರು ರಾಜ್ಯ ಸಮಿತಿಯ . ಪದಾಧಿಕಾರಿಗಳು ಉಪಸ್ಥಿತರಿದ್ದರು.ಜಗದೇವರಾವ್ ಚಲವಾದಿ (ಮುದ್ದೇಬಿಹಾಳ್ ) .ಸಿದ್ದು ಹೂಗಾರ್. ಹಲವಾರು ಮುಖ್ಯಸ್ಥರು ಇದ್ದರು.
Be the first to comment